ನಾಳೆ ವಿಚಾರ ಸಂಕಿರಣ
ಹಾನಗಲ್ಲ: ಪರಿಶಿಷ್ಟ ಜಾತಿ ಹಾಗೂ ವರ್ಗಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮ ಕುರಿತು ಅ. 31ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದ್ದು, ಶಾಸಕ ಮನೋಹರ ತಹಶೀಲ್ದಾರ ಉದ್ಘಾಟಿಸುವರು. ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ ಅಧ್ಯಕ್ಷತೆ ವಹಿಸುವರು. ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಸೋಮಣ್ಣ ಬೇವಿನಮರದ, ನಾಗರಾಜ ಛಬ್ಬಿ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಉಪಾಧ್ಯಕ್ಷೆ ಶೋಭಾ ನಿಸ್ಸೀಮಗೌಡರ, ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಹರಿಜನ, ತಾಪಂ ಉಪಾಧ್ಯಕ್ಷೆ ಅನಿತಾ ಶಿವೂರ, ಪುರಸಭೆ ಉಪಾಧ್ಯಕ್ಷ ಮಹಮ್ಮದ ಜಾಫರ್ ಕೇಣಿ, ಜಿಪಂ ಸದಸ್ಯರಾದ ಪದ್ಮನಾಭ ಕುಂದಾಪುರ, ಬಸವರಾಜ ಹಾದಿಮನಿ, ಗೀತಾ ಅಂಕಸಖಾನಿ, ಕಸ್ತೂರೆವ್ವ ವಡ್ಡರ, ಮಹಾದೇವಪ್ಪ ಬಾಗಸರ, ಅಬಿದಾಭಿ ನದಾಫ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಲ್ಲೇಶಪ್ಪ ಹೊರಪೇಟಿ, ಜಿಲ್ಲಾ ದೌರ್ಜನ್ಯ ಸಮಿತಿ ಸದಸ್ಯ ಚಂದ್ರಪ್ಪ ಹರಿಜನ, ಮುಖಂಡರಾದ ವೀರಪ್ಪ ಮಡ್ಲೂರ, ನಿಂಗಪ್ಪ ಕಾಳೇರ, ಹನುಮಂತಪ್ಪ ಯಳ್ಳೂರ, ಬಸವರಾಜ ಕಟ್ಟೀಮನಿ, ಪರಶುರಾಮ ಹುಳ್ಳಿಕಾಸಿ, ನಾಗರಾಜ ಬಾರ್ಕಿ, ಜಗದೀಶ ಹರಿಜನ, ಪರಮೇಶ್ವರ ನಾಯ್ಕ, ನಿಂಗಪ್ಪ ಗಾಳೆಮ್ಮನವರ ಅತಿಥಿಗಳಾಗಿ ಪಾಲ್ಗೊಳ್ಳುವರು. ನ್ಯಾಯವಾದಿ ಕೆ.ಬಿ. ದೊಡ್ಡಮನಿ, ಪಿಎಸ್ಐ ಮಹಾದೇವ ಯಲಿಗಾರ, ಉಪನ್ಯಾಸಕ ಮಾರುತಿ ಶಿಡ್ಲಾಪುರ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮ ಕುರಿತು ಉಪನ್ಯಾಸ ನೀಡುವರು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಪ್ಪ ನರಸಗೊಂಡರ ತಿಳಿಸಿದ್ದಾರೆ.
ಪಟಾಕಿ ಮಾರಾಟಕ್ಕೆ ಸ್ಥಳ
ಹಾವೇರಿ: ಜಿಲ್ಲೆಯಾದ್ಯಂತ ನ. 2ರಿಂದ 4ರ ವರೆಗೆ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಅವಧಿಯಲ್ಲಿ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಜನದಟ್ಟಣೆ ಹೆಚ್ಚಾಗುತ್ತದೆ. ಸಾರ್ವಜನಿಕ ಹಿತದೃಷ್ಟಿಯಿಂದ, ಅಹಿತಕರ ಘಟನೆ ತಪ್ಪಿಸುವ ಸಲುವಾಗಿ ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಅಧಿಕೃತ ಲೈಸೆನ್ಸ್ದಾರರು ತಮ್ಮ ಅಂಗಡಿಗಳಲ್ಲಿ ಪಟಾಕಿ ಮಾರಾಟ ಮತ್ತು ಸಂಗ್ರಹ ಮಾಡುವುದನ್ನು ಅ. 31ರಿಂದ ನ. 5ರ ವರೆಗೆ ನಿಷೇಧಿಸಲಾಗಿದೆ. ಈ ಕೆಳಗಿನ ಸ್ಥಳಗಳಲ್ಲಿ ತಾತ್ಕಾಲಿಕ ಶೆಡ್ಗಳನ್ನು ನಿಯಮಾನುಸಾರ ನಿರ್ಮಿಸಿಕೊಂಡು, ಸುರಕ್ಷತೆಯ ಎಲ್ಲ ವ್ಯವಸ್ಥೆ ಅಳವಡಿಸಿಕೊಂಡು ಪಟಾಕಿ ಸಂಗ್ರಹ, ಮಾರಾಟ ಮಾಡುವಂತೆ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಆದೇಶ ನೀಡಿದ್ದಾರೆ. ಆದೇಶ ಉಲ್ಲಂಘಿಸಿದರೆ ಪರವಾನಿಗೆದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಕಟಣೆ ತಿಳಿಸಿದೆ.
ಮಾರಾಟದ ಸ್ಥಳಗಳು: ಹಾವೇರಿ: ಮುನ್ಸಿಪಲ್ ಹೈಸ್ಕೂಲ್ ಮೈದಾನ, ಬ್ಯಾಡಗಿ: ತಾಲೂಕು ಕ್ರೀಡಾಂಗಣ, ರಾಣಿಬೆನ್ನೂರು: ಕ್ರೀಡಾಂಗಣ ಬಯಲು ಜಾಗೆ, ಹಿರೇಕೆರೂರು: ಸಾರ್ವಜನಿಕ ಸ್ಥಳ, ಕಲಾಭವನದ ಹತ್ತಿರ, ಶಿಗ್ಗಾಂವಿ: ಸಂತೆ ಮೈದಾನ, ಸವಣೂರು: ಭರಮದೇವರ ಗ್ರೌಂಡ್, ಹಾನಗಲ್ಲ: ನ್ಯೂ ಕಾಂಪೋಸಿಟ್ ಜ್ಯೂನಿಯರ್ ಕಾಲೇಜು ಮೈದಾನ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

