ರಾಸು ಖರೀದಿಗೆ ಅರ್ಹರಿಂದ ಅರ್ಜಿ ಆಹ್ವಾನ
ಹಾವೇರಿ: ರಾಜ್ಯ ಸರ್ಕಾರದ ಅಮೃತ ಯೋಜನೆಯಲ್ಲಿ ಧಾರವಾಡ ಸಹಕಾರಿ ಹಾಲು ಒಕ್ಕೂಟದ ವ್ಯಾಪ್ತಿಯ ಹಾವೇರಿ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅರ್ಹ ಫಲಾನುಭವಿಗಳಿಗೆ ರು. 35 ಸಾವಿರ ವೆಚ್ಚದಲ್ಲಿ ರಾಸು ಖರೀದಿಸಲು ಅರ್ಹ ಫಲಾನುಭವಿಗಳಿಂದ ಫೆ.15ರೊಳಗೆ ಅರ್ಜಿ ಆಹ್ವಾನಿಸಲಾಗಿದೆ. ಅಮೃತ ಯೋಜನೆ ಫಲಾನುಭವಿಗಳಿಗೆ ಶೇ.50ರ ಅನುದಾನವಿದ್ದು, ಉಳಿದ ಶೇ.50ರಷ್ಟನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ. ವಿಶೇಷ ಘಟಕ ಯೋಜನೆ ಫಲಾನುಭವಿಗಳಿಗೆ ಶೇ. 60 ಅನುದಾನವಿದ್ದು, ಉಳಿದ ಹಣವನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ. ಗಿರಿಜನ ಉಪಯೋಜನೆ ಫಲಾನುಭವಿಗಳಿಗೆ ಶೇ.75 ಅನುದಾನವಿದ್ದು, ಉಳಿದ ಶೇ. 25ರಷ್ಟನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ.
ಫಲಾನುಭವಿಗಳು ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾಗಿರಬೇಕು ಹಾಗೂ 60 ವರ್ಷದೊಳಗಿನವರಾಗಿರಬೇಕು. ಅಮೃತ ಯೋಜನೆಗೆ ಫಲಾನುಭವಿಗಳು ವಿಧವೆ, ಸಂಕಷ್ಟಕೊಕ್ಕಳಗಾದ ಮಹಿಳೆಯರು ಹಾಗೂ ದೇವದಾಸಿಯಾಗಿರಬೇಕು. ವಿಶೇಷ ಘಟಕ ಯೋಜನೆಗೆ ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಗೆ ಪರಿಶಿಷ್ಟ ಪಂಗಡದ ಸದಸ್ಯರಾಗಿರಬೇಕು. ಆಸಕ್ತ ಅಭ್ಯರ್ಥಿಗಳು ಅರ್ಜಿಯೊಂದಿಗೆ ಗುರುತಿನ ಚೀಟಿ, ಇತ್ತೀಚಿನ ಎರಡು ಪಾಸ್ಪೋರ್ಟ್ ಸೈಜಿನ ಭಾವಚಿತ್ರಗಳು, ಜಾತಿ ಹಾಗೂ ಆದಾಯ ಪ್ರಮಾಣಪತ್ರ, ಸಂಘದ ಠರಾವು ಹಾಗೂ ವಿಧವಾ, ದೇವದಾಸಿ ಪ್ರಮಾಣಪತ್ರ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಧಾರವಾಡ ಸಹಕಾರಿ ಹಾಲು ಒಕ್ಕೂಟದ ಉಪಕಚೇರಿ, ಪಶುವೈದ್ಯ ಆಸ್ಪತ್ರೆ, ಹಾವೇರಿಯಲ್ಲಿ ಜಿಲ್ಲಾ ಮುಖ್ಯಸ್ಥರನ್ನು ಅಥವಾ ಒಕ್ಕೂಟದ ಆಯಾ ಮಾರ್ಗದ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಧಾರವಾಡ ಸಹಕಾರಿ ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

