ಕೋಲಾರ

ಪ್ರತಿಯೊಬ್ಬರಿಗೂ ಕಾನೂನು ಅರಿವು ಬೇಕು; ನ್ಯಾ. ಕೊಣ್ಣೂರ

Published On :

ಕ.ಪ್ರ.ವಾರ್ತೆ  ಕೆಜಿಎಫ್  ಆ. 9
ಪ್ರತಿಯೊಬ್ಬರಿಗೂ ಕಾನೂನಿನ ಬಗ್ಗೆ ಅರಿವು ಬೆಳೆಸಿಕೊಳ್ಳುವುದು ಅವಶ್ಯಕ ಹಾಗೂ ಕಾನೂನು ಕೊರತೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕಣಗಳಲ್ಲಿ ಭಾಗಿಯಾಗಿ ಸೆರೆವಾಸ ಅನುಭವಿಸುವಂತಾಗಿದೆ ಎಂದು ಕೆಜಿಎಫ್‌ನ ತ್ವರಿತ ವಿಲೇವಾರಿ ನ್ಯಾಯಾಧೀಶ ಕೆ.ಹೆಚ್. ಕೊಣ್ಣೂರ ಹೇಳಿದರು
ಕಾನೂನು ಸಾಕ್ಷರತಾ ರಥ ಯಾತ್ರೆಯ ಅಂಗವಾಗಿ ಕೆಜಿಎಫ್‌ನ ವಿಶೇಷ ಉಪಕಾರಾಗೃಹದಲ್ಲಿ ಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅದೇ ರೀತಿ ವಿವಿಧ ರೀತಿಯ ಅಪರಾಧ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುವವರಿಗೆ ಕಡ್ಡಾಯವಾಗಿ ಕಾನೂನು ಅರಿವಿನ ಬಗ್ಗೆ ಹೆಚ್ಚು ತಿಳಿವಳಿಕೆ ಬೆಳೆಸಿಕೊಂಡರೆ ತಾವು ಅಪರಾಧ ಮಾಡುವಾಗ ತಮ್ಮ ಮನಸ್ಸು ಇಂತಹ ಪ್ರಕರಣಗಳಿಗೆ ಒಪ್ಪಿಗೆ ಸೂಚಿಸುವುದಿಲ್ಲ ಹಾಗೂ ಈ ಅರಿವು-ನೆರವು ತಿಳಿವಳಿಕೆಯಿಂದ ತಮ್ಮ ಮಕ್ಕಳ ಮುಂದಿನ ಉತ್ತಮ ವಿದ್ಯಾಭ್ಯಾಸಕ್ಕೆ ಹಾಗೂ ಸಮಾಜದಲ್ಲಿ ಉತ್ತಮ ಸಂಸಾರ ನಡೆಸಲು ಸಾಧ್ಯ ಎಂದು ತಿಳಿಸಿದರು.
ಇದೇ ವೇಳೆ ಪ್ರಧಾನ ಸಿವಿಲ್ ನ್ಯಾಯಾಧೀಶ ಆರ್.ಪಿ. ನಂದೀಶ್ ಮಾತನಾಡಿ ಹಲವಾರು ಮಂದಿಗೆ ಕಾನೂನು ಅರಿವಿನ ಬಗ್ಗೆ ಯಾವುದೆ ತಿಳಿವಳಿಕೆ ಇಲ್ಲದ ಕಾರಣ ಇಂದು ವಿವಿಧ ರೀತಿ ಪ್ರಕರಣಗಳಿಗೆ ಸಂಬಂಧಿಸಿ ನ್ಯಾಯಾಲಯದ ಮೆಟ್ಟಿಲೇರುವ ಪ್ರಸಂಗ ಉಂಟಾಗಿದೆ. ಮಹಿಳೆಯರು, ವೃದ್ಧರು, ಮಕ್ಕಳು ಕಡ್ಡಾಯವಾಗಿ ಕಾನೂನು ಅರಿವು ಬಗ್ಗೆ ನೆರವು ಪಡೆದುಕೊಂಡು ತಮ್ಮ ಮುಂದಿನ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಹಾಯಕ ಸರ್ಕಾರಿ ಅಭಿಯೋಜಕ ಹಾಗೂ ಕಾರ್ಯಕಾರಿ ಸದಸ್ಯ ಕಾರ್ಯದರ್ಶಿ ಜಗದೀಶ್‌ಕುಮಾರ್, ವಕೀಲರಾದ ಎಸ್. ಆನಂದರಾಮಯ್ಯ, ಎಸ್. ಶ್ರೀನಿವಾಸಯ್ಯ, ಎನ್.ಎಂ. ವೆಂಕಟರಾಮಣಪ್ಪ, ಕೆ.ಸುಂದರರಾಮರೆಡ್ಡಿ, ಎಸ್.ಎನ್.ರಾಜಗೋಪಾಲಗೌಡ, ಆರ್.ಜ್ಯೋತಿಬಾಸು, ಕಲೈಸೆಲ್ವಿ, ಎನ್. ಮನೋಹರ್, ಪ್ರೀತಿ, ಉಪಕಾರಾಗೃಹ ಅಧೀಕ್ಷಕ ಕಾಶೀನಾಥ್ ಮೌನಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.