ಕೋರ್ಟ್ ಆದೇಶ: ಕಸಾಯಿಖಾನೆಗೆ ಬೀಗ
ಕ.ಪ್ರ.ವಾರ್ತೆ ಮಾಲೂರು ಆ. 2
ಲೋಕಾಯುಕ್ತ ನ್ಯಾಯಾಧೀಶ ಭಾಸ್ಕರ್ ರಾವ್ ಅವರ ಆದೇಶದ ಮೇರೆಗೆ ಸ್ಥಳೀಯ ಪುರಸಭೆ ಅಧಿಕಾರಿಗಳು ಇಲ್ಲಿನ ದೊಡ್ಡ ಮಸೀದಿ ಬಳಿ ಅಕ್ರಮವಾಗಿ ದನಗಳನ್ನು ಕತ್ತರಿಸಿ ಮಾರಾಟ ಮಾಡುತ್ತಿದ್ದ ಗೋಕಸಾಯಿ ಖಾನೆ ಮುಚ್ಚಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಪಟ್ಟಣದ ಗಾಯತ್ರಿ ವಿದ್ಯಾ ಶಾಲೆ ಪಕ್ಕದ ರಸ್ತೆಯಲ್ಲಿರುವ ದೊಡ್ಡ ಮಸೀದಿ ಬಳಿಯ ನಿವಾಸಿ ಸೈಯದ್ಖಾದಿರ್ ಎಂಬುವ ತನ್ನ ಮನೆ ಆವರಣದಲ್ಲೇ ಅಕ್ರಮವಾಗಿ ದನಗಳನ್ನು ಕಡಿದು ಮಾರಾಟ ಮಾಡುತ್ತಿದ್ದರು.
ಅಲ್ಲದೇ ಅದರ ಗಲೀಜನ್ನು ಅಲ್ಲೇ ಕೋಣೆಯಲ್ಲಿ ತುಂಬುತ್ತಿದ್ದರು. ಇದರಿಂದ ಬೀರುತ್ತಿದ್ದ ಕೆಟ್ಟ ವಾಸನೆಯಿಂದ ಬೇಸತ್ತ ಪಕ್ಕದ ನಿವಾಸಿ ಮಹಮದ್ ಮುನವರ್ ಪಾಷ ಎಂಬವರು ಸ್ಥಳೀಯ ಪುರಸಭೆಗೆ ದೂರು ನೀಡಿದ್ದರು. ಆದರೆ, ಇಲ್ಲಿನ ಪುರಸಭೆ ದೂರಿನ ಬಗ್ಗೆ ನಿರ್ಲಕ್ಷ ತೋರಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೋಲಾರಕ್ಕೆ ಭೇಟಿ ನೀಡಿದ್ದ ಲೋಕಾಯುಕ್ತ ನ್ಯಾಯಾಧೀಶರಿಗೆ ಕೋಲಾರ ಜಿಲ್ಲಾಧಿಕಾರಿ, ಮಾಲೂರು ಪುರಸಭೆ ಮುಖ್ಯಾಧಿಕಾರಿಯನ್ನು ಪಾಟಿ ಮಾಡಿ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಾಧೀಶ ಭಾಸ್ಕರ್ ರಾವ್ ನೀಡಿದ ಆದೇಶ ಮೇರೆಗೆ ಪುರಸಭೆ ಮುಖ್ಯಾಧಿಕಾರಿ ರೇಣುಕಾ, ಅಭಿಯಂತರರಾದ ಭಾನುಮತಿ, ಆರೋಗ್ಯಅಧಿಕಾರಿ ರಾಜಣ್ಣ, ರಮೇಶ್, ರವಿ ಅವರು ಸ್ಥಳೀಯ ಪೊಲೀಸರ ಸಹಕಾರದಲ್ಲಿ ಶುಕ್ರವಾರ ಸಂಜೆ ಧಾಳಿ ನಡೆಸಿ ಅಕ್ರಮ ಗೋಖಾಸಾಯಿ ಖಾನೆಯನ್ನು ಮುಚ್ಚಿಸಿದರಲ್ಲದೇ ಮಾಲೀಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

