ಸುದ್ದಿ ಸಂಕ್ಷೇಪ
ಕಾಗಿನೆಲೆ: ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ
ಹಾವೇರಿ: ಬ್ಯಾಡಗಿ ತಾಲೂಕಿನ ಕಾಗಿನೆಲೆ ಕನಕದಾಸ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಈಚೆಗೆ ಸೈಕಲ್ ವಿತರಣೆ ಮಾಡಲಾಯಿತು. ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಅರವಿಂದಪ್ಪ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ವಿದ್ಯಾರ್ಥಿಗಳಿಗೆ ಅಕ್ಷರದಾಸೋಹ ಬಿಸಿಯೂಟ ಯೋಜನೆ, ಕ್ಷೀರಭಾಗ್ಯ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಹಾಕಿಕೊಂಡು ಶಿಕ್ಷಣಕ್ಕೆ ಹೆಚ್ಚಿನ ಹಣ ಖರ್ಚು ಮಾಡುತ್ತಿದೆ. ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು.ಮುಖ್ಯೋಪಾಧ್ಯಾಯ ಎಂ.ಬಸವರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರದ ಎಲ್ಲಾ ಯೋಜನೆಗಳನ್ನು ಪಡೆದು ಓದಿನತ್ತ ಹೆಚ್ಚು ಗಮನ ಹರಿಸಬೇಕು. ಪಾಲಕರೂ ಮಕ್ಕಳ ಓದಿನ ಬಗ್ಗೆ ಹೆಚ್ಚಿನ ಗಮನಹರಿಸಿ ವಿದ್ಯಾರ್ಥಿಗಳನ್ನು ತಪ್ಪದೆ ಶಾಲೆಗೆ ಕಳುಹಿಸಲು ಮನವಿ ಮಾಡಿದರು. ಮಹದೇವಪ್ಪ ಪೂಜಾರ, ಅಯೂಬಖಾನ್ ಮಲ್ಲೂರ, ವೀರನಗೌಡ ಪಾಟೀಲ, ಚನ್ನಬಸಪ್ಪ ಕೋಡಿಹಳ್ಳಿ, ಎಂ.ಎಂ. ಕಾಗಿನೆಲೆ, ಪಿ.ಎಂ. ಶಿಡೇನೂರ, ವಿ.ಆರ್. ಕೆಂಡದಮಠ ಇದ್ದರು.
ಜಲ್ಲಾಪುರದಲ್ಲಿ ಗಾಡಾ ಓಡಿಸುವ ಸ್ಪರ್ಧೆ
ಸವಣೂರು: ಕ್ರೀಡೆ ಮನರಂಜನೆ ಜೊತೆಗೆ ಹಳ್ಳಿಯ ಸಂಸ್ಕೃತಿ ಬಿಂಬಿಸುವ ಗಾಡಾ ಓಡಿಸುವ ಸ್ಪರ್ಧೆ ಜ. 11ರಂದು ಸವಣೂರು ತಾಲೂಕಿನ ಜಲ್ಲಾಪುರ ಗ್ರಾಮದಲ್ಲಿ ನಡೆಯಲಿದೆ. ತಾಲೂಕಿನ ಜಲ್ಲಾಪುರ ಗ್ರಾಮದ ಬಸವೇಶ್ವರ ಭಜನೆ ಸಂಘ ಹಾಗೂ ಜಲ್ಲಾಪುರ ಗ್ರಾಮದ ಸಮಸ್ತ ನಾಗರಿಕರ ಸಹಕಾರದೂಂದಿಗೆ ಗ್ರಾಮದ ರೇಲ್ವೆ ಸ್ಟೇಶನ್ ಎದುರು ಮಾಹಾಲಿಂಗಪ್ಪ ಹಾಗೂ ಯಲ್ಲಪ್ಪ ರಾ. ರೊಡ್ಡಣ್ಣನವರ ಹೊಲದಲ್ಲಿ ಏರ್ಪಡಿಸಲಾಗಿದೆ. ಬಸವೇಶ್ವರ ಭಜನೆ ಸಂಘ ಹಾಗೂ ಜಲ್ಲಾಪುರ ಗ್ರಾಮದ ಸಮಸ್ತ ನಾಗರಿಕರು ಪ್ರಕಟಣೆ ತಿಳಿಸಿದೆ.
ಬಿಜೆಪಿ ಕಾರ್ಯಕರ್ತನ ಅಸಮಾಧಾನ
ಹಾವೇರಿ: ಕೆಜೆಪಿಯು ಬಿಜೆಪಿಯೊಂದಿಗೆ ವಿಲಿನಗೊಳ್ಳುವದರಿಂದ ಮೂಲ ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯವಾಗುವುದರ ಮೂಲಕ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಲಿದೆ ಎಂದು ಬಿಜೆಪಿ ಕಾರ್ಯಕರ್ತ ಮೃತ್ಯುಂಜಯ ಗುರುಮಠ ಹೇಳಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಕ್ಷದ ತತ್ವಸಿದ್ಧಾಂತ ಒಪ್ಪಿಕೊಂಡು ವಾಜಪೇಯಿ, ಆಡ್ವಾಣಿ ಅವರಂತಹ ರಾಷ್ಟ್ರ ನಾಯಕರನ್ನು ನೋಡಿ ಬೆಳೆದ ನಾನು 25 ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೇ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ಸ್ವಾರ್ಥಕ್ಕಾಗಿ ಪಕ್ಷ ಒಡೆದು ಮತ್ತೆ ಬಿಜೆಪಿ ಸೇರುತ್ತಿರುವ ಕೆಜೆಪಿ ಕಾರ್ಯಕರ್ತರಿಂದ ಮೂಲ ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯವಾಗಲಿದೆ. ಇದರಿಂದ ಪಕ್ಷದ ಸಿದ್ಧಾಂತವನ್ನೂ ಗಾಳಿಗೆ ತೂರಿದಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

