ಕೋಲಾರ

ಕಾಲೇಜು ಶಿಕ್ಷಣ ಇಲಾಖೆ ಸಿಬ್ಬಂದಿ ಆಯುಕ್ತರ ಮೇಲೆ 'ಲೋಕಾ' ಕೆಂಗಣ್ಣು

Published On :

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ಸಿಬ್ಬಂದಿ ವಿರುದ್ಧ ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಕೋಲಾರ ಭೇಟಿ ಸಂದರ್ಭದಲ್ಲಿ ಸ್ಥಳೀಯ ಸರ್ಕಾರಿ ಕಾಲೇಜುಗಳ ಅವ್ಯವಸ್ಥೆ ಹಾಗೂ ಉಪನ್ಯಾಸಕರ ಗೈರು ಹಾಜರಿ ಹಿನ್ನೆಲೆಯಲ್ಲಿ ಇಲಾಖೆ ಆಯುಕ್ತರು ಹಾಗೂ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಈ ಅಸಮಾಧಾನ ವ್ಯಕ್ತಪಡಿಸಿದ ಅವರು, ಮೂರು ತಿಂಗಳಿಗೊಮ್ಮೆ ಕಾಲೇಜುಗಳ ಸ್ಥಿತಿಗತಿ ಹಾಗೂ ನಿರ್ವಹಣೆ ಸಂಬಂಧ ಲೋಕಾಯುಕ್ತಕ್ಕೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಇದರ ಜತೆಗೆ 4 ಮಹತ್ವದ ಸೂಚನೆಯನ್ನು ಇಲಾಖೆಗೆ ನೀಡಿದ್ದಾರೆ
- ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರ ಹಾಜರಿ ಸಮಸ್ಯೆ ಇದೆ. ಹೀಗಾಗಿ ಎಲ್ಲ ಕಾಲೇಜುಗಳಲ್ಲಿ ಬಯೋವುಟ್ರಿಕ್ ಹಾಜರಿ ವ್ಯವಸ್ಥೆ ಕಲ್ಪಿಸಬೇಕು.
- ಇಲಾಖೆ ಆಯುಕ್ತರು, ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರು ಪ್ರತಿ ತಿಂಗಳು ಕನಿಷ್ಠ ಐದು ಕಾಲೇಜುಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಬೇಕು. ಮಾತ್ರವಲ್ಲ ಈ ಬಗ್ಗೆ ಲೋಕಾಯುಕ್ತ ನಿಬಂಧಕರಿಗೆ ವಸ್ತುಸ್ಥಿತಿ ವರದಿ ನೀಡಬೇಕು.
- ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳ ಗುಣಮಟ್ಟ ಹೆಚ್ಚಿಸುವ ಜತೆಗೆ ಫಲಿತಾಂಶದ ಪ್ರಮಾಣ ಜಾಸ್ತಿಯಾಗುವಂತೆ ಕ್ರಮಕೈಗೊಳ್ಳಬೇಕು.
- ಪ್ರತಿದಿನ ಸಂಬಂಧಪಟ್ಟ ಕಾಲೇಜಿನ ಉಪನ್ಯಾಸಕರು ತಮಗೆ ಆ ದಿನ ನಿಗದಿಯಾದ ತರಗತಿಯ ವಿವರವನ್ನು ಪ್ರಾಂಶುಪಾಲರಿಗೆ ಈ- ಮೇಲ್ ಮೂಲಕ ನೀಡಬೇಕು. ಇದಕ್ಕೆ ಪ್ರತಿಯಾಗಿ ಪ್ರಾಂಶುಪಾಲರು ಆ ವಿವರವನ್ನು ಇಲಾಖಾ ನಿರ್ದೇಶಕರಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಇದರಿಂದ ಉಪನ್ಯಾಸಕರು ಹಾಜರಿಯಿಂದ ತಪ್ಪಿಸಿಕೊಳ್ಳುವುದು ನಿಲ್ಲುತ್ತದೆ.

ಊರು ಬಿಟ್ಟು ಎಲ್ಲೂ ಹೋಗಿಲ್ಲ: ರಾಮೇಗೌಡ
ಮಾಲೂರು: ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ತಾವು ಊರು ಬಿಟ್ಟು ಹೋಗಿದ್ದಾರೆ ಎಂದು ರಾಜಕೀಯ ವಿರೋಧಿಗಳು ಅಪಪ್ರಚಾರ ಮಾಡಿತ್ತಿದ್ದು, ಮಾಲೂರಿನಲ್ಲೇ ಇದ್ದು ಕಾರ್ಯಕರ್ತರ ರಾಜಕೀಯ ಆಶ್ರಯಕ್ಕಾಗಿ ರಾಜಕೀಯ ಮುಂದುವರೆಸಿದ್ದೇನೆ ಎಂದು ಮಾಜಿ ಜಿಪಂ ಮಾಜಿ ಸದಸ್ಯ ಜಿ.ಇ.ರಾಮೇಗೌಡ  ಶುಕ್ರವಾರ ಪಟ್ಟಣದ ತಮ್ಮ ಕಚೇರಿಯಲ್ಲಿ ಕೆರಯಲಾಗಿದ್ದ ಬೆಂಬಲಿಗರು, ಮುಖಂಡರ  ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ  ಅವರು ಮೇಲಿನಂತೆ ತಿಳಿಸಿದರು.
ಕಳೆದ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಪಡೆದ ಮತಗಳಿಗೆ ಸಮನಾಗಿ ಸ್ವತಂತ್ರ ಅಭ್ಯರ್ಥಿಯಾಗಿ 20 ಸಾವಿರ ಮತಗಳನ್ನು ಪಡೆದಿರುವ ನನಗೆ ಊರು ಬಿಡುವ ಪ್ರಮೇಯ ಬಂದಿಲ್ಲ. ಂಜಿನಿಯರ್ ಆಗಿ ಕಾರ್ಯ ನಿಮಿತ್ತ ರಾಜ್ಯದ ಇತರಡೆ ಹೋಗಬೇಕಾದ್ದು ಅನಿವಾರ್ಯ. ಇಲ್ಲೇ ಹುಟ್ಟಿ, ಬೆಳೆದ ತಮಗೆ ಇದೇ ಕರ್ಮ ಭೂಮಿಯಾಗಿದೆ ಎಂದರು. ನನ್ನನ್ನು ಆಶೀರ್ವದಿಸಿರುವ ಜನತೆಗಾಗಿ ತಾಲೂಕು ರಾಜಕೀಯದಲ್ಲೇ ಉಳಿದು ಜನ ವಿರೋಧಿ ಆಡಳಿತದ ವಿರುದ್ಧ ಹೋರಾಟ ನಡೆಸಲಿದ್ದೇನೆ ಎಂದರು.  ತಾಪಂ ಮಾಜಿ ಸದಸ್ಯ ಟಿ.ಮುನಿಯಪ್ಪ, ಮುಖಂಡ ರಾದ ಭುವನಹಳ್ಳಿ ಚೆನ್ನಪ್ಪ, ಟೇಕಲ್ ಶೀನಪ್ಪ, ಕೃಷ್ಣಾ ರೆಡ್ಡಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.