ಮಹಿಳಾ ರಕ್ಷಣೆ ಎಲ್ಲರ ಹೊಣೆ
ಬದುಕಿನ ಎಲ್ಲ ರಂಗಗಳಲ್ಲೂ ಸ್ತ್ರೀ ಸಮುದಾಯ ದುಡಿಯುತ್ತಿರುವುದನ್ನು ನೋಡಿದರೆ ಸ್ತ್ರೀ ಸರ್ವಶಕ್ತಳು ಎಂಬುದು ಅರಿವಿಗೆ ಬಾರದೇ ಇರದು. ಪುರುಷನಿಗೆ ಸಮಾನವಾಗಿ ದುಡಿಯುವ ಮಹಿಳೆಗೆ ರಕ್ಷಣೆ ಅವಶ್ಯಕವಾಗಿ ಬೇಕಾಗಿದೆ. ಪುರುಷರು ಇದನ್ನು ಮೊದಲು ಮನಗಾಣಬೇಕೆಂದು ಪಿಎಸ್ಐ ಶಿಲ್ಪಾ ನುಡಿದರು.
ತಾಲೂಕಿ ಕವಳಿಕುಪ್ಪಿ ಗ್ರಾಮದ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶುಕ್ರವಾರ ಜರುಗಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಹಿಳೆಯರು ಅದರಲ್ಲೂ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಶಿಕ್ಷಣ ಪಡೆಯಬೇಕು. ಶಿಕ್ಷಣವಿಲ್ಲದಿದ್ದರೆ ಹೋರಾಡುವ ಛಲ ಬರುವುದಿಲ್ಲ ಎಂದು ತಿಳಿಸಿದರು.
ಶಿಕ್ಷಕ ಚಂದ್ರಶೇಖರ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ವನಜಾಕ್ಷಿ ಮಾಜಿಗೌಡ್ರ, ವಿಮಲಾಕ್ಷಿ ಹಿರೇಮಠ, ಮಂಜುಳ ದೇವಗಿರಿಮಠ, ಪ್ರೇಮಾ ಹಿರೇಮಠ, ಶೋಭಾ ಗೌಡರ, ಸವಿತಾ ಹುಲಗಿನಕಟ್ಟಿ, ಕೊಟ್ರಮ್ಮ ಹುಲಗಿನಕಟ್ಟಿ, ಲೀಲಾವತಿ ಹುಲಗಿನಕಟ್ಟಿ, ಪ್ರಮೀಲಾ ಸೊಲಬಪ್ಪನವರ, ಶಶಿಕಲಾ ಕಂಬಾಳಿಮಠ, ಮೀನಾಕ್ಷಿ ಹಿರೇಮಠ, ಲಕ್ಷ್ಮಿದೇವಿ ಪವಾರ, ರತ್ನಾ ಗೌಡರ, ಎಸ್ಡಿಎಂಸಿ ಅಧ್ಯಕ್ಷ ಈರಯ್ಯ ಹಿರೇಮಠ, ಮುಖ್ಯ ಶಿಕ್ಷಕ ಎಂ.ಬಿ. ಗುಡಿಹಿಂದ್ಲರ, ಮಲ್ಲಿಕಾರ್ಜುನ ಹುಲಗಿನಕಟ್ಟಿ, ಮಹದೇವಯ್ಯ ಗೌಡರ, ಮುಂತಾದವರು ಭಾಗವಹಿಸಿದ್ದರು. ಅನು ಹಿರೇಮಠ ಸ್ವಾಗತಿಸಿ, ಮುಬಾರಕ ವಂದಿಸಿದರು. ಜ್ಯೋತಿ ಮಾಜಿಗೌಡರ ನಿರೂಪಿಸಿದರು.
ನೀರಿಗಾಗಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಮಾ.8
ತಾಲೂಕಿನ ಬುರಡಿಕಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾಳಂಬೀಡ ಗ್ರಾಮದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಸಮರ್ಪಕ ನೀರು ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ಗ್ರಾಪಂ ಆಡಳಿತದ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ಗ್ರಾಮದಲ್ಲಿ ಮಾ. 9ರಿಂದ 12ರ ವರೆಗೆ ಮಹಾಶಿವರಾತ್ರಿ ಅಂಗವಾಗಿ ಜಾಗರಣೆ ಹಾಗೂ ಮಹಾರಥೋತ್ಸವಕ್ಕೆ ಭರದ ಸಿದ್ದತೆ ನಡೆದಿರುವಾಗಲೇ ನೀರಿನ ಸಮಸ್ಯೆ ಉಂಟಾಗಿ ಜನತೆ ಚಿಂತೆಗೀಡಾಗಿದ್ದಾರೆ. ಗ್ರಾಮದಲ್ಲಿ ಕೊಳವೆ ಬಾವಿಯೇ ನೀರಿನ ಮೂಲವಾಗಿರುವುರಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಆಟದಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಇನ್ನೊಂದು ಕೊಳವೆ ಬಾವಿ ಕೊರೆಸುವಂತೆ ಜಿಪಂ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಗ್ರಾಪಂ ಪಿಡಿಒ ನೀರಿನ ಸಮಸ್ಯೆ ಅರಿತು ಇನ್ನೊಂದು ಕೊಳವೆ ಬಾವಿ ಕೊರೆಸುವಂತೆ ಎರಡು ತಿಂಗಳ ಹಿಂದೆಯೇ ಪಂಚಾಯತ್ರಾಜ್ ಎಂಜಿನಿಯರಿಂಗ್ ಉಪವಿಭಾಗದ ಅಭಿಯಂತರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥ ಎನ್.ಎಂ. ಗಣೇಶ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಅಧಿಕಾರಿಗಳು ಸಮಸ್ಯೆ ಬಗೆಹರಿಸದಿದ್ದಲ್ಲಿ ಗ್ರಾಮಸ್ಥರು ಜಿಪಂ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

