ಕೈಗೆ ಬಿಜೆಪಿ, ಕೆಜೆಪಿ ಕಾರ್ಯಕರ್ತರ ಸೇರ್ಪಡೆ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮಾ. 25
ತಾಲೂಕಿನ ಹೀರೂರು ಗ್ರಾಮದಲ್ಲಿ ಕೆಜೆಪಿ ಹಾಗೂ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮನೋಹರ ತಹಸೀಲ್ದಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದರು.
ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಮನೋಹರ ತಹಸೀಲ್ದಾರ್, ಬಿಜೆಪಿ ಸರ್ಕಾರದ ಜನವಿರೋಧಿ ನೀತಿ, ಅಧಿಕಾರದ ಕಚ್ಚಾಟ, ಹಗರಣಗಳಿಂದ ಬೇಸತ್ತು ಕಾರ್ಯಕರ್ತರು ಕಾಂಗ್ರೆಸ್.ನತ್ತ ಧಾವಿಸುತ್ತಿದ್ದಾರೆ. ಬಡವರ, ಅಸಹಾಯಕರ ರಕ್ಷಣೆ ಮಾಡುವಲ್ಲಿ ಕಾಂಗ್ರೆಸ್ ಮುಂದಿದೆ. ಕಾಂಗ್ರೆಸ್.ನಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿದ್ದು, ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಬಿಜೆಪಿ ಸರ್ಕಾರದ 5 ವರ್ಷದ ಆಡಳಿತಾವಧಿಯಲ್ಲಿನ ಭ್ರಷ್ಟಾಚಾರದಿಂದ ಜನ ್ರಮನಿರಸನಗೊಂಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಹೀರೂರು ಗ್ರಾಮದ ಮುಖಂಡರಾದ ಫಕ್ಕೀರಪ್ಪ ಕುರುಬರ, ಸಿದ್ದನಗೌಡ ಪಾಟೀಲ ನೇತೃತ್ವದಲ್ಲಿ ಬಸಯ್ಯ ಹಿರೇಮಠ, ಉಮೇಶ ನೀರಲಗಿ, ಹನುಮಂತಪ್ಪ ಬುರಡಿಕಟ್ಟಿ, ಪ್ರಕಾಶ ಮಾಸೂರ, ಸುರೇಶ ಕನಕಪ್ಪನವರ, ಮಂಜಪ್ಪ ಮೆಳ್ಳಿಹಳ್ಳಿ, ನಾಗಪ್ಪ ಕೋಣನವರ, ಉಮೇಶ ಕೊಪ್ಪಣ್ಣನವರ, ರಾಜು ಕಡಕೋಳ, ವೀರೇಶ ಜಡೆಗೊಂಡರ, ಬಸನಗೌಡ ಪಾಟೀಲ, ಮದಾರಸಾಬ ತೋಟದ ಸೇರಿದಂತೆ 40ಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್ ಸೇರಿದರು.
ಹಾನಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಬಡಿಗೇರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ರಾಜಶೇಖರ ಸಾಲಿಮಠ, ಹಾನಗಲ್ಲ ಪುರಸಭೆ ಮಾಜಿ ಅಧ್ಯಕ್ಷ ವೈ,ಎಫ್. ಕಿತ್ತೂರು, ಪಕ್ಷದ ವಕ್ತಾರ ಕೆ.ಎಲ್. ದೇಶಪಾಂಡೆ, ಜಿಲ್ಲಾ ವಕ್ತಾರ ಹಿರೇಮಠ, ಜಿಪಂ ಸದಸ್ಯ ಮಹಾದೇವಪ್ಪ ಭಾಗಸರ, ಅನೀಲ ಕನವಳ್ಳಿ, ಎನ್.ಎಸ್. ಪಡೆಪ್ಪನವರ, ಎಫ್.ವಿ. ಮಡಿವಾಳರ, ಏಳುಕೋಟೆಪ್ಪ ಹಾವಳೇರ, ಮಖಬುಲ್ ಅಹ್ಮದ ಹುಲಗೂರ, ವೀರೇಶ ಬೈಲವಾಳ, ಇಸ್ಮಾಯಿಲ್ ರುಸ್ತುಂಅಲಿ, ಗಿರೀಶಗೌಡ ಪಾಟೀಲ, ಬಸೀರಖಾನ ಪಠಾಣ, ಜಿಪಂ, ತಾಪಂ ಸದಸ್ಯರು ಸೇರಿದಂತೆ ಅನೇಕ ಮುಂಖಡರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

