ಹಾವೇರಿ

ಆಹಾ..! ಏನ್ ರುಚಿ ಐತ್ರಿ

Published On :

ಶಿಗ್ಗಾಂವಿ:  ರೈತರು, ಬಡವ, ಹಾಗೂ ಕೂಲಿಕಾರ್ಮಿಕರ ಊಟದಲ್ಲಿ ತಾಯಿ ಕೊಡುವ ತುತ್ತಿನ ವಾತ್ಸಲ್ಯವಿದೆ. ಶ್ರಮದಿಂದ ದುಡಿದು ತಿನ್ನುವ ಊಟದಲ್ಲಿ ತಾಯಿಯ ಶಕ್ತಿಯುತವಾದ ಹಾಲಿನ ಶಕ್ತಿ ಅಡಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಕಂಕನವಾಡ ಗ್ರಾಮದಲ್ಲಿ ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಗ್ರಾಮದ ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿರುವ ಸಂದರ್ಭದಲ್ಲಿ ಹೊರವಲಯದ ಹೊಲವೊಂದರಲ್ಲಿ ರಸ್ತೆ ಬದಿಯಲ್ಲಿ ಊಟ ಮಾಡುತ್ತಿರುವ ಕೃಷಿ ಕಾರ್ಮಿಕರು ಊಟಕ್ಕೆ ಕರೆದಾಗ ಅವರೊಂದಿಗೆ ಶಾಸಕ ಬೊಮ್ಮಾಯಿ ಹಾಗೂ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ರೈತರ ಜತೆಗೆ ಜೋಳದ ರೊಟ್ಟಿ ಮೆಣಸಿನ ಹಿಂಡಿಯ ರುಚಿ ಹಂಚಿಕೊಂಡು ಮಾತನಾಡಿದರು. ಅವರು ಊಟ ಮಾಡಿದ್ದು ಕೃಷಿಕರಲ್ಲಿ ಹರ್ಷ ತಂದಿತು.
ತಾಲೂಕು ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಜಿಪಂ ಸದಸ್ಯ ಬಿ.ಟಿ. ಇನಾಮತಿ, ಶಶಿಧರ ಹೊನ್ನಣ್ಣವರ ಹಾಗೂ ತಾಪಂ ಸದಸ್ಯ ಫರೀದಾಬಾನು ಶೇಕಸನದಿ, ನ್ಯಾಯವಾದಿ ಎಸ್.ಕೆ. ಅಕ್ಕಿ. ಹಿರೆಮಲ್ಲೂರ ಗ್ರಾಪಂ ಅಧ್ಯಕ್ಷೆ ನಿರ್ಮಲಾ ಹರಿಜನ, ಸದಸ್ಯೆ ಮಂಜುಳಾ ಕಂಕನವಾಡ, ಮಾನಪ್ಪ ಕಮ್ಮಾರ, ಮಂಜುನಾಥ ಕಂಕನವಾಡ, ಸುರೇಶ ಹರಿಜನ, ಮೌನೇಶ ವಾಲ್ಮೀಕಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಸಂತೋಷ ಹುಣಶ್ಯಾಳ. ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸಾಗರ ಮಲ್ಲೂರ, ರಾಜು ಸಂಶಿ, ಹಲವಾರು ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.