ಶಾದಿ-ಅನ್ನಭಾಗ್ಯ ವಿಸ್ತರಿಸಿ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ನ. 5
ಶಾದಿ ಭಾಗ್ಯ ಯೋಜನೆಯನ್ನು ಎಲ್ಲ ವರ್ಗದ ಬಡ ಕುಟುಂಬಗಳಿಗೆ ವಿಸ್ತರಿಸಬೇಕು ಹಾಗೂ ಎಪಿಎಲ್ ಕಾರ್ಡುದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸಬೇಕು ಎಂದು ಆಗ್ರಹಿಸಿ ರಾಜ್ಯ ಕಾರ್ಮಿಕ ಹಿತರಕ್ಷಣಾ ಮತ್ತು ಜಾಗೃತಿ ಸಂಘದಿಂದ ತಹಸೀಲ್ದಾರ್ ಎಸ್.ಎ. ಚೌಗಲೆ ಅವರಿಗೆ ಮನವಿ ಅರ್ಪಿಸಿದರು.
ಪಟ್ಟಣದ ಪುರಸಭೆ ವೃತ್ತದಿಂದ ಹಳೆ-ಹೊಸ ಬಸ್ ನಿಲ್ದಾಣಗಳ ಮುಖಾಂತರ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಅರ್ಪಿಸಿದ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಫಕ್ಕೀರೇಶ ಶಿಗ್ಗಾಂವ ಮಾತನಾಡಿ, ಶಾದಿ ಭಾಗ್ಯ ಯೋಜನೆ ಅನುಷ್ಠಾನ ಮಾಡಿದ್ದು ಸ್ವಾಗತಾರ್ಹ. ರಾಜ್ಯದಲ್ಲಿ ಎಲ್ಲ ಧರ್ಮಗಳಲ್ಲೂ ಬಡವರಿದ್ದಾರೆ. ಸೂರಿಲ್ಲದ ವಿಧವೆಯರು, ನಿರಾಶ್ರಿತರು ಲಕ್ಷಾಂತರ ಜನರಿದ್ದು, ಇಂಥವರಿಗೆ ಶಾದಿಭಾಗ್ಯದ ಯೋಜನೆ ವಿಸ್ತರಿಸಿ ಸಾಮಾಜಿಕ ನ್ಯಾಯ ಒದಗಿಸಬೇಕು. ಅಲ್ಪಸಂಖ್ಯಾತರಿಗೆ ನಿಗದಿಪಡಿಸಿರುವ ಮಿತಿಯನ್ನು ವಿಸ್ತರಿಸಿ ಈ ಯೋಜನೆಯಿಂದ ವಂಚಿತರಾದ ಎಲ್ಲ ವರ್ಗದ ಜನರಿಗೆ ಸೌಲಭ್ಯ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು ಎಂದು ಹೇಳಿದರು.
ಎಪಿಎಲ್ ಕಾರ್ಡುದಾರರಿಗೆ ಕನಿಷ್ಠ 15 ಕೆಜಿ ಅಕ್ಕಿ, ಗೋದಿ, ಸೀಮೆ ಎಣ್ಣೆ ಪೂರೈಸಬೇಕು. ಸರ್ಕಾರ ತಾರತಮ್ಯ ನೀತಿ ಮುಂದುವರಿಸಿದರೆ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ತಾಲೂಕು ಅಧ್ಯಕ್ಷ ಜಲಾನಿ ಜಂಗಲಿ, ಇಮಾಮ ಹುಸೇನ ಅದಂಭಾವಿ, ಮಂಜುನಾಥ ವಡ್ಡರ, ದುರ್ಗಪ್ಪ ವಡ್ಡರ, ಪುರಸಭೆ ಸದಸ್ಯೆ ಶಂಕ್ರಮ್ಮ ಅಂದಲಗಿ, ಮಲ್ಲಿಕಾರ್ಜುನ ಕುಂದರಗಿ, ಬಸವರಾಜ ವಡ್ಡರ, ಶಫೀ ಅಹ್ಮದ ಪಟೇಲ್, ಶಕುಂತಲಾ ಬಂಕಾಪುರ, ಇಲಿಯಾಸ ಮಾರಂಬೀಡ, ಉಮೇಶ ಮಣ್ಣವಡ್ಡರ, ಅಬ್ದುಲ ಲಕ್ಕಿಕೊಪ್ಪ, ಮಂಜುನಾಥ ಮಣ್ಣವಡ್ಡರ, ಮುತ್ತು ಕಟ್ಟಿಮನಿ, ಮುತ್ತು ಬಂಡಿವಡ್ಡರ, ಅಣ್ಣಪ್ಪ ಶಿವಳ್ಳಿ, ಪರಶುರಾಮ ವಡ್ಡರ, ಮಂಜುನಾಥ ಮೇವುಂಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

