ಹಾವೇರಿ

ಬಸವಣ್ಣನವರಿಂದ ಸಮಾನತೆ ಸಂದೇಶ: ವಿಜಯಕುಮಾರ

Published On :

ಶಿಗ್ಗಾಂವಿ: ಜನಸ್ನೇಹಿ ಸಮಾಜಿಕಾಭಿವೃದ್ಧಿ ಸಂಸ್ಥೆ(ರಿ) ಶಿಗ್ಗಾಂವಿ ಹಾಗೂ ಮೈಸ್ ಕಂಪ್ಯೂಟರ್ ಆಶ್ರಯದಲ್ಲಿ ಬಸವ ಜಯಂತಿಯನ್ನು ನಳಂದಾ ಹೈಸ್ಕೂಲಿನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಜನಸ್ನೇಹಿ ಸಂಸ್ಥೆ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿ, ಜಾಗತೀಕರಣವು ಅತೀ ಹೆಚ್ಚು ಅಸಮಾನತೆ, ಅಮಾನವೀಯ ಮೌಲ್ಯಗಳನ್ನು ಬಿತ್ತುತ್ತಿರುವ ಸಂದರ್ಭದಲ್ಲಿ ಅಸಮಾನತೆ, ಜಾತಿ, ಮತ ವಿರುದ್ಧ ಮೌನಕ್ರಾಂತಿ ಸಾರಿದ ಸಮಾನತೆ ಸಂದೇಶ ಸಾರಿದ ಬಸವಣ್ಣನವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು. 12ನೇ ಶತಮಾನದಲ್ಲಿ ಅಂತರ್ ಜಾತಿ ವಿವಾಹ ಮಾಡುವ ಮೂಲಕ ಪ್ರೀತಿ, ಮಾನವೀಯತೆಗೆ ಜಾತಿ ಇಲ್ಲ ಎಂದು ಶರಣರು ಸಾರಿದ್ದಾರೆ. ಈ ಸಂದರ್ಭದಲ್ಲಿ ಭಾರಿ ವಿರೋಧ ಆನುಭವಿಸಿದರೂ ಸಹಿತ ತಮ್ಮ ಉನ್ನತ ವಿಚಾರದಿಂದಲೇ ವಿವಿಧ ಸಮುದಾಯಗಳ ಜನರನ್ನು ತಾಳ್ಮೆಯ ನಡವಳಿಕೆಯಿಂದಲೇ ಸಮಾಜ ಸಮನ್ವಯ ಕಾಪಾಡಿದರು. ನಳಂದಾ ಶಾಲೆಯ ಮುಖ್ಯೋಪಾಧ್ಯಾಯರಾದ ಎಮ್.ಬಿ. ಹಳೆಮನಿ ಮಾತನಾಡಿ, ಅಕ್ಷಯ ತೃತೀಯಾದ ಮಹತ್ವ ವಿವರಿಸಿದರು. ಇನ್ನೋರ್ವ ಅತಿಥಿ, ಶಿಕ್ಷಕ ಎಸ್.ಆರ್. ಕುಲಕರ್ಣಿ, ಸಾಕ್ಷರತಾ ಸಮಿತಿ ಸಂಯೋಜಕ ಎಸ್.ಕೆ. ಹೂಗಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ಜನಸ್ನೇಹಿ ಸಂಸ್ಥೆಯ ಕಾರ್ಯದರ್ಶಿ ಬಸನಗೌಡ ಮೆಳ್ಳೆಗಟ್ಟಿ, ಉಪಾಧ್ಯಕ್ಷ ಬಸವರಾಜ ಕುರಗೊಡಿ, ಮುಖಂಡರಾದ ಮಲ್ಲಿಕಾರ್ಜುನ ಕಾಬಡಗಿ ಹಾಜರಿದ್ದರು. ವಿದ್ಯಾರ್ಥಿ ಸೌಮ್ಯಾ ಹೂಗಾರ ಮಾತನಾಡಿದರು. ಕಾರ್ಯಕ್ರಮವನ್ನು ಶಿಕ್ಷಕ ಪ್ರವೀಣ ಸಾಗರ ನಿರೂಪಿಸಿದರು. ಶಿಕ್ಷಕಿ ರೂಪಾ ಡುಮ್ಮನವರ್ ಸ್ವಾಗತಿಸಿದರು. ವಿಶ್ವನಾಥ ಸಾಗರ್ ವಂದಿಸಿದರು. ಎಮ್.ಡಿ. ಕೆಳಗೇರಿ ಆಶಯ ನುಡಿಗಳನ್ನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.