ಮಹಿಳೆಗೆ ಒಳಿತಾಗದಿದ್ದಲ್ಲಿ ಅಪಾರ ನಷ್ಟ: ಪ್ರಕಾಶಾನಂದಜಿ
ರಾಣಿಬೆನ್ನೂರು: ಸ್ವಾಮಿ ವಿವೇಕಾನಂದರು ಹೇಳಿರುವಂತೆ ಭಾರತೀಯ ಮಹಿಳೆಗೆ ಒಳಿತಾಗದಿದ್ದಲ್ಲಿ ಸಮಾಜಕ್ಕೆ ಅಪಾರ ನಷ್ಟ ಉಂಟಾಗುತ್ತದೆ. ಕಾರಣ ಸುಶಿಕ್ಷಿತ ಎಂದೆನ್ನಿಸಿಕೊಂಡಿರುವ ಎಲ್ಲರೂ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ರಾಮಕೃಷ್ಣ ವಿವೇಕಾನಂದಾಶ್ರಮದ ಪ್ರಕಾಶಾನಂದಜಿ ಕರೆ ನೀಡಿದರು.
ಇಲ್ಲಿನ ಎಸ್ಜೆಎಂವಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಮಹಿಳೆಯರಿಗಾಗಿ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವಿವೇಕಾನಂದರು ತಮ್ಮ ವಿಶ್ವ ಪರ್ಯಟನೆ ಸಂದರ್ಭದಲ್ಲಿ ಹಲವಾರು ದೇಶಗಳಲ್ಲಿ ನೀಡಿದ ತಮ್ಮ ಉಪನ್ಯಾಸದಲ್ಲಿ ಭಾರತೀಯ ಮಹಿಳೆಗೆ ಸಮಾಜ ನೀಡಿರುವ ಸ್ಥಾನಮಾನ ಬೇರಾವ ದೇಶದಲ್ಲೂ ಸಿಗಲಾರದು ಎಂದು ನುಡಿದಿದ್ದರು. ಅದಕ್ಕೆ ತಕ್ಕಂತೆ ಇಂದು ಮಹಿಳೆಯೇ ಮಹಿಳೆಯ ಶತ್ರುಗಳಾಗಿದ್ದಾಳೆ. ಅದು ತೊಲಗಿ ಒಳ್ಳೆಯ ತಾಯಿಯಾಗಬೇಕಿದೆ. ಸಮಾಜವನ್ನು ತಿದ್ದುವ ಶಿಕ್ಷಕಿ ಆಗಬೇಕಿದೆ ಎಂದರು. ಅತಿರ್ಥಿಗಳಾಗಿ ಆಗಮಿಸಿದ್ದ ಮುಖಂಡ ಅಧ್ಯಕ್ಷ ಬಸವರಾಜ ಪಾಟೀಲ, ಸಂಪನ್ಮೂಲ ವ್ಯಕ್ತಿ ದಾವಣಗೆರೆ ವಿವಿಯ ಪ್ರೊ. ಗಂಗಾಧರಯ್ಯ ಹಿರೇಮಠ ಮಾತನಾಡಿ, ಹೆಣ್ಣು ಗಂಡೆಂಬ ಭೇದ ಮರೆತು ಸಮಾನತೆಯನ್ನು ಕಂಡಲ್ಲಿ ಮಾತ್ರ ಮಹಿಳೆಗೆ ಸಿಗಬೇಕಾದ ಎಲ್ಲ ಸ್ಥಾನಮಾನಗಳು ದೊರೆಯಲು ಸಾಧ್ಯ. ಪ್ರಾಚಾರ್ಯ ಡಾ. ವಿ.ಕೆ. ಕನ್ನೇಶ್ವರ ಅಧ್ಯಕ್ಷತೆ ವಹಿಸಿದ್ದರು. ಜಯಾ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

