ಕೋಲಾರ

ವೃತ್ತಿ ಧರ್ಮಕ್ಕೆ ಧಕ್ಕೆಯಾಗದಂತೆ ಸೇವೆ ಸಲ್ಲಿಸುವುದೇ ಗುರಿಯಾಗಲಿ'

Published On :

ಕ.ಪ್ರ.ವಾರ್ತೆ ಗೌರಿಬಿದನೂರು ಆ.2
ಕರ್ತವ್ಯದಲ್ಲಿ ನಿಷ್ಠಾವಂತರಾಗಿ ಸಮಾಜದ ರಕ್ಷಣೆಗೆ ದುಡಿದ ನಿವೃತ್ತ ಪೊಲೀಸ್ ಅಧಿಕಾರಿಗಳಾದ ಎಎಸ್‌ಐ ಸುಲ್ತಾನ್ ಬೇಗ್ ಹಾಗೂ ಮುಖ್ಯ ಪೇದೆ ಎಂ.ಎಸ್. ಅಮರನಾಥ್ ಸೇವೆ ಪ್ರಶಂಸನೀಯ ಎಂದು ಡಿಎಸ್‌ಪಿ ಎ.ಬಿ. ದೇವಯ್ಯ ತಿಳಿಸಿದರು.
ಮಂಚೇನಹಳ್ಳಿ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಎಸ್‌ಐ ಮತ್ತು ಮುಖ್ಯ ಪೇದೆ ನಿವೃತ್ತಿಯಾದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವೃತ್ತಿ ಧರ್ಮಕ್ಕೆ ಚ್ಯುತಿ ಬಾರದಂತೆ ನಿಷ್ಠೆ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಸಮಾಜಘಾತಕ ಶಕ್ತಿಗಳಿಗೆ ಜಗ್ಗದೆ ಈ ಅಧಿಕಾರಿಗಳು ಸೇವೆ ಸಲ್ಲಿಸಿದ್ದಾರೆ. ವಿವಿಧ ಸ್ಥಳಗಳಲ್ಲಿ ನಾಗರೀಕರ ರಕ್ಷಣೆಗೆ ಹಗಲಿರುಳು ಶ್ರಮಿಸಿ ತಮ್ಮ ವೃತ್ತಿ ಬದುಕು ಸಾರ್ಥಕಪಡಿಸಿಕೊಂಡಿದ್ದಾರೆ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಹೆಸರು ಪಡೆದು, ಸೇವೆಯಿಂದ ನಿವೃತ್ತರಾಗಿದ್ದಾರೆ ಎಂದರು.
ತಾಲೂಕು ದಂಡಾಧಿಕಾರಿ ಡಾ.ಭಾಸ್ಕರ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವುದೆಂದರೆ,  ಸಮಾಜ ರಕ್ಷಕನ ಕೆಲಸ. ಆಕಸ್ಮಿಕವಾಗಿ ಸಮಾಜದಲ್ಲಿ ಹಲವು ಹತ್ತು ಸಮಸ್ಯೆ ಸೃಷ್ಟಿಯಾದಾಗ ಎಷ್ಟೇ ಪ್ರಭಾವ ಬೀರಿದರೂ ಸತ್ಯ-ನ್ಯಾಯದ ರಕ್ಷಣೆ ಮಾಡಬೇಕಾದ ಸಂದರ್ಭ ಬರುತ್ತದೆ. ಅಂತಹ ಸಂದರ್ಭಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಕರ್ತವ್ಯವನ್ನು ನಿಭಾಯಿಸುವುದೇ ಪ್ರಮುಖವಾಗುತ್ತದೆ ಎಂದರು.
ಗೌರಿಬಿದನೂರು ವೃತ್ತ ನಿರೀಕ್ಷಕ ವಿ.ಲಕ್ಷ್ಮಯ್ಯ, ಪಿಎಸ್‌ಐಗಳಾದ ಯಶವಂತ್, ಸೂರ್ಯಪ್ರಕಾಶ್, ಸುಧಾಕರ್ ರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಮತ್ತು ನಾಗರೀಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.