ಹಾವೇರಿ

ಇಂದಿನಿಂದ 17ನೇ ಸಾಂಸ್ಕೃತಿಕ ಸಮ್ಮೇಳನ

Published On :

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ ಹಾಗೂ ಹಾವೇರಿ ಕವಿವಿಯ ರಾಜೀವ್ ಗಾಂಧಿ ಸ್ನಾತಕೋತ್ತರ ಕೇಂದ್ರದ ಆಶ್ರಯದಲ್ಲಿ ಮಾ. 9 ಹಾಗೂ 10ರಂದು ಕೆರಿಮತ್ತಿಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ತಿರುಳ್ಗನ್ನಡ ನಾಡು, ಸಾಂಸ್ಕೃತಿಕ ಅವಲೋಕನ ವಿಷಯವಾಗಿ 17ನೇ ಸಾಂಸ್ಕೃತಿಕ ಸಮ್ಮೇಳನ ಜರುಗಲಿದೆ.
ಮಾಜಿ ಸಚಿವ ಸಿ.ಎಂ. ಉದಾಸಿ ಬೆಳಗ್ಗೆ 10.30ಕ್ಕೆ ಸಮ್ಮೇಳನ ಉದ್ಘಾಟಿಸಲಿದ್ದು, ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀನಿವಾಸ ರಿತ್ತಿ ಅಧ್ಯಕ್ಷತೆ ವಹಿಸುವರು. ಧಾರವಾಡ ಕವಿವಿ ಕುಲಪತಿ ಡಾ. ಎಚ್.ಬಿ. ವಾಲಿಕಾರ ಅಧ್ಯಕ್ಷತೆ ವಹಿಸಲಿದ್ದು, ಡೀನರು ಕಲಾನಿಕಾಯ ಕನ್ನಡ ಅಧ್ಯಯನಪೀಠದ ಅಧ್ಯಕ್ಷ ಡಾ. ಮಧು ವೆಂಕಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡುವರು. ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ. ಟಿ.ಎಂ. ಭಾಸ್ಕರ ಉಪಸ್ಥಿತರಿರುವರು. ಮಧ್ಯಾಹ್ನ 12ಕ್ಕೆ ತಿರುಳ್ಗನ್ನಡ ನಾಡು, ಐತಿಹಾಸಿಕ ಪರಿಸರ, ಮಧ್ಯಾಹ್ನ 2ಕ್ಕೆ ತಿರುಳ್ಗನ್ನಡ ನಾಡು, ಧಾರ್ಮಿಕ ಪರಿಸರ ವಿಷಯವಾಗಿ ಎರಡು ಗೋಷ್ಠಿಗಳು ಜರುಗಲಿವೆ. ಸಂಜೆ 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಾ. 10ರಂದು ಬೆಳಗ್ಗೆ 10ಕ್ಕೆ ತಿರುಳ್ಗನ್ನಡ ನಾಡು, ಭಾಷೆ, ಸಾಹಿತ್ಯ ಹಾಗೂ ಮಧ್ಯಾಹ್ನ 12ಕ್ಕೆ ತಿರುಳ್ಗನ್ನಡ ನಾಡು, ಸಾಮಾಜಿಕ ಪರಿಸರ ವಿಷಯವಾಗಿ ಎರಡು ಗೋಷ್ಠಿಗಳು ಜರುಗಲಿವೆ. ಮಧ್ಯಾಹ್ನ 3ಕ್ಕೆ ಜರುಗುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಧಾರವಾಡ ಕವಿವಿ ಕನ್ನಡ ಅಧ್ಯಯನಪೀಠದ ಅಧ್ಯಕ್ಷ ಡಾ. ಮಧು ವೆಂಕಾರೆಡ್ಡಿ ವಹಿಸುವರು. ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀನಿವಾಸ ರಿತ್ತಿ, ಮುಖ್ಯ ಅತಿಥಿಗಳಾಗಿ ಧಾರವಾಡ ಕವಿವಿ ಕುಲಸಚಿವ ಡಾ. ಜಿ.ಬಿ. ನಂದನ ಪಾಲ್ಗೊಳ್ಳುವರು.
ಮೈಸೂರು ವಿವಿ ಪ್ರಾಧ್ಯಾಪಕ ಡಾ. ಎನ್.ಎಸ್. ತಾರಾನಾಥ ಸಮಾರೋಪ ಭಾಷಣ ಮಾಡುವರೆಂದು ಸಮ್ಮೇಳನದ ಕಾರ್ಯಾಧ್ಯಕ್ಷ ಡಾ. ಜೆ.ಎಂ. ನಾಗಯ್ಯ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.