ಹಾವೇರಿ

ಕೈಗೆ ಬಂದ ತುತ್ತು...!

Published On :

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಅ. 30
ತಾಲೂಕಿನಾದ್ಯಾಂತ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರೈತನ ಕೈಗೆ ಬಂದ ತುತ್ತು ಬಾರದ ಹಾಗೆ ಆಗಿದೆ.
ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಳಭಾಗದಲ್ಲಿ ತಡಸದಿಂದ ಲಕ್ಕಿಕೊಪ್ಪದ ವರೆಗೆ ಮಲೆನಾಡು ಪ್ರದೇಶವಾಗಿದೆ. ಇಲ್ಲಿ ಬತ್ತ, ಗೋವಿನಜೋಳ, ಸೋಯಾಬಿನ್, ಕಬ್ಬು ಮುಂತಾದ ಬೆಳೆಗಳು ಕೊಯ್ಲಿಗೆ ಬಂದಿವೆ. ಆದರೆ, ಮಳೆಯಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಇತ್ತೀಚೆಗೆ ಕಾಲುಬಾಯಿ ರೋಗದಿಂದ ಜಾನುವಾರುಗಳು ಸಾವನ್ನಪ್ಪಿ ಸಂಕಷ್ಟ ಅನುಭವಿಸಿದ ಅನ್ನದಾತನಿಗೆ ಮಳೆ ಗಾಯದ ಮೇಲೆ ಬರೆ ಎಳೆದಿದೆ.
ಕೊಯ್ಲಿಗೂ ಮಳೆ ಅಡ್ಡಿ
ಕೊಯ್ಲಿಗೆ ಮುಂದಾಗಿದ್ದ ರೈತರಿಗೆ ಮಳೆ ಅಡ್ಡಿಯಾಗಿದೆ. ಗೋವಿನಜೋಳ ಮುರಿದ ತೆನೆಗಳು ಮಳೆಯಲ್ಲಿ ಬಿದ್ದರೆ ಮೊಳಕೆಯೊಡೆಯುತ್ತವೆ. ಹತ್ತಿ, ಬತ್ತದ ಬೆಳೆಯೂ ನಾಶವಾಗುತ್ತಿದೆ. ಸರ್ಕಾರ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಮನೆಗಳಿಗೆ ಸರ್ಕಾರವ ಅತಿವೃಷ್ಟಿಗೊಳಗಾಗಿ ಹಾನಿಗೀಡಾದ ಬಡ ರೈತರಿಗೆ ಹಾಗೂ ಮನೆಗಳ ಬಿದ್ದು ಹಾನಿಗೊಳಗಾದ ಕುಟುಂಬಗಳಿಗೆ ತಕ್ಷಣ ಪರಿಹಾರ ಘೋಷಿಸಬೇಕು. ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಪರಿಶೀಲನೆ ಮಾಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬಯಲು ಸೀಮೆ ಭಾಗದಲ್ಲೂ ಶೇಂಗಾ ಭೂಮಿಯಲ್ಲೇ ಮೊಳಕೆಯೊಡೆದರೆ, ಗೋವಿನ ಜೋಳವೂ ಮೊಳಕೆ ಒಡೆಯುವ ಹಂತ ತಲುಪಿದೆ. ಹತ್ತಿ ಕಾಯಿಗಳು ಒಡೆದು, ಮಳೆಯಲ್ಲಿ ತೋಯುತ್ತಿವೆ. ಮೆಣಸಿನಕಾಯಿ ಹಣ್ಣಾಗಿದ್ದು, ಗಿಡದಲ್ಲೇ ಕೊಳೆಯುತ್ತಿವೆ. ರೈತರು ಸಾಲ ಮಾಡಿ, ಬೀಜ, ಗೊಬ್ಬರ ಹಾಗೂ ಕೃಷಿ ಕೆಲಸಕ್ಕೆ ಸಾಕಷ್ಟು ಖರ್ಚು ಮಾಡಿದ್ದಾರೆ. ಈಗ ಖರ್ಚೂ ಹುಟ್ಟದ ಸ್ಥಿತಿಯಲ್ಲಿದ್ದಾರೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದ್ದಾರೆ.
4000 ಹೆಕ್ಟೇರ್ ಬೆಳೆಹಾನಿ
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ೤ ಜಿ. ಬಸವರಾಜ ಅವರ ಸಮೀಕ್ಷೆ ಪ್ರಕಾರ 4000 ಹೆಕ್ಟೇರ್‌ಗೂ ಹೆಚ್ಚು ಬಿಟಿ ಹತ್ತಿ ಹಾನಿಗೊಳಗಾಗಿದೆ. ದುಂಡಶಿ ಹೋಬಳಿಯಲ್ಲಿ ಗೋವಿನಜೋಳ ಹಾಳಾಗಿದೆ. ಬತ್ತ ಕೊಯ್ಲಿಗೆ ಬಂದಿದ್ದು, ಮಳೆಯಿಂದ ಹಾನಿಯಾಗಿಲ್ಲ. ಈ ಕುರಿತಾದ ವರದಿಯನ್ನು ಅರು ಮೇಲಧಿಕಾರಿಗಳಿಗೆ ಕಳುಹಿಸಿದ್ದಾರೆ.
137 ಮನೆ ಕುಸಿತ
ತಾಲೂಕಿನಲ್ಲಿ 137 ಮನೆಗಳು ಕುಸಿದಿರುವ ಕುರಿತು ಅರ್ಜಿಗಳು ಬಂದಿದ್ದು, 58 ಮನೆಗಳಿಗೆ ಪರಿಹಾರ ನೀಡಲಾಗಿದೆ. ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ತಹಸೀಲ್ದಾರ್ ಶಕುಂತಲಾ ಎ. ಚೌಗುಲೆ ಹೇಳಿದರು.


- ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.