ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ
ಹಾವೇರಿ: ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ ಆರು ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಹಾವೇರಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ತಿಳಿಸಿದರು.
ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಚುನಾವಣೆಗೆ ಜಿಲ್ಲೆಯಲ್ಲಿ 5,22,995 ಮಹಿಳೆಯರು, 5,80,922 ಪುರುಷರು ಹಾಗೂ 39 ಇತರೆ ಮತದಾರರು ಸೇರಿದಂತೆ 11,03,956 ಮತದಾರರಿದ್ದಾರೆ.
ಕ್ಷೇತ್ರವಾರು ವಿವರ: ಹಾನಗಲ್ಲ(82) ಪುರುಷರು-92394, ಮಹಿಳೆಯರು-81540 ಹಾಗೂ ಇತರರು 4 ಒಟ್ಟು 173938, ಶಿಗ್ಗಾಂವಿ(83) ಪು-100176, ಮ- 88168 ಹಾಗೂ ಇತರರು 4 ಒಟ್ಟು 188341, ಹಾವೇರಿ(84) ಪು-104111, ಮ-94378, ಇತರರು 9 ಒಟ್ಟು 198498, ಬ್ಯಾಡಗಿ(85) ಪು-94500, ಮ-85948, ಇತರರು 7 ಒಟ್ಟು 180455, ಹಿರೇಕೆರೂರು(86) ಪು-85337, ಮ-76646 ಹಾಗೂ ಇತರರು 4 ಒಟ್ಟು 161987, ರಾಣಿಬೆನ್ನೂರು(87) ಪು-104404, ಮ-96372 ಹಾಗೂ ಇತರರು 11 ಒಟ್ಟು 200737 ಮತದಾರರಿದ್ದಾರೆ.
ಮತಗಟ್ಟೆ: ಜಿಲ್ಲೆಯಲ್ಲಿ ಒಟ್ಟಾರೆ 1359 ಮತಗಟ್ಟೆಗಳಿದ್ದು, ಅವುಗಳಲ್ಲಿ 244 ಅತೀ ಸೂಕ್ಷ್ಮ, 432 ಸೂಕ್ಷ್ಮ ಹಾಗೂ 683 ಸಾಮಾನ್ಯ ಮತಗಟ್ಟೆಗಳಿವೆ.
ಹಾನಗಲ್ಲ ಕ್ಷೇತ್ರದಲ್ಲಿ- 223, ಶಿಗ್ಗಾಂವಿ-223, ಹಾವೇರಿ-245, ಬ್ಯಾಡಗಿ-225, ಹಿರೇಕೆರೂರು-210 ಹಾಗೂ ರಾಣಿಬೆನ್ನೂರು-233 ಮತಗಟ್ಟೆಗಳಿವೆ. ಈ ಎಲ್ಲ ಮತಗಟ್ಟೆಗಳಿಗೆ ಅವಶ್ಯಕ ರಕ್ಷಣಾ ಸಿಬ್ಬಂದಿ ನೇಮಿಸಲಾಗಿದೆ. ಜಿಲ್ಲೆಯಲ್ಲಿ 30 ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಕ್ ವ್ಯವಸ್ಥೆ ಮಾಡಲಾಗಿದ್ದು, ಮತ ಚಲಾವಣೆ ಪ್ರಕ್ರಿಯೆ ವಿಡಿಯೋ ಮಾಡಲಾಗುವುದು.
ಸದಾಚಾರ ಸಂಹಿತೆ ಉಲ್ಲಂಘನೆ: ಲ್ಲೆಯಲ್ಲಿ ಮೇ 2ರ ವರೆಗೆ ಒಟ್ಟು 37 ಸದಾಚಾರ ಸಂಹಿತೆ ಪ್ರಕರಣಗಳಿದ್ದು, ಪ್ರಕರಣಗಳ ಕುರಿತಂತೆ ಎಫ್ಐಆರ್ ದಾಖಲಿಸಲಾಗಿದ್ದು, ಒಟ್ಟು ರು. 6.81 ಲಕ್ಷಗಳ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ನಡೆದ ಅಬಕಾರಿ ದಾಳಿಯಲ್ಲಿ 71 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 465.27 ಲೀಟರ್ನಷ್ಟು ಮದ್ಯ ವಶಪಡಿಸಿಕೊಳ್ಳಲಾಗಿದೆ. 63 ವ್ಯಕ್ತಿಗಳನ್ನು ಬಂಧಿಸಲಾಗಿದೆ. 9 ವಾಹನಗಳನ್ನು ಜಪ್ತಿ ಮಾಡಿಲಾಗಿದೆ. ಇವುಗಳ ಒಟ್ಟು ಅಂದಾಜು ಮೊತ್ತ ರು. 5.45 ಲಕ್ಷಗಳಾಗಿವೆ.
ಮತಗಟ್ಟೆ ನಿರ್ವಹಣೆ: ಜಿಲ್ಲಾದ್ಯಂತ ಮತಗಟ್ಟೆ ನಿರ್ವಹಣೆಗಾಗಿ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು 6365 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹಾನಗಲ್ಲ ಕ್ಷೇತ್ರಕ್ಕೆ 1041, ಶಿಗ್ಗಾಂವಿ-1048, ಹಾವೇರಿ-1144, ಬ್ಯಾಡಗಿ-1063, ಹಿರೇಕೆರೂರು-977 ಹಾಗೂ ರಾಣಿಬೆನ್ನೂರು-1092 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾರಿಗೆ-ಜಿಲ್ಲಾದ್ಯಂತ ಸಮರ್ಥವಾಗಿ ಚುನಾವಣಾ ಕಾರ್ಯನಿರ್ವಹಿಸಲು 144 ಕೆಎಸ್ಆರ್ಟಿಸಿ ಬಸ್, 64 ಖಾಸಗಿ ಟೆಂಪೋಗಳನ್ನು ಬಳಸಿಕೊಳ್ಳಲಾಗಿದೆ. ಖಾಸಗಿ ಹಾಗೂ ಸರ್ಕಾರಿ ವಾಹನ ಸೇರಿ ಒಟ್ಟು 92 ವಾಹನಗಳನ್ನು ಸೆಕ್ಟರ್ ಅಧಿಕಾರಿಗಳಿಗೆ ನೀಡಲಾಗಿದೆ.
ಮತ ಎಣಿಕೆ: ನಗರದ ಹೊರ ವಲಯದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮೇ 8ರಂದು ಬೆಳಗ್ಗೆ 8ರಿಂದ ಮತ ಎಣಿಕೆ ಆರಂಭವಾಗಲಿದೆ. ಮೇ 5ರಂದು ನಡೆಯುವ ಚುನಾವಣೆ ದಿನದಂದು ಶಾಂತಿಯುತ, ಸುವ್ಯವಸ್ಥಿತ ಮತ ಚಲಾವಣೆಗೆ ರಕ್ಷಣಾ ಕ್ರಮ, ಸಿಬ್ಬಂದಿ ನೇಮಕ ಅವರ ತರಬೇತಿ ಮತ ಯಂತ್ರಗಳ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜನರು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಸಂಯಮ ಹಾಗೂ ತಾಳ್ಮೆಯಿಂದ ತಮ್ಮ ಮತವನ್ನು ತಪ್ಪದೇ ಚಲಾಯಿಸಬೇಕೆಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಮನವಿ ಮಾಡಿದರು.
ಎಸ್ಪಿ ಡಾ ಚೇತನಸಿಂಗ್ ರಾಥೋರ್, ಚುನಾವಣೆಯ ಕಾನೂನು ಹಾಗೂ ಪೊಲೀಸ್ ಬಂದೋಬಸ್ತ್ ಕುರಿತ ವಿವರ ನೀಡಿದರು. ಜಿಪಂ ಸಿಇಓ ಉಮೇಶ ಕುಸುಗಲ್ಲ, ಅಪರ ಡಿಸಿ ಜಿ. ಜಗದೀಶ, ಮತದಾರ ಜಾಗೃತಿ ಕಾರ್ಯಕ್ರಮ ಅನುಷ್ಠಾನದ ವೀಕ್ಷಕರಾದ ಗಂಗಪ್ಪ, ಸಹ ವೀಕ್ಷಕ ನದೀಮ ತೂಫೈಲ್ ಇದ್ದರು.
ಬಹಿರಂಗ ಪ್ರಚಾರ ಅಂತ್ಯ
ಹಾವೇರಿ: ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 126ರ ಅನ್ವಯ ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮುಂಚಿತವಾಗಿ ಬಹಿರಂಗ ಪ್ರಚಾರವನ್ನು ಕೊನೆಗೊಳಿಸಬೇಕು. ಹೀಗಾಗಿ, ಮೇ 3ರಂದು ಸಂಜೆ 5 ಗಂಟೆಗೆ ಎಲ್ಲ ಅಭ್ಯರ್ಥಿಗಳು ತಮ್ಮ ಬಹಿರಂಗ ಪ್ರಚಾರ ಮುಗಿಸಿದ್ದಾರೆ. ಇನ್ನೇನಿದ್ದರೂ ಮನೆ ಮನೆಗೆ ತೆರಳಿ, ಕೊನೆ ಹಂತದ ಮನವೊಲಿಕೆ ಕಾರ್ಯಕ್ರಮ. ಕ್ಷೇತ್ರದ ರಹವಾಸಿಗಳು ಅಲ್ಲದವರು ಬಹಿರಂಗ ಪ್ರಚಾರ ಮುಕ್ತಾಯದ ನಂತರ ಆ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವಂತೆ ಇಲ್ಲ. ಹೀಗಾಗಿ, ಪ್ರಚಾರಕ್ಕೆ ಆಗಮಿಸಿದ ಬೇರೆ ಕ್ಷೇತ್ರದ ವ್ಯಕ್ತಿಗಳು ಈಗ ಮರಳುತ್ತಿದ್ದಾರೆ.
ನಿಷೇಧಾಜ್ಞೆ ಜಾರಿ: ಸಿಆರ್ಪಿಸಿ ಕಲಂ 144ರ ಅನ್ವಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವಿಧಿಸಲಾಗಿದೆ. ಐದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರಬಾರದು, ಪ್ರಚಾರ ಮಾಡಬಾರದು. ಮೇ 3ರ ಸಂಜೆ 5 ಗಂಟೆಯಿಂದ ಮೇ 5ರ ರಾತ್ರಿ 11 ಗಂಟೆ ವರೆಗೆ ಹಾವೇರಿ ಜಿಲ್ಲಾದ್ಯಂತ ಮದ್ಯ ಮಾರಾಟ, ಸಾಗಾಟ ಹಾಗೂ ಮದ್ಯಪಾನ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

