ವರುಣನಿಗಾಗಿ ಗಾರ್ದಭ ವಿವಾಹ!
ಕೋಲಾರ: ಕಳೆದ ವರ್ಷದಂತೆ ಈ ಬಾರಿಯೂ ನಗರದಲ್ಲಿ ಮಳೆರಾಯನ ಕೃಪೆಗಾಗಿ ಭಕ್ತರ ಬಳಗದಿಂದ ಕತ್ತೆಗಳ ಮದುವೆ ಶಾಸ್ತ್ರೋಕ್ತವಾಗಿ ನಡೆಯಿತು.
ಗಂಡು-ಹೆಣ್ಣು ಕತ್ತೆಗಳನ್ನು ವಧು-ವರರೋಪಾದಿಯಲ್ಲಿ ಸಿಂಗಾರಗೊಳಿಸಿ ಸಾಂಪ್ರದಾಯಿಕವಾಗಿ ಪೂಜೆ-ಪುನಸ್ಕಾರಗಳನ್ನು ನೆರವೇರಿಸಿ, ಊರಿನಲ್ಲಿ ಕತ್ತೆಗಳ ಮೆರವಣಿಗೆಯ ನಂತರ ನಗರದ ನಲ್ಲಗಂಗಮ್ಮ ದೇವಾಲಯದಲ್ಲಿ ಶುಕ್ರವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಮದುವೆ ಕಾರ್ಯ ನಡೆಸಲಾಯಿತು.
ಮಳೆಗಾಗಿ ಭಕ್ತರ ಪ್ರಾರ್ಥನೆ: ಈ ವಿಶಿಷ್ಟ ರೀತಿಯ ಕಾರ್ಯಕ್ರಮಕ್ಕೆ ಮಳೆರಾಯನ ನೂರಾರು ಭಕ್ತರು ಸೇರಿ ಕತ್ತೆಗಳ ಮದುವೆ ಸಾಕ್ಷಿಕರಿಸಿದರು. ಜಿಲ್ಲೆಯಲ್ಲಿ ಮಳೆ ಬಾರದೆ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ತತ್ತರಿಸುತ್ತಿವಂತಾಗಿದೆ. ಬೆಳೆಗಳು ಬತ್ತುತ್ತಿರುವುದರಿಂದ ವರುಣರಾಯ ಕರುಣೆ ತೋರು ಎಂದು ಭಕ್ತರು ಪ್ರಾರ್ಥಿಸಿದರು.
ಮೆರವಣಿಗೆ: ಕತ್ತೆಗಳಿಗೆ ಮದುವೆ ನಂತರ ನಗರದ ಆದಿ ದೇವತೆ ಕೋಲಾರಮ್ಮ ದೇವಾಲಯದವರೆಗೂ ಮಳೆರಾಯನ ಮೆರವಣಿಗೆ ನಡೆಸಲಾಯಿತು, ಅಲ್ಲಿ ಪೂಜೆ ನಡೆದ ನಂತರ ಕೋಲಾರಮ್ಮ ಕೆರೆಯಲ್ಲಿರುವ ದುಗ್ಗಮ್ಮ ಹಾಗೂ ಕೊಡಿ ಗಂಗಮ್ಮ ದೇವಿಗೆ ಪೂಜೆ ಸಲ್ಲಿಸಿ ಕೆರೆಯಲ್ಲಿ ಮಳೆರಾಯನನ್ನು ವಿಸರ್ಜನೆ ಮಾಡಲಾಯಿತು.
ನಗರಸಭೆ ಮಾಜಿ ಸದಸ್ಯ ಶ್ರೀರಾಮಪ್ಪ, ಮುಖಂಡರಾದ ಗೋವಿಂದರಾಜು, ದೊಡ್ಡಹಸಾಳ ಚಿಕ್ಕ ಮುನಿಯಪ್ಪ, ಖಾದ್ರಿಪುರ ಮುನೆಯ್ಯ, ರಾಜಣ್ಣ ಮತ್ತಿತರರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬಾಬು ಎಂಬುವರು ಮಳೆರಾಯನನ್ನು ಹೊತ್ತಿದ್ದರು, ಸೋಮು ಮಾಂಗಲ್ಯಧಾರಣೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

