ಹಾವೇರಿ

ಅದ್ಧೂರಿಯಾಗಿ ಕನಕದಾಸ ಜಯಂತಿ ಆಚರಣೆ: ದಾನಪ್ಪ ಗಂಟೇರ್

Published On :

ಕನ್ನಡಪ್ರಭ ವಾರ್ತೆ, ಹಾನಗಲ್ಲ, ನ. 10
ಗ್ರಾಮೀಣ ಭಾಗದಲ್ಲಿ ಪ್ರಚಾರ ಕಾರ್ಯ ಕೈಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಕುರುಬ ಬಾಂಧವರನ್ನು ಸೇರಿಸುವ ಮೂಲಕ ಈ ಬಾರಿಯ ಕನಕದಾಸರ ಜಯಂತಿ ಉತ್ಸವವನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಪ್ರದೇಶ ಕುರುಬರ ಸಂಘದ ತಾಲೂಕು ಘಟಕದ ಅಧ್ಯಕ್ಷ ದಾನಪ್ಪ ಗಂಟೇರ ಹೇಳಿದರು.
ಭಾನುವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಘಟಕದಿಂದ ನಡೆದ ಕನಕದಾಸರ ಜಯಂತ್ಯುತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಯಂತಿ ಅಂಗವಾಗಿ ಕನಕದಾಸರ ಜೀವನ ಚರಿತ್ರೆ ಕುರಿತು ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ನ. 18ರಂದು ತಾಲೂಕು ಮಟ್ಟದ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಜಯಂತಿ ದಿನದಂದು ಪಟ್ಟಣದಲ್ಲಿ ನಡೆಯುವ ಕನಕದಾಸರ ಭಾವಚಿತ್ರ ಮೆರವಣಿಗೆಗೆ ವಿವಿಧ ಕಲಾ ಮೇಳಗಳನ್ನು ಆಹ್ವಾನಿಸಲಾಗಿದೆ ಎಂದು ವಿವರಿಸಿದರು.
ಸಮಾಜದ ಮುಖಂಡ ಮಾರುತಿ ಹರಿಹರ ಮಾತನಾಡಿ, ನ. 18ರಂದು ಕಾಗಿನೆಲೆಯಿಂದ ಉಡುಪಿಗೆ ಹೊರಡುವ ಸದ್ಭಾವನಾ ಜ್ಯೋತಿಯ ಚಾಲನಾ ಸಮಾರಂಭಕ್ಕೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕುರುಬ ಬಾಂಧವರು ಆಗಮಿಸಬೇಕು ಎಂದು ಕರೆ ನೀಡಿದರು.
ಶಿಗ್ಗಾಂವಿ ಕಾಲೇಜಿನ ಉಪನ್ಯಾಸಕ ಡಾ. ಬಾಲಚಂದ್ರ ತೊಂಡಿಹಾಳ ಅವರನ್ನು ಜಯಂತಿ ಕಾರ್ಯಕ್ರಮದ ಉಪನ್ಯಾಸಕ್ಕೆ ಆಹ್ವಾನಿಸುವುದು ಸೇರಿದಂತೆ ಹಲವಾರು ವಿಷಯಗಳು ಸಭೆಯಲ್ಲಿ ನಿರ್ಣಯಿಸಲಾಯಿತು. ಕುರುಬ ಸಮಾಜದ ಮುಖಂಡರಾದ ನಿಂಗಪ್ಪ ಮುದುಕಣ್ಣನವರ, ಚಿಕ್ಕಪ್ಪ ಹೊಸಮನಿ, ಪರಶುರಾಮ ಡೂಗನವರ, ಸುರೇಶ ದೊಡ್ಡಕುರುಬರ, ಪಕ್ಕಣ್ಣ ಮಲ್ಲಿಗಾರ, ಮಹೇಶ ಪವಾಡಿ ಸಭೆಯಲ್ಲಿ ಮಾತನಾಡಿದರು.
ಜಿ.ಬಿ. ದೇಸಾಯಿ, ವಿಜಯ ಕುಲುಮಿಯಲ್ಲಾಪುರ, ಪ್ರಕಾಶ ತಳ್ಳಳ್ಳಿ, ಶ್ರೀಕಾಂತ ದೊಡ್ಡಕುರುಬರ, ಶಿವಮೂರ್ತೆಪ್ಪ ಗುಡಿ, ಎನ್.ಜಿ. ಗಡ್ಡಿಗಾಲ, ಜಗದೀಶ ಮಾಯಣ್ಣನವರ, ಸಂಜು ಗೌಡಗೇರಿ, ಅಶೋಕ ದೇವಗಿರಿ, ನಿಂಗಪ್ಪ ನಾಗರವಳ್ಳಿ, ಹನುಮಂತ ಮಲ್ಲಿಗಾರ, ನಿಂಗಪ್ಪ ಗಾಜಿಯವರ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.