ಹಾವೇರಿ

ಪಕ್ಷೇತರ ಅಭ್ಯರ್ಥಿ ಆಯ್ಕೆಗೆ ಕಾತುರ: ಆರ್. ಶಂಕರ್

Published On :

ರಾಣಿಬೆನ್ನೂರು: ಸೋಲಿನ ಭೀತಿಯಲ್ಲಿರುವ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ನಾಯಕರು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನ್ನ ವಿರುದ್ಧ ಇಲ್ಲಸಲ್ಲದ ರೀತಿಯಲ್ಲಿ ಅಪಪ್ರಚಾರ ನಡೆಸುತ್ತಿದ್ದು, ಮತದಾರರು ಅವುಗಳಿಗೆ ಕಿವಿಗೊಡದೆ ಮೇ 5ರಂದು ನಡೆಯುವ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಪಕ್ಷೇತರ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಕೀರ್ತಿಗೆ ಪಾತ್ರರಾಗಲು ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರದ ಮತದಾರರು ಕಾತುರರಾಗಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಆರ್. ಶಂಕರ್ ಹೇಳಿದರು.
ಶುಕ್ರವಾರ ಇಲ್ಲಿನ ಕೆಇಬಿ ಗಣೇಶ ದೇವಸ್ಧಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ಮೂಲಕ ಮತ ಯಾಚಿಸಿದರು. ಒಂದುವರೆ ವರ್ಷದಿಂದೀಚೆಗೆ ಜನಸೇವೆ ಮಾಡಲೆಂದು ಬೆಂಗಳೂರಿನಿಂದ-ರಾಣಿಬೆನ್ನೂರಿಗೆ ಬಂದು ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ನನ್ನ ಕೈಲಾದಷ್ಟು ಮಟ್ಟಿಗೆ ಸೇವೆ ಮಾಡುತ್ತ ಚಿರಪರಿಚಿತನಾಗಿದ್ದೇನೆ. ಪಕ್ಷೇತರ ಅಭ್ಯರ್ಥಿಯಿಂದಾಗಿ ಸೋಲುಂಟಾಗುತ್ತದೆ ಎಂಬ ಭಯದಿಂದ ನನ್ನ ಮೇಲೆ ಇತರ ಪಕ್ಷಗಳ ನಾಯಕರು ಇಲ್ಲಸಲ್ಲದ ರೀತಿಯಲ್ಲಿ 13 ಕೇಸ್‌ಗಳನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಮುಖಂಡರಿಗೆ ಹಾಗೂ ಅಭ್ಯರ್ಥಿಗಳಿಗೆ ಬುದ್ದಿ ಕಲಿಸಲು ಮತದಾರರು ಕಾತರರಾಗಿದ್ದಾರೆ ಎಂದರು.
ಕಾಂಗ್ರೆಸ್ ಟಿಕೆಟ್ ವಂಚಿತ ಅಭ್ಯರ್ಥಿ ಮಂಜುನಾಥ ಕಂಬಳಿ, ಜೆಡಿಎಸ್ ಟಿಕೆಟ್ ವಂಚಿತ ಅಭ್ಯರ್ಥಿ ಡಾ೤ ಎಂ.ಆರ್. ಹಂಡೆ, ಆರ್. ಶಂಕರ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಜಗದೀಶ ಎಲಿಗಾರ, ನಗರಸಭೆ ಸದಸ್ಯರಾದ ನೂರುಲ್ಲಾ ಇತರರಿದ್ದರು.

ಗೆದ್ದು ಇತಿಹಾಸ ಸೃಷ್ಟಿಸುವೆ: ಈಟೇರ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಮೇ 3
ತಾಲೂಕಿನ ಮತದಾರರು ಬದಲಾವಣೆ ಬಯಸಿದ್ದು, ಜಾತ್ಯತೀತವಾಗಿ ಬೆಂಬಲ ವ್ಯಕ್ತಡಿಸುತ್ತಿದ್ದಾರೆ. ಈ ಬಾರಿ ತಾಲೂಕಿನ ಹೊಸ ಇತಿಹಾಸ ಸೃಷ್ಟಿಯಾಗಲಿದ್ದು, ತಮ್ಮ ಗೆಲವು ಖಚಿತ ಎಂದು ನಿವೃತ್ತ ಡಿವೈಎಸ್ಪಿ, ಹಿರೇಕೆರೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಂ.ಎನ್. ಈಟೇರ ವಿಶ್ವಾಸ ವ್ಯಕ್ತಪಡಿಸಿದರು.
ಹಿರೇಮತ್ತೂರ ಗ್ರಾಮದಲ್ಲಿ ಮತಯಾಚಿಸಿದ ಅವರು, ತಾಲೂಕಿನ ಸರ್ವಾಂಗೀಣ ಅಭವೃದ್ಧಿ ನನ್ನ ಗುರಿ. ಹೊಲಿಗೆ ಯಂತ್ರಕ್ಕೆ ಮತ ನೀಡಿ ಎಂದು ಮನವಿ ಮಾಡಿದರು. ವಿವಿಧ ಪಕ್ಷಗಳ ಮುಖಂಡರಾದ ರುದ್ರಪ್ಪ ಮಾಳಗಿ, ಸುರೇಶ ಹಾವೇರಿ, ಕುಬೇರ ಕಟ್ಟೇಕಾರ, ನಾಗರಾಜ ಕಟ್ಟೇಕಾರ, ಸೋಮಶಪ್ಪ ಹಾವೇರಿ, ಗೋಣಿ ಬಸಪ್ಪ ಹಾವೇರಿ, ಬಸವರಾಜ ಚೆನ್ನಳ್ಳಿ, ರೇವಣಸಿದ್ದಪ್ಪ ಚೆನ್ನಳ್ಳಿ, ವೀರಪ್ಪ ಪೂಜಾರ, ಮಹೇಶ ದೊಡ್ಡಮನಿ ಬೆಂಬಲಿಸಿದರು. ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಬಸವರಾಜ ಎಲ್ಲಕ್ಕನವರ, ಬಿ.ಡಿ. ನಾಯಕ, ರಾಜು ಮುದುಕನಗೌಡ್ರ, ಬಸಪ್ಪ ಸುಂಕದ, ಹುಚ್ಚಪ್ಪ ಬಾಳಿಕಾಯಿ, ಪರಮೇಶ ಸುಂಕದ, ನಾಗಪ್ಪ ಸುಂಕದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.