ಡಾ.ಶಂಕರೇಗೌಡರ ಫೀ ಮಾಫಿ!
-ಸುನಿತಾ
ಬೆಂಗಳೂರು: ಬಡವರು ಅಥವಾ ಮಧ್ಯಮ ವರ್ಗದವರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು ಅಸಾಧ್ಯ. ಏಕೆಂದರೆ ಅಲ್ಲಿಯ ದುಬಾರಿ ಶುಲ್ಕ ಭರಿಸಲು ಆಗಬೇಕಲ್ಲ.
ಇನ್ನು ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಇದೇ ಸ್ಥಿತಿ. ಲಂಚ ನೀಡದ ಹೊರತು ವೈದ್ಯರು ರೋಗ ತಪಾಸಣೆ ಮಾಡುವುದಿರಲಿ, ರೋಗಿಯನ್ನು ಮಾತೇ ಆಡಿಸುವುದಿಲ್ಲ.
ಇಂತಹವರಿಗೆ ಅಪವಾದ ಎನ್ನುವ ರೀತಿಯಲ್ಲಿ ವೈದ್ಯರೊಬ್ಬರಿದ್ದಾರೆ. ಎಲೆ ಮರೆ ಕಾಯಿಯಂತೆ ಅವರು ತಮ್ಮ ನಿಸ್ವಾರ್ಥ ಸೇವೆಯಿಂದ ಜನಾನುರಾಗಿಯಾಗಿದ್ದಾರೆ. ದಿನಬೆಳಗಾದರೆ ಜನರು ಅವರನ್ನು ಸ್ಮರಿಸುತ್ತಾರೆ.
ಆ ವೈದ್ಯರ ಹೆಸರು ಶಂಕರೇಗೌಡ, 30 ವರ್ಷಗಳಿಂದ ಇವರು ತಮ್ಮ ವೈದ್ಯಕೀಯ ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿದ್ದಾರೆ. ಚರ್ಮರೋಗ ತಜ್ಞರಾದ ಇವರು ತಮ್ಮ ಕ್ಲಿನಿಕ್ನಲ್ಲಿ ಚಿಕಿತ್ಸೆ ನೀಡಿದರೆ ಪಡೆಯುವ ಫೀಸ್ ಕೇವಲ ರು. 5.
ಅದು ಕ್ಲಿನಿಕ್ನ ಬಾಡಿಗೆಗೆ ಮಾತ್ರ. ಕ್ಲಿನಿಕ್ ಬಿಟ್ಟು ಹೊರಗಡೆ ತಪಾಸಣೆ ಮಾಡಿದರೆ ನೋ ಫೀಸ್. ಶಂಕರೇಗೌಡರು 1982ರಲ್ಲಿ ವೈದ್ಯಕೀಯ ಶಿಕ್ಷಣ (ಮಂಗಳೂರಿನ ಮಣಿಪಾಲ್ ಕಾಲೇಜಿನಲ್ಲಿ ಎಂಬಿಬಿಎಸ್, ಡಿವಿಡಿ) ಮುಗಿಸಿ, ಸ್ವಂತ ಊರು ಮಂಡ್ಯ ತಾಲೂಕಿನ ಶಿವಳ್ಳಿಯಲ್ಲಿ ಉಚಿತ ಸೇವೆಯಲ್ಲಿ ತೊಡಗಿದ್ದಾರೆ. ಗೌಡರು ಕೇವಲ ವೈದ್ಯರಲ್ಲ, ಜಿಪಂ ಉಪಧ್ಯಾಕ್ಷರು, ರೈತರೂ ಹೌದು.
ಚಿಕಿತ್ಸೆ ನೀಡಲು ಆಸ್ಪತ್ರೆಯೇ ಬೇಕಿಲ್ಲ!: ಬೆಳಗ್ಗೆ ಗದ್ದೆಯಲ್ಲಿ ಕೆಲಸ ಮುಗಿಸಿ, ನಂತರ ಶಿವಳ್ಳಿಯ ಮೇಲುಕೋಟೆ ಸರ್ಕಲ್ನಲ್ಲಿ ಒಂದು ಬೇಕರಿಯ ಮುಂದೆ ಕುಳಿತು ಬೆ.8ರಿಂದ ಮ.1 ಗಂಟೆವರೆಗೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. 30 ವರ್ಷಗಳಿಂದ ಇದೇ ಸರ್ಕಲ್ನಲ್ಲಿ ಉಚಿತ ಚಿಕಿತ್ಸೆ. ಮಂಡ್ಯದಲ್ಲೂ ಇವರ ಕ್ಲಿನಿಕ್ ಇದೆ.
ಒಂದು ವೇಳೆ ಗದ್ದೆಯಲ್ಲಿದ್ದಾಗ ರೋಗಿಗಳು ಬಂದರೆ ಅಲ್ಲಿಯೇ ಚಿಕಿತ್ಸೆ ನೀಡುವುದುಂಟು. ಚುನಾವಣಾ ಪ್ರಚಾರಕ್ಕಾಗಿ ಹೋದ ಕಡೆಯಲ್ಲೂ ತಮ್ಮ ಉಚಿತ ಸೇವೆಯಿಂದ ರೋಗಿಗಳನ್ನು ಪರೀಕ್ಷಿಸಿದವರು ಶಂಕರೇಗೌಡರು.
ಗೌಡರ ಕ್ಲಿನಿಕ್ಗೆ ಬೆಂಗಳೂರು, ಗುಲ್ಬರ್ಗ, ರಾಯಚೂರು, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ತಮಿಳುನಾಡು, ಒರಿಸ್ಸಾ ಮತ್ತು ಮುಂಬೈನಿಂದಲೂ ರೋಗಿಗಳು ಬರುತ್ತಾರೆ.
ರು. 5ರ ಡಾಕ್ಟರ್ ಎಂದೇ ಪ್ರಸಿದ್ಧಿ: ಮಂಡ್ಯದ ಸತ್ತುಮುತ್ತಲೂ ರು. 5ರ ಡಾಕ್ಟರ್ ಎಂದೇ ಶಂಕರೇಗೌಡರು ಪ್ರಸಿದ್ಧಿ. ಮಂಡ್ಯದ ವೈದ್ಯರ ಸಂಘ ಇವರನ್ನು ಕರೆದು “¬ÞÈÚâ ರು. 5ಕ್ಕೆ ಚಿಕಿತ್ಸೆ ನೀಡಿದರೆ ನಮ್ಮ ಸಂಪಾದನೆಗೆ ಪೆಟ್ಟು ¸¥Ú§M}æ’ ಎಂದು ಅಕ್ಷೇಪ ವ್ಯಕ್ತಪಡಿಸಿದರೂ ಕ್ಯಾರೆ ಎನ್ನಲಿಲ್ಲಿ. “Ôæ^Úß` ಮಾತನಾಡಿದರೆ ರು. 5ನ್ನೂ ಪಡೆಯುವುದಿಲ್ಲ, ಏನು ಬೇಕಾದರೂ ಮಾಡಿಕೊಳ್ಳಿ ÔæàÞW’ ಎಂದು ಗೌಡರು ಹೇಳಿದರಂತೆ.
ಚಿಕಿತ್ಸಾ ವೈಖರಿ: ಇವರ ಕ್ಲಿನಿಕ್ಗೆ ನಿತ್ಯ ಸುಮಾರು 500ರಿಂದ 600 ಚರ್ಮರೋಗ ಸಂಬಂಧಿ ರೋಗಿಗಳು ಬರುತ್ತಾರೆ. ಮಧ್ಯಾಹ್ನ 2ರಿಂದ ರಾತ್ರಿ 10ರವರೆಗೂ ಕ್ಲಿನಿಕ್ನಲ್ಲಿ ಜನವೋ ಜನ. ಇವರು 30ರಿಂದ 40 ರೋಗಿಗಳಿಗೆ ಒಮ್ಮೆಲೆ ಮುಖನೋಡಿ ಔಷಧ ನೀಡುತ್ತಾರೆ.
ರೋಗಿ ಏನನ್ನೂ ಹೇಳುವ ಹಾಗಿಲ್ಲ. ಸಮಸ್ಯೆ ಇರುವ ಜಾಗ ತೋರಿಸಿದರೆ ಸಾಕು. ವೈಯಕ್ತಿಕವಾಗಿ ಯಾರಿಗೂ ಚಿಕಿತ್ಸೆ ಮಾಡುವುದಿಲ್ಲ. ಆತನ ದೃಷ್ಟಿಯಲ್ಲಿ ಎಲ್ಲರೂ ಒಂದೇ ಅಂತೆ. ವ್ಯಕ್ತಿಗಳ ತಾರತಮ್ಯ ಭಾವನೆಯಿಂದ ದೂರ. ಅಷ್ಟೇ ಅಲ್ಲ ಇವರು ಮೊಬೈಲ್ ಫೋನ್ ಬಳಸುವುದಿಲ್ಲ. ಕ್ಲಿನಿಕ್ನಲ್ಲೂ ಪೋನ್ ಇಲ್ಲ. ಇದು ಶಂಕರೇಗೌಡರ ಚಿಕಿತ್ಸಾ ವಿಧಾನ.
ನನಗೆ ಯಾರೂ ಸ್ಫೂರ್ತಿಯಲ್ಲ. ಪ್ರಪಂಚವನ್ನು ನಾನೇ ನೋಡುತ್ತಿದ್ದೇನೆ. ನಾನು ಓದುವಾಗ ಸರ್ಕಾರ ಕೆಲಸ ಕೊಡುತ್ತಿರಲಿಲ್ಲ. ಈಗ ಕೋಟಿಗಟ್ಟಲೇ ಖರ್ಚು ಮಾಡಿದರೂ, ಗ್ರಾಮಿಣ ಭಾಗಗಳಲ್ಲಿ ಯಾವ ವೈದ್ಯರೂ ಕೆಲಸ ಮಾಡಲು ಬರುವುದಿಲ್ಲ. ನಮ್ಮ ದೇಶದಲ್ಲಿ ಸಾಮಾನ್ಯ ಮನುಷ್ಯರು ತಮ್ಮ ಆದಾಯದ ಶೇ.30 ರಷ್ಟು ಹಣವನ್ನು ಆರೋಗ್ಯಕ್ಕಾಗಿಯೇ ಖರ್ಚು ಮಾಡುತ್ತಿದ್ದಾರೆ ಎನ್ನುತ್ತಾರೆ ಶಂಕರೇಗೌಡರು.
ಆಸ್ಪತ್ರೆಗಳಲ್ಲಿ 2 ಸಾವಿರದಿಂದ 3 ಸಾವಿರ ಬಿಲ್ ಮಾಡೋದು ಮುರ್ಖತನ. ಬ್ರಿಟನ್ನಲ್ಲಿ ಆರೋಗ್ಯ ಸೇವೆ ಉಚಿತ. ನಮ್ಮಲ್ಲೂ ಹಾಗೆಯೇ ಆಗಲಿ. ಆರೋಗ್ಯ ಮತ್ತು ಶಿಕ್ಷಣ ಕಾನೂನುಗಳು ಬದಲಾಗಬೇಕು. ಸರ್ಕಾರ ಬಹಳಷ್ಟು ಯೋಜನೆಗಳನ್ನು ತಂದಿದ್ದರೂ, ಅದು ಶೇ.70ರಷ್ಟು ಜನರಿಗೆ ಸೇರುತ್ತಿಲ್ಲ. ಸರ್ಕಾರಿ ಆಸ್ವತ್ರೆಗಳಲ್ಲೇ ಹೀಗಾದರೆ, ಖಾಸಗಿಯಾವರು ಸುತ್ತಿ ಬಳಸಿ ಹಣ ಕೊಳ್ಳೆ ಹೊಡೀತಾರೆ. ಖಾಸಗಿ ಆಸ್ವತ್ರೆಗಳ ಮೇಲೆ ಸರ್ಕಾರದ ಹಿಡಿತವಿರಬೇಕು. ಜಿಲ್ಲೆಗೊಂದು ಮೆಡಿಕಲ್ ಕಾಲೇಜು ತೆರೆದರೆ ಇದಕ್ಕೆ ಪರಿಹಾರ ಸಿಗಬಹದು ಎನ್ನುತ್ತಾರೆ ಶಂಕರೇಗೌಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

