ಇಂದು ಗ್ರಾಪಂ ಉಪ ಚುನಾವಣೆ
ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್, ಯಲ್ದೂರು ಗ್ರಾಮದ ಗ್ರಾಪಂ ಸದಸ್ಯರಿಬ್ಬರ ಅಕಾಲ ಮರಣದಿಂದ ತೆರವುಗೊಂಡಿದ್ದ ಗ್ರಾಪಂ ಎರಡು ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಲಿದೆ.
ಕೋಲಾರಕ್ಕೆ ಬಂತು ಮಳೆ
ಕೋಲಾರ: ಮೋಡಗಳ ಚೆಲ್ಲಾಟದಿಂದ ಬೇಸತ್ತಿದ್ದ ಜನತೆಗೆ ಮಳೆರಾಯನಿಂದ ಕೊನೆಗೂ ಸಾಂತ್ವನ ಸಿಕ್ಕಿತು. ರಾಜ್ಯದ ಎಲ್ಲ ಕಡೆ ಮುಂಗಾರು ಅಬ್ಬರಿಸಿ ನದಿಗಳು ಉಕ್ಕಿ ಹರಿದಿದ್ದರೂ ಬಯಲು ಸೀಮೆ ಜಿಲ್ಲೆಯಾದ ಕೋಲಾರಕ್ಕೆ ಮಾತ್ರ ವರುಣನ ಕೃಪಾಕಟಾಕ್ಷ ಸಿಕ್ಕಿರಲಿಲ್ಲ. ಇದರಿಂದ ಜನತೆ ದೇವರ ಮೊರೆ ಹೋಗಿದ್ದರು. ಶನಿವಾರ ರಾತ್ರಿ ಸುಮಾರು 40 ನಿಮಿಷ ಜೋರು ಮಳೆ ಸುರಿದಿದ್ದು, ಇದೀಗ ಜನತೆ ಸಂತಸಗೊಂಡಿದ್ದಾರೆ.
ಗಾಂಧಿ ತತ್ವಾದರ್ಶ ಪಾಲಿಸಿ: ಕದಿರಪ್ಪ
ಕೆಜಿಎಫ್: ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ದೇಶವನ್ನು ಆಳುವ ಪ್ರಜೆಗಳಾಗಬೇಕು. ಈ ನಿಟ್ಟಿನಲ್ಲಿ ಉತ್ತಮ ಗುಣ ಬೆಳೆಸಿಕೊಳ್ಳಬೇಕು ಎಂದು ಮುಖ್ಯಶಿಕ್ಷಕ ಕದಿರಪ್ಪ ಹೇಳಿದರು. ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರಾಪಂಚಿಕ ಜ್ಞಾನ ಹಾಗೂ ಬದುಕುವ ಕಲೆ ರೂಢಿಸಿಕೊಳ್ಳೆಂದೇ ದೇಶದಲ್ಲಿ ಮಹಾತ್ಮ ಗಾಂಧೀಜಿ ಅವರು ರಾಷ್ಟ್ರೀಯ ಸೇವಾ ಯೋಜನೆ ಪ್ರಾರಂಭಿಸಿದರು. ಮಕ್ಕಳು ಗಾಂಧೀಜಿ ಅವರ ತತ್ವಾದರ್ಶ ಪಾಲಿಸಿ, ಅಳವಡಿಸಿಕೊಳ್ಳಬೇಕು ಎಂದರು. ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಲ್.ಸುಬ್ರಮಣಾಚಾರಿ ಮಾತನಾಡಿ, ದೇಶ, ಗ್ರಾಮವನ್ನು ಸ್ವಚ್ಛಗೊಳಿಸಿ ತಮ್ಮ ಸುತ್ತಮುತ್ತಲಿನ ಉತ್ತಮ ಪರಿಸರ ಸಂರಕ್ಷಿಸಲು ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸಬೇಕು ಎಂದರು. ಇದೇ ಸಂದರ್ಭ ಸರ್ಕಾರ ವತಿಯಿಂದ 100 ಎನ್ಸಿಸಿ ವಿದ್ಯಾರ್ಥಿಗಳಿಗೆ ಡೈರಿ ಮತ್ತು ಬ್ಯಾಡ್ಜ್ಗಳನ್ನು ವಿತರಿಸಾಲಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಎನ್ಸಿಸಿ ಯೋಜನಾಧಿಕಾರಿ ಜಿ.ಪ್ರಭಾಕರ್ ರೆಡ್ಡಿ, ಶಿಕ್ಷಕರಾದ ಧನಲಕ್ಷ್ಮೀ, ಚಂದ್ರಪ್ಪ, ಎನ್ಸಿಸಿ ವಿದ್ಯಾರ್ಥಿಗಳು ಹಾಜರಿದ್ದರು.
ನಾರಾಯಣಪ್ಪಗೆ ಪಿಎಚ್.ಡಿ ಪ್ರದಾನ
ಗೌರಿಬಿದನೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬೆಂವಿವಿ ಘಟಿಕೋತ್ಸವದಲ್ಲಿ ಗೌರಿಬಿದನೂರು ತಾಲೂಕು ಮಂಚೇನಹಳ್ಳಿ ಹೋಬಳಿ ಕಾಟನಾಗೇನಹಳ್ಳಿಯ ಕನ್ನಡ ಪ್ರಾಧ್ಯಾಪಕ ಡಾ.ಕೆ.ಪಿ.ನಾರಾಯಣಪ್ಪ ಅವರಿಗೆ ಕುಲಪತಿ ಡಾ.ಬಿ.ತಿಮ್ಮೇಗೌಡ ಪಿಎಚ್.ಡಿ ಪದವಿ ಪ್ರದಾನ ಮಾಡಿದರು. ರಾಜ್ಯಪಾಲ ಎಚ್.ಆರ್.ಭಾರಧ್ವಾಜ್, ಖ್ಯಾತ ಗಾಯಕಿ ಬಿ.ಕೆ.ಸುಮಿತ್ರ, ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

