ಹಾವೇರಿ

ಶ್ರೀಸಾಮಾನ್ಯನ ಅಭಿವೃದ್ಧಿಗೆ ನಾಂದಿ ಹಾಡಿದ ಬಸವಣ್ಣ

Published On :

ಹಿರೇಕೆರೂರು: ಪಟ್ಟಣದ ಸರ್ವಜ್ಞ ಕಲಾಭವನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಬಸವೇಶ್ವರರ ಜಯಂತ್ಯುತ್ಸವವನ್ನು ಶಾಸಕ ಯು.ಬಿ. ಬಣಕಾರ ಉದ್ಘಾಟಿಸಿದರು.
ನಂತರ ಮಾತನಾಡಿ, ಬಸವೇಶ್ವರರು ನಾಡಿನ ಜನಪರ ಕಲ್ಯಾಣ ಕಾರ್ಯಕ್ರಮಗಳಿಗಾಗಿ 12ನೇ ಶತಮಾನದಲ್ಲಿಯೇ ಜನಸಾಮಾನ್ಯರ ಅಭಿವೃದ್ಧಿಗಾಗಿ ಪ್ರಣಾಳಿಕೆ ನೀಡಿ, ಅದರಂತೆ ಮಾಡಿ ತೋರಿಸಿದ್ದನ್ನು ತಿಳಿಯಬಹುದಾಗಿದೆ ಎಂದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರು ಅಣ್ಣಪ್ಪನವರ, ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ತಾಪಂ ಸದಸ್ಯ ಆರ್.ಎನ್. ಗಂಗೋಳ ಮಾತನಾಡಿದರು.
ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಎಸ್.ಪಿ. ಗೌಡರ್ ಉಪನ್ಯಾಸ ನೀಡಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷ ಪ್ರಭಾರ ತಹಸೀಲ್ದಾರ್ ತುಷಾರ ಹೊಸೂರು ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ಗದಿಗೆಮ್ಮ ಬಿದರಿ, ಉಪಾಧ್ಯಕ್ಷೆ ರೂಪಾ ಆಡೂರ, ತಾಪಂ ಸದಸ್ಯರಾದ ಅನ್ನಪೂರ್ಣ ಗಾಳಿ, ರೇಣುಕಾ ಚಲವಾದಿ, ಶಿವಪ್ಪ ಗಡಿಯಣ್ಣನವರ, ಪಪಂ ಸದಸ್ಯರಿದ್ದರು. ಟಿಪ್ಪು ಸುಲ್ತಾನ್ ವೇದಿಕೆ ಅಧ್ಯಕ್ಷ ಮಹ್ಮದ್ಯೂಸುಪ್ ಖತೀಬ್, ಚಂದ್ರಪ್ಪ ಮಾರವಳ್ಳಿ, ಹನುಮಗೌಡ ಹುಡೇದ, ಚಂದ್ರಶೇಖರಪ್ಪ ತಿಪ್ಪಶೆಟ್ಟಿ, ವೀರನಗೌಡ ಬಿದರಿ, ಮುಂತಾದವರು ಇದ್ದರು. ಬಿಇಓ ಎಂ.ಸಿ. ಆನಂದ ಸ್ವಾಗತಿಸಿದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಪಿ.ಬಿ. ನಿಂಗನಗೌಡ್ರ ನಿರೂಪಿಸಿದರು.
ಶಾಸಕ ಬಣಕಾರ ನಿವಾಸ: ಹಿರೇಕೆರೂರು: ಪಟ್ಟಣದಲ್ಲಿ ಶಾಸಕ ಯು.ಬಿ. ಬಣಕಾರ ನಿವಾಸದಲ್ಲಿ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಸಮಾರಂಭವನ್ನು ತಾಪಂ ಅಧ್ಯಕ್ಷೆ ಗದಿಗೆವ್ವ ಬಿದರಿ ಉದ್ಘಾಟಿಸಿದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, 12ನೇ ಶತಮಾನದಲ್ಲಿ ಕ್ರಾಂತಿ ಮಾಡಿದ ಬಸವಣ್ಣನವರು ಅಂದಿನಿಂದ ಇಂದಿನವರೆಗೆ ಪ್ರೇರಣಾ ಶಕ್ತಿ ಜೊತೆಗೆ ಸಮಾಜ ಸುಧಾರಣೆಗೆ ಮತ್ತೊಂದು ಹೆಸರಾಗಿದ್ದಾರೆ. ಕಾರಣ ಅವರ ಆದರ್ಶಗಳನ್ನು ಪಾಲಿಸಬೇಕಿದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಎಲ್.ಬಿ. ತೆಂಬದ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷೆ ರೂಪಾ ಶಿವಾಜಿ ಆಡೂರ, ಪಪಂ ಸದಸ್ಯರಾದ ಮಮತಾ ಮಳವಳ್ಳಿ, ಮಾಲತೇಶ ಮಾಂಡ್ರೆ ಇದ್ದರು. ನಿವೃತ್ತ ಉಪನ್ಯಾಸಕ ಸಿ.ಎಸ್. ಪೇತಕ್ಕಳ್ಳವರ ವಂದಿಸಿದರು.

ಧಾರ್ಮಿಕ ನಡೆಯಿಂದ ಜೀವನ ಉನ್ನತಿ
ಶಿಗ್ಗಾಂವಿ: ಮಾನವ ಕುಲದ ಶ್ರೇಯೋಭಿವೃದ್ಧಿಗೆ ಆದರ್ಶ ಮೌಲ್ಯಗಳ ಪರಿಪಾಲನೆ ಪ್ರಮುಖವಾಗಿವೆ. ಮಾತು, ಕೃತಿ, ಮನ ಒಂದಾಗಿ ಧರ್ಮದ ದಾರಿಯಲ್ಲಿ ಮುನ್ನಡೆದಾಗ ಉನ್ನತಿ ಸಾಧಿಸಲು ಸಾಧ್ಯವಿದೆ ಎಂದು ಕಲಘಟಗಿ ತಾಲೂಕಿನ ಭೂ ಹುಲಿಕಟ್ಟಿ ಶೈಲೇಶ್ವರಮಠದ ಶ್ರೀ ಶಿದ್ಧಲಿಂಗೇಶ್ವರ ಶಿವಾಚಾರ್ಯರು ಹೇಳಿದರು. ತಾಲೂಕಿನ ಅಡವಿ ಸೋಮಾಪುರ ಗ್ರಾಮದಲ್ಲಿ ಜರುಗಿದ 24ನೇ ವರ್ಷದ ಶ್ರೀ ಶರಣಬಸವೇಶ್ವರ ಪುರಾಣ ಮಂಗಲೋತ್ಸವ, ಕುಂಭೋತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬರುವ ದಿನಗಳಲ್ಲಿ ಹೆಚ್ಚಿನ ಜೋಡಿ ಸಾಮೂಹಿಕ ವಿವಾಹಗಳು ಜರುಗಲಿವೆ. ನೂತನ ವಧು-ವರರು ಭಾರತೀಯ ಸಂಸ್ಕೃತಿ ಉಳಿಸಿಕೊಂಡು ಬರುವಂತಾಗಲಿ ಎಂದು ಈ ಸತ್ಕಾರ್ಯಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ, ಸಹಕಾರ ಮಾಡಿದ ಎಲ್ಲ ಭಕ್ತವೃಂದಕ್ಕೆ ಹೆಚ್ಚಿನ ಆಯುರಾರೋಗ್ಯ ನೀಡಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಶಿವಪುತ್ರಯ್ಯ ಬ. ಹಿರೇಮಠ, ವೀರಭದ್ರಯ್ಯ ಹಿರೇಮಠ, ಎಮ್.ಎಚ್. ದುಂಡಪ್ಪನವರ, ಶಿದ್ದನಗೌಡ್ರ ಪಾಟೀಲ, ಶಂಭಣ್ಣಾ ಹೂಗಾರ, ಮಲ್ಲೆಶಪ್ಪ ಜಾಧವ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದಪ್ಪ ದುಂಡಪ್ಪನವರ, ತಾಪಂ ಮಾಜಿ ಸದಸ್ಯ ಕಿರಣ ಅವರಾದಿ, ಜಿಪಂ ಸದಸ್ಯ ಸಿ.ಎಸ್. ಪಾಟೀಲ, ರಾಯಪ್ಪಣ್ಣ, ಶ್ರೀ ಶರಣ ಬಸವೇಶ್ವರ ಪುರಾಣ ಸಮಿತಿ ಹಾಗೂ ಗ್ರಾಮದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಎಸ್ಎಸ್ ಬ್ಯಾಂಕ್ ಕಾರ್ಯನಿರ್ವಾಹಕ ಸುರೇಶ ಬೆಂಡಿಗೇರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.