ಬಂಕಾಪುರಗೆ ಅಭಿನಂದನೆ
ರಾಣಿಬೆನ್ನೂರು: 2012-13ನೇ ಸಾಲಿನ ರಾಜ್ಯ ಪ್ರತಿಭಾ ಪ್ರಶಸ್ತಿ ಪುರಷ್ಕೃತ ತಾಲೂಕಿನ ಹಿರೇಬಿದರಿ ಗ್ರಾಮದ ಸಹಿಪ್ರಾ ಶಾಲೆಯ ಸಹ ಶಿಕ್ಷಕಿ ಎಫ್.ಎಫ್. ಬಂಕಾಪುರ ಅವರನ್ನು ಶಾಲೆಯ ಶಿಕ್ಷಕರು ಅಭಿನಂದಿಸಿದರು. ಅಭಿನಂದನೆ ಸ್ವಿಕರಿಸಿ ಶಿಕ್ಷಕಿ ಎಫ್.ಎಫ್. ಬಂಕಾಪುರ ಮಾತನಾಡಿ, 15 ವರ್ಷಗಳಿಂದ ತಾಲೂಕಿನ ವಿವಿಧ ಗ್ರಾಮಗಳ ಶಾಲೆಗಳಲ್ಲಿ ಸೇವೆ ಸಲ್ಲಿಸಿರುವೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಪ್ರತಿಭೆಗೆ ಪ್ರೋತ್ಸಾಹಿಸಿರುವ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವ ಸಮಿತಿಯ ಸದಸ್ಯರಿಗೆ ಹಾಗೂ ವೃತ್ತಿ ಬಾಂಧವರಿಗೆ ಅಭಿನಂದಿಸುವುದಾಗಿ ಶಿಕ್ಷಕಿ ಬಂಕಾಪುರ ತಿಳಿಸಿದರು. ಪ್ರಧಾನ ಗುರು ಗೊರವರ, ಆರ್. ಎಚ್. ಕ್ಯಾತರ, ಎಸ್.ಎಸ್. ಕಾಯಕದ, ತಾಲೂಕಾ ಸಾಕ್ಷರ ಸೌರಭ ಸಮಿತಿ ಸಂಯೋಜಕ ಆರ್.ಡಿ. ಹೊಂಬರಡಿ, ಗಣೇಶ ಮಜ್ಜಿಗೇರಿ ಇದ್ದರು.
20ರಂದು ಕಾರ್ಯಾಗಾರ
ಹಾವೇರಿ: ಭಾರತ ಸರ್ಕಾರದ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ ಯೋಜನೆಯಡಿ ಕ್ಲಸ್ಟರ್ಗಳನ್ನು ಗುರುತಿಸುವ ಹಾಗೂ ಅಭಿವೃದ್ಧಿಪಡಿಸುವ ಯೋಜನೆ ಜಾರಿಯಲ್ಲಿದ್ದು, ಈ ಯೋಜನೆ ಅನ್ವಯ ಜಿಲ್ಲೆಯಲ್ಲಿರುವ ಒಂದೇ ತರದ ಕೈಗಾರಿಕೆಗಳು ಸಾಮೂಹಿಕವಾಗಿ ಎಲ್ಲರಿಗೂ ಉಪಯೋಗವಾಗುವಂತಹ ಮೂಲ ಸೌಕರ್ಯಗಳನ್ನು (ಉದಾ ಕಾಮನ್ ವರ್ಕ್ ಶೆಡ್, ಟೆಸ್ಟಿಂಗ್ ಇಕ್ಯೂಪಮೆಂಟ್ಸ್ ಇತ್ಯಾದಿ) ಹೊಂದಲು, ಅಭಿವೃದ್ಧಿ ಪಡಿಸಿಕೊಳ್ಳುವ ಅವಕಾಶವಿದೆ. ಇಂತಹ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಈ ಯೋಜನೆಯಡಿ ಶೇ. 80ರ ವರೆಗೆ ಸಹಾಯಧನ ಪಡೆಯುವ ಅವಕಾಶವಿದ್ದು, ಈ ಯೋಜನೆ ಕುರಿತು ವಿವರವಾದ ಮಾಹಿತಿ ಹಾಗೂ ರೂಪುರೇಷೆಗಳ ಕುರಿತು ಜೂನ್ 20ರಂದು ಬೆಳಗ್ಗೆ 11 ಗಂಟೆಗೆ ನಗರದ ತಾಲೂಕು ಪಂಚಾಯಿತಿ ಕಚೇರಿಯ ಸಾಮರ್ಥ್ಯ ಸೌಧದಲ್ಲಿ ಕಾರ್ಯಾಗಾರ ಜರುಗಲಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ವಿ.ಎಂ. ಸೂರಣಗಿ ತಿಳಿಸಿದ್ದಾರೆ. ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ ಜಂಟಿ ಸಹಭಾಗಿತ್ವದಲ್ಲಿ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ ಕೈಗಾರಿಕಾರಿಕೋದ್ಯಮಿಗಳು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ವಿನಂತಿಸಿದ್ದಾರೆ.
ಶಿಕ್ಷಣ ಕೊಡಿಸಿ: ಮಮತಾ
ಶಿಗ್ಗಾಂವಿ: ಪಾಲಕರು ತಮ್ಮ ಮಕ್ಕಳ ಚಲನ ವಲನ ಕುರಿತು ನಿಗಾ ಇಟ್ಟಾಗ ಬಾಲ ಕಾರ್ಮಿಕ ಪದ್ಧತಿ ಹೊಗಲಾಡಿಸಲು ಒಳ್ಳೆಯ ಶಿಕ್ಷಣ ಕೊಡಬೇಕು ಎಂದು ಜೆಎಂಎಫ್ಸಿ ಸಿವಿಲ್ ನ್ಯಾಯಾಧೀಶರಾದ ಮಮತಾ ಡಿ. ಹೇಳಿದರು. ಪಟ್ಟಣದ ಗುರುಭವನದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ತಮ್ಮ ಮಕ್ಕಳನ್ನು ಕಾರ್ಮಿಕ ಕೆಲಸಕ್ಕೆ ಕಳಿಸದೆ ಶಾಲೆಗೆ ಕಳಿಸಬೇಕು ಎಂದು ಹೇಳಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಕೆ. ಅಕ್ಕಿ, ತಹಸೀಲ್ದಾರ್ ಎಸ್.ಎ. ಚೌಗಳೆ, ಎಂ.ಎ. ಮುಲ್ಲಾ ಎಸ್.ಜಿ. ಕೂಡಲಗಿಮಠ, ನವೋದಯ ಶಿಕ್ಷಣ ಮತ್ತು ಪರಿಸರ ಸೇವಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಫ್. ಅಕ್ಕಿ ಮಾತನಾಡಿದರು. ಎಂ.ಎಚ್. ಹೊಂಗಲ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

