ಸಿದ್ರಾಮಯ್ಯ ಸಿಎಂ: ಸಂಭ್ರಮಾಚರಣೆ
ಹಾನಗಲ್ಲ: ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಬಹುತೇಕ ಎಂಬ ಸುದ್ದಿ ತಿಳಿಯುತ್ತಿದಂತೆ ಶುಕ್ರವಾರ ಸಂಜೆ ಇಲ್ಲಿನ ಮಹಾತ್ಮಾಗಾಂಧಿ ವೃತ್ತದಲ್ಲಿ ಜಮಾಯಿಸಿದ ತಾಲೂಕು ಕುರುಬ ಸಂಘದವರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುರುಬರ ಸಂಘದ ತಾಲೂಕು ಘಟಕದ ಅಧ್ಯಕ್ಷ ದಾನಪ್ಪ ಗಂಟೇರ, ಸಂಘಟಿತ ಕುರುಬ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ಒಲಿದು ಬರುತ್ತಿರುವುದು ಸಂತಸ ಮೂಡಿಸಿದೆ. ಸಿದ್ದರಾಮಯ್ಯ ಅವರಿಂದ ರಾಜ್ಯದಲ್ಲಿ ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ಸ್ಥಿರವಾಗಲಿದೆ. ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ದೊರಕಲಿದ್ದು, ಕುರುಬ ಸಮಾಜ ಸೇರಿದಂತೆ ಹಿಂದುಳಿದ ಸಮಾಜಗಳಿಗೆ ಆದ್ಯತೆ ಭರಸವೆಯಿದೆ ಎಂದರು.
ಕುರುಬ ಸಮಾಜದ ಸುರೇಶ ದೊಡ್ಡಕುರುಬರ, ಮುತ್ತಣ್ಣ ಪೂಜಾರ, ಹನುಮಂತಪ್ಪ ಕೊಣನಕೊಪ್ಪ, ಸಂತೋಷ ಹೊಂಬರಡಿ, ಚನ್ನಬಸಪ್ಪ ಗುದಗಿ, ಪರಶುರಾಮ ಡೂಗನವರ, ಕಾಂಗ್ರೆಸ್ ಮುಖಂಡರಾದ ವೀರೇಶ ಬೈಲವಾಳ, ಪ್ರಶಾಂತ ಗೊಂದಿ, ಹಾಶಂಪೀರ ಇನಾಂದಾರ, ಖ್ವಾಜಾ ಬನವಾಸಿ, ಸದಾನಂದ ಗೌಡ ಕನ್ನೇಶ್ವರ, ನೂರಅಹ್ಮದ ಮಕಾಶಿ, ಶಿವಲಿಂಗಪ್ಪ ಚಿಕ್ಕೇರಿ, ಯಲ್ಲಪ್ಪ ಕಲಾಲ, ಇನಾಂದಾರ ಚಿನ್ನಳ್ಳಿ, ಶಿವಪ್ಪ ಮಾಸನಕಟ್ಟಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

