ಹಾವೇರಿ

ಸುದ್ದಿ ಸಂಕ್ಷೇಪ

Published On :

ಕಲಾಕೃತಿ ಬಿಡುಗಡೆ, ಸನ್ಮಾನ
ರಾಣಿಬೆನ್ನೂರು
: ಜೇಸಿ ಸಂಸ್ಥೆ, ಕಲಾಸ್ಫೂರ್ತಿ ಪೌಂಡೇಷನ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಗೌರಿಶಂಕರ ನಗರದ ನಿವೃತ್ತ ನೌಕರರ ಸಭಾಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕಲಾಕೃತಿಗಳನ್ನು ಬಿಡುಗಡೆಗೊಳಿಸಿ, ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು. ನಗರಸಭೆಗೆ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ರತ್ನಾ ಪುನೀತ, ಈರಣ್ಣ ಮಾಕನೂರು, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಎಂ. ಸಂಕಮ್ಮನವರ, ಕಾರ್ಯದರ್ಶಿ ಬಿ.ಬಿ. ಗೌಡರ ಹಾಗೂ ಹಾನಗಲ್ಲನ ಹೆಜ್ಜೆ-ಗೆಜ್ಜೆ ನೃತ್ಯ ಶಾಲೆಯ ಅಧ್ಯಕ್ಷರಾದ ಕೃಷ್ಣಾ ಲಿಂಗೇರಿ, ಕಲಾಸ್ಫೂರ್ತಿ ಪೌಂಡೇಶನ್ ಅಧ್ಯಕ್ಷೆ ಶಶಿಕಲಾ ಮಾಕನೂರು, ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು. ಜೆಸಿ ಸಂಸ್ಥೆ ಅಧ್ಯಕ್ಷ ಪ್ರಭುಲಿಂಗಯ್ಯ ಹಲಗೇರಿ ಪ್ರಾಸ್ತಾವಿಕ ಮಾತನಾಡಿದರು. ಜೆಸಿ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಎಂ.ಎಂ. ಪಾಟೀಲ, ಪೂರ್ಣಿಮಾ ಹಲಗೇರಿ, ಮೃತ್ಯುಂಜಯ ಮಾಕನೂರು, ಪ್ರಭು ಎಳೆಹೊಳಿ, ಲಕ್ಷ್ಮಿಕಾಂತ ಹುಲಗೂರು, ಸಂಕಪ್ಪ ಮಾರನಾಳ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಶಿವಾನಂದ ಸಂಗಾಪುರ ಉಪಸ್ಥಿತರಿದ್ದರು.
ನಾಳೆ ಅಹವಾಲು ಸ್ವೀಕಾರ
ಹಾವೇರಿ
: ಜಿಲ್ಲೆಯ ಮಾಜಿ ಸೈನಿಕರ ಹಾಗೂ ಅವರ ಅವಲಂಬಿತರ ಕುಂದು-ಕೊರತೆಗಳನ್ನು ವಿಚಾರಿಸಲು ಮತ್ತು ಅಹವಾಲುಗಳನ್ನು ಸ್ವೀಕರಿಸಲು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಸಿಬ್ಬಂದಿ ಮಾ. 21ರಂದು ಹಾವೇರಿಯ ಪ್ರವಾಸಿ ಮಂದಿರಕ್ಕೆ ಆಗಮಿಸುವರು. ಅಂದು ಜಿಲ್ಲೆಯ ಮಾಜಿ ಸೈನಿಕರು ಹಾಗೂ ಅವಲಂಬಿತರು ತಮ್ಮ ಮೂಲ ಸೇನಾ ದಾಖಲೆಗಳು ಮತ್ತು ಇಲಾಖೆಯಿಂದ ನೀಡಿದ ಗುರುತಿನ ಚೀಟಿಯೊಂದಿಗೆ ಅವರನ್ನು ಭೇಟಿಯಾಗಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ-0836-2440176 ಸಂಖೆಗೆ ಸಂಪರ್ಕಿಸಬಹುದೆಂದು ಧಾರವಾಡ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಪಿಯು ಪರೀಕ್ಷೆ: 205 ಗೈರು
ಹಾವೇರಿ:
ಜಿಲ್ಲೆಯಲ್ಲಿ ಮಂಗಳವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ಸುವ್ಯವಸ್ಥಿತವಾಗಿ ಜರುಗುತ್ತಿವೆ. ಸಮಾಜಶಾಸ್ತ್ರ ವಿಷಯದ 3,206 ವಿದ್ಯಾರ್ಥಿಗಳ ಪೈಕಿ 3,060 ವಿದ್ಯಾರ್ಥಿಗಳು ಹಾಗೂ ಲೆಕ್ಕಶಾಸ್ತ್ರದ 2,435 ವಿದ್ಯಾರ್ಥಿಗಳ ಪೈಕಿ 2,376 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಸಮಾಜಶಾಸ್ತ್ರ ವಿಷಯದ 146 ಹಾಗೂ ಲೆಕ್ಕಶಾಸ್ತ್ರದ 59 ವಿದ್ಯಾರ್ಥಿಗಳು ಸೇರಿ 205 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಪರೀಕ್ಷಾ ಅಕ್ರಮ ಹಾಗೂ ಡಿಬಾರ್ ಆಗಿರುವುದಿಲ್ಲ ಎಂದು ಡಿಡಿಪಿಐ ಆರ್.ಆರ್. ಕೊಣ್ಣೂರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.