ಹಾವೇರಿ

ಸುದ್ದಿ ಸಂಕ್ಷೇಪ

Published On :

23ರಂದು ಪ್ರಶಸ್ತಿ ಪ್ರದಾನ
ಹಾವೇರಿ:
ಪತ್ರಿ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭ ಮಾ. 23ರಂದು ಸಂಜೆ 5ಕ್ಕೆ ನಗರದ ಗೆಳೆಯರ ಬಳಗದ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ಜರುಗಲಿದೆ. ಹುಕ್ಕೇರಿಮಠದ ಸದಾಶಿವ ಶ್ರೀಗಳು ಸಾನ್ನಿಧ್ಯ ವಹಿಸುವರು. ನಾಡೋಜ ಪಾಟೀಲ ಪುಟ್ಟಪ್ಪ ಪ್ರಶಸ್ತಿ ಪ್ರದಾನ ಮಾಡುವರು. ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ವಿರೂಪಾಕ್ಷಪ್ಪ ಪತ್ರಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಜಿ.ಬಿ. ಮಾಸಣಗಿ, ಶಿವಲಿಂಗೇಶ್ವರ ವಿದ್ಯಾಪೀಠದ ಅಧ್ಯಕ್ಷ ಪಿ.ಡಿ. ಶಿರೂರ ಆಗಮಿಸುವರು. ಶಿವಲಿಂಗೇಶ್ವರ ಮಹಿಳಾ ಕಾಲೇಜು ಪ್ರಾಚಾರ್ಯರಾದ ಡಾ. ಸವಿತಾ ಹಿರೇಮಠ ಅಭಿನಂದನಾ ನುಡಿ ನುಡಿಯಲಿದ್ದಾರೆ. ಪ್ರಾಸ್ತಾವಿಕವಾಗಿ ಸಾಹಿತಿ ಸತೀಶ ಕುಲಕರ್ಣಿ ಮಾತನಾಡುವರು. ದತ್ತಿ ಪರಿಚಯವನ್ನು ಡಾ. ಭೋಜರಾಜ ಪಾಟೀಲ ಮಾಡಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸುನೀಲ್ ಮಹೇಂದ್ರಕರಗೆ ಸನ್ಮಾನ
ಹಾನಗಲ್ಲ:
ಕುವೆಂಪು ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ವಿಷಯದಲ್ಲಿ ಮೂರು ಬಂಗಾರದ ಪದಕ ಪಡೆದ ಹಾನಗಲ್ಲಿನ ಯುವ ಪ್ರತಿಭೆ ಸುನೀಲ ರಾಮಚಂದ್ರ ಮಹೇಂದ್ರಕರ ಅವರನ್ನು ಸಮಾಜದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಇಲ್ಲಿನ ಭಾವಸಾರ ಕ್ಷತ್ರಿಯ ವಿಠೋಭ ಮಂದಿರದಲ್ಲಿ ಸಮಾಜದ ಪ್ರಮುಖರು ಸುನೀಲ ಮಹೇಂದ್ರಕರ ಅವರನ್ನು ಶಾಲು ಹೊದೆಸಿ ಸನ್ಮಾನಿಸಿದರು. ಅವರು ಕುವೆಂಪು ವಿಶ್ವವಿದ್ಯಾಲಯದಿಂದ 2012ರಲ್ಲಿ ನಡೆದ ಪರೀಕ್ಷೆಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಗರಿಷ್ಠ ಅಂಕ ಗಳಿಸಿದ್ದಕ್ಕಾಗಿ ಶ್ಯಾಮನೂರ ಶಿವಶಂಕರಪ್ಪ ಚಿನ್ನದ ಪದಕ, ಅನಸೂಯಾಬಾಯಿ ಚಿನ್ನದ ಪದಕ ಹಾಗೂ ರಾಜನಹಳ್ಳಿ ಪ್ರೇಮಾ ಚಿನ್ನದ ಪದಕ ಗೆದ್ದಿದ್ದಾರೆ. ಮೂಲತಃ ಹಾನಗಲ್ಲಿನ ಸುನೀಲ ಮಹೇಂದ್ರಕರ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಇಲ್ಲೇ ಪೂರೈಸಿದ್ದಾರೆ. ಸನ್ಮಾನ ಸಮಾರಂಭದಲ್ಲಿ ದೇವಸ್ಥಾನ ಕಮಿಟಿ ಅಧ್ಯಕ್ಷ ಶರತ ತಿರುಮಲೆ, ಸಮಾಜದ ಅಧ್ಯಕ್ಷ ಚಂದ್ರಕಾಂತ ಬೇದ್ರೆ, ರಾಮಚಂದ್ರ ಮಹೇಂದ್ರಕರ, ಅಶೋಕ ಪುಕಾಳೆ, ಪ್ರವೀಣ ಬೇದ್ರೆ, ಡಾ೤ ಶ್ರೀನಿವಾಸ ಕುಂಠೆ, ವಿಜಯ ಬೇದ್ರೆ, ಆದಿಶೇಷ ಕುಂಠೆ, ಮಾರುತಿ ತಾಂದಳೆ, ಶಂಕರ ಬೇದ್ರೆ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಚೆಕ್ ವಿತರಣೆ
ರಾಣಿಬೆನ್ನೂರು:
ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಶಿವಕುಮಾರ ಮುದ್ದಪ್ಪಳವರ ತಾಲೂಕಿನ ವಿವಿಧ ಗ್ರಾಮಗಳ ಅಕ್ಷರ ದಾಸೋಹ ಅಡುಗೆ ಕೋಣೆಗಳ ನಿರ್ಮಾಣಕ್ಕೆ ಅಗತ್ಯ ಅನುದಾನದ ಚೆಕ್ಕುಗಳನ್ನು ವಿತರಿಸಿದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಶಾರದಾ ಲಮಾಣಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಲಲಿತಾ ಜಾಧವ, ಮಂಜುಳಾ ಅಂಬಲಿ, ತಾಲೂಕಾ ಅಕ್ಷರ ದಾಸೋಹ ಕಾರ್ರ್ಯಕ್ರಮ ಸಹಾಯಕ ನಿರ್ದೇಶಕ ಎಂ.ಎಚ್ ಪಾಟೀಲ ಉಪಸ್ದಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.