ಹಾವೇರಿ

ಸಂಭ್ರಮದ ಈದ್ ಮಿಲಾದ್

Published On :

ಹಾವೇರಿ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ ಈದ್ ಮಿಲಾದ್ ಹಬ್ಬವನ್ನು ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದಿಂದ ಆಚರಿಸಿದರು.
ಹಬ್ಬದ ನಿಮಿತ್ತ ಬೆಳಗ್ಗೆಯಿಂದ ಪ್ರವಾದಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಗರದಲ್ಲಿ ಈದ್ ನಿಮಿತ್ತ ಬೃಹತ್ ಮೆರವಣಿಗೆ ನಡೆಯಿತು. ಹೂವನ್ನು ಚೆಲ್ಲುತ್ತ ಮೆಕ್ಕಾ, ಮದೀನಾ ಪ್ರತಿಕೃತಿಗಳನ್ನು ಒಯ್ಯಲಾಯಿತು. ನಗರದ ಹಜರತ್ ಮೆಹಬೂಬ್ ಸುಭಾನಿ ದರ್ಗಾದಿಂದ ಆರಂಭವಾದ ಮೆರವಣಿಗೆ, ಮಾನೆಗಾರ ಓಣಿ, ಮೈಲಾರ ಮಹಾದೇವ ವೃತ್ತ, ಗಾಂಧಿ ವೃತ್ತ, ಗುರುಭವನ, ಜೆ.ಎಚ್. ಪಟೇಲ್ ವೃತ್ತ, ಖಬರ್‌ಸ್ತಾನ್, ದಾವಲ್ ಮಲ್ಲಿಕ್ ದರ್ಗಾ, ಅಂಬೇಡ್ಕರ್ ವೃತ್ತ, ದ್ಯಾಮವ್ವನ ಪಾದಗಟ್ಟಿ ಮೂಲಕ ಹಾಯ್ದು ದರ್ಗಾಕ್ಕೆ ಮರಳಿತು.
ಮೆರವಣಿಗೆಯಲ್ಲಿ ಭಾಗವಹಿಸಿದರಿಗೆ ಕುಡಿಯಲು ನೀರು, ಶರಬತ್, ಸಿಹಿ ತಿಂಡಿ ಹಾಗೂ ನಾನಾ ಬಗೆಯ ಹಣ್ಣು ವಿತರಣೆ ಮಾಡಲಾಯಿತು. ಅಂಜುಮನ್ ಸಮಿತಿ ಅಧ್ಯಕ್ಷ ಐ.ಯು. ಪಠಾಣ, ಪ್ರಮುಖರಾದ ನಜೀರ್ ಅಹ್ಮದ್, ಅಲ್ಲಾಭಕ್ಷ ತಿಮ್ಮಾಪುರ, ಸುಭಾನಿ ಚೂಡಿಗಾರ, ಅಬ್ದುಲ್ ರಜಾಕ್ ಜಮಾದಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.