ಕೋಲಾರ

ಕಂಪನಿಗಳ ವಿರುದ್ಧ ಕ್ರಮಕ್ಕೆ ಆದೇಶ

Published On :

ಕ.ಪ್ರ.ವಾರ್ತೆ   ಕೆಜಿಎಫ್   ಆ.6
ಜಿಲ್ಲಾಧಿಕಾರಿ ಕಾರ್ಯಾಲಯ ಆದೇಶದ ಮೇರೆಗೆ ಬೆಸ್ಕಾಂ ಇಲಾಖೆ ವತಿಯಿಂದ ಕೆಜಿಎಫ್ ಕ್ಷೇತ್ರದ ಬಿಎಸ್ಐ ಪ್ರಮಾಣ ಪತ್ರ ಪಡೆಯದೇ ಪ್ಯಾಕೇಜ್ ಕುಡಿಯುವ ನೀರು ತಯಾರಿಸಿ ಮಾರಾಟ ಮಾಡುತ್ತಿರುವ ಘಟಕಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ನಿಯಮ ಉಲ್ಲಂಘಿಸಿದ ಅಂಥ ಘಟಕಗಳ ಅನುಮತಿ ರದ್ದುಗೊಳಿಸಲು ಉಚ್ಚನ್ಯಾಯಾಲದ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ 20 ದಿನಗಳ ಹಿಂದೆ ಬೆಂಗಳೂರಿನ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡ ಕೆಜಿಎಫ್ನ ಪ್ಯಾಕೇಜ್ ನೀರಿನ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಯಾವುದೇ ಘಟಕಕ್ಕೂ ಬಿಎಸ್ಐ ಪ್ರಮಾಣ ಪತ್ರ ಇಲ್ಲದೆ ನೀರು ತಯಾರಿಸಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ಸರ್ಕಾರ ಮತ್ತು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿತ್ತು.
ಈ ವರದಿ ಪ್ರಕಾರ ಸರ್ಕಾರ ವತಿಯಿಂದ ಆಯಾ ಜಿಲ್ಲಾಧಿಕಾರಿಗೆ ಬಿಎಸ್ಐ ಪ್ರಮಾಣ ಪತ್ರ ಇಲ್ಲದೆ ಕುಡಿಯುವ ನೀರು ಮಾರಾಟದ ಉದ್ದಿಮೆಗಳ ಪರವಾನಗಿ ರದ್ದುಗೊಳಿಸುವಂತೆ ಮತ್ತು ಈ ಘಟಕಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಧಿಕಾರಿ ಕಾರ್ಯಾಲಯ ಬೆಸ್ಕಾಂ ಇಲಾಖೆ, ನಗರಸಭೆ, ಆರೋಗ್ಯ ಸೇರಿದಂತೆ ಇತರೇ ಇಲಾಖೆಗಳಿಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಅದರಂತೆ ಬೆಸ್ಕಾಂ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೆಜಿಎಫ್ನಲ್ಲಿರುವ ಪ್ಯಾಕೇಜ್ ಕುಡಿಯುವ ನೀರು ತಯಾರಿಸಿ ಕ್ಯಾನ್ಗಳಲ್ಲಿ ಮಾರಾಟ ಮಾಡುತ್ತಿದ್ದ ಸೆವೆನ್ ಸ್ಟಾರ್, ಜಲಾಮೃತ, ಹರಿಕೃಷ್ಣ, ವಾಣಿ ವಾಟರ್, ಸುಪ್ರೀಂ ವಾಟರ್, ಅಕ್ಯುವಾ ಫ್ರೆಂಚ್, ಎಕ್ಸಲೆಂಟ್ ಅಕ್ಯುವಾ, ಎ.ಕೆ.ವಾಟರ್, ಮಾರುತ್ ವಾಟರ್, ಅಂಬಾ ಫಿನಾ, ಲಿಟಲ್ ಫ್ಲವರ್ ಹಾಗೂ ಸಂಜಯ್ ಅಕ್ಯುವಾ ಸೇರಿದಂತೆ ಒಟ್ಟು 11 ಘಟಕಗಳಿಗೆ  ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿರುವುದಾಗಿ ಬೆಸ್ಕಾಂ ಇಲಾಖೆ ಭಿಯಂತರರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.