ಹಾರೋಹಳ್ಳಿಗೆ ಶಿಕ್ಷಕಿ ನಿಯೋಜಿಸಿ
ಕ.ಪ್ರ.ವಾರ್ತೆ ಕೋಲಾರ ಆ.6
ಅನಾರೋಗ್ಯದಿಂದ ಬಳಲುತ್ತಿರುವ ಕೋಲಾರ ತಾಲೂಕಿನ ವಡಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿ ನಾಗರತ್ನ ಅವರನ್ನು ನಗರದ ಹಾರೋಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ನಿಯೋಜನೆ ಮಾಡಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳ ಸಂಯುಕ್ತ ರಂಗದಿಂದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ನಿಯೋಜನೆ ಕೋರಿ ಒಂದು ತಿಂಗಳ ಹಿಂದೆ ಮನವಿ ಮಾಡಲಾಗಿದೆಯಾದರೂ ನಿಯೋಜನೆಯ ಆದೇಶ ಪತ್ರ ನೀಡಿಲ್ಲವೆಂದು ಸಂಘಟನೆಯ ಮುಖಂಡರು ಆರೋಪಿಸಿದರು.
ನಾಗರತ್ನಮ್ಮ ಹೃದಯಘಾತದಿಂದ ಚಿಕಿತ್ಸೆ ಪಡೆಯುತ್ತಿರುವುದಲ್ಲದೆ ಇತ್ತೀಚೆಗೆ ನೇತ್ರ ಚಿಕಿತ್ಸೆಗೂ ಒಳಪಟ್ಟಿದ್ದಾರೆ. ವೈದ್ಯರು ಶಿಕ್ಷಕಿಯ ಆರೋಗ್ಯ ದೃಷ್ಟಿಯಿಂದ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ಗಾಳಿಯಲ್ಲಿ ಮತ್ತು ವಾಹನದಲ್ಲಿ ಓಡಾಡದಂತೆ ಸಲಹೆ ನೀಡಿರುವುದರಿಂದ ನಿಯೋಜನೆ ಅಗತ್ಯ ಎಂದು ಒತ್ತಾಯಿಸಿದ್ದಾರೆ.
ಶಿಕ್ಷಕಿ ನಿಯೋಜನೆಗಾಗಿ ಲಂಚ ಕೇಳುತ್ತಿರುವುದು ಗಮನಕ್ಕೆ ಬಂದಿದ್ದು ತಪ್ಪು ತಿದ್ದಿಕೊಳ್ಳದಿದ್ದರೆ ಸೇವೆಯಿಂದ ವಜಾಗೊಳಿಸುವಂತೆ ಹೋರಾಟ ಮುಂದುವರೆಸುವುದಾಗಿ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಡಿಡಿಪಿಐ ಪದ್ಮನಾಭ್ ಅವರು, ನಿಯೋಜನೆ ಮಾಡುವುದಕ್ಕೆ ನನ್ನ ವಿರೋಧವಿಲ್ಲ. ಆದರೆ, ವಡಗೂರು ಗ್ರಾಮಸ್ಥರು ಹಾಗೂ ಅಲ್ಲಿನ ಶಾಲೆಯ ಮಕ್ಕಳು ಪ್ರತಿಭಟನೆ ನಡೆಸಿದರೆ ಸಮಸ್ಯೆ ಹೇಗೆ ನಿವಾರಣೆ ಮಾಡಲು ಸಾಧ್ಯವೆಂದು ಸಮಾಧಾನ ಪಡಿಸಿದರಲ್ಲದೆ ಒತ್ತಡಕ್ಕೆ ಮಣಿದು ನಿಯೋಜನೆ ಪತ್ರ ನೀಡಿದರು. ಈ ಸಂದರ್ಭ ದಲಿತ ಸಂಘಟನೆಗಳ ಸಂಯುಕ್ತ ರಂಗದ ಮುಖಂಡರಾದ ಹಾರೋಹಳ್ಳಿ ನಾರಾಯಣಸ್ವಾಮಿ, ಮುನಿರಾಜು, ಸುರೇಶ್, ವೇಣು, ನಾಗರಾಜು, ಸುಬ್ರಮಣಿ ಮತ್ತಿತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

