ಆಡಳಿತ ವೈಫಲ್ಯ ಖಂಡಿಸಿ 14ಕ್ಕೆ ಪ್ರತಿಭಟನೆ
ಚಿಂತಾಮಣಿ: ಜಿಲ್ಲಾ ಮತ್ತು ತಾಲೂಕು ಆಡಳಿತಗಳ ವೈಫಲ್ಯ ಖಂಡಿಸಿ ದಲಿತರ ಮೂಲಭೂತ ಹಕ್ಕುಗಳು ಮತ್ತು ಸಾಮಾಜಿಕ ಬದುಕಿನ ಭದ್ರತೆಗಾಗಿ ಒತ್ತಾಯಿಸಿ ಕರ್ನಾಟಕ ದಲಿತ ಸಂಘ ಸಮಿತಿ ವತಿಯಿಂದ ಸ್ವತಂತ್ರರಹಿತ ದಲಿತರ ಪಂಜಿನ ಪ್ರತಿಭಟನಾ ಮೆರವಣಿಗೆಯನ್ನು ಆ.14 ರಂದು ಹಮ್ಮಿಕೊಳ್ಳಲಾಗಿದೆಯೆಂದು ರಾಜ್ಯ ವಿಭಾಗೀಯ ಸಂಚಾಲಕ ಕವಾಲಿ ವೆಂಕಟರವಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ತಾಲೂಕು ಆಡಳಿತಗಳ ವೈಫಲ್ಯಗಳನ್ನು ಖಂಡಿಸಿ ಪಂಜಿನ ಮೆರವಣಿಗೆ ಹಮ್ಮಿಕೊಂಡಿದ್ದು, ಈ ಚಳವಳಿಗೆ ಬಹುಸಂಖ್ಯಾತ ಪ್ರಗತಿಪರರು, ವಿದ್ಯಾರ್ಥಿ ಯುವಮಿತ್ರರರು, ಅಲ್ಪಸಂಖ್ಯಾತ ಹಾಗೂ ತಾಲೂಕು, ನಗರ, ಹೋಬಳಿ ಗ್ರಾಮಮಟ್ಟದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಅವರು ಕೋರಿದ್ದಾರೆ.
ಹಕ್ಕೋತ್ತಾಯ
ಟಿ ಜಿಲ್ಲೆಗೆ ಶಾಶ್ವತ ನೀರಾವರಿ ಜಾರಿಯಾಗಬೇಕು. ಪರಮಶಿವಯ್ಯ ವರದಿ ಯಾಥಾವತ್ತಾಗಿ ಜಾರಿಗೊಳಿಸಬೇಕು.
ಟಿ ದಿನಗೂಲಿ ನೌಕರರು, ಅಂಗನವಾಡಿ ಕಾರ್ಯಕರ್ತರು, ಸೇವಾಕಾರ್ಯಕರ್ತರು, ಅಕ್ಷರದಾಸೋಹ, ಅಡುಗೆ ಸಹಾಯಕರು, ಗ್ರಾಮ ಸಹಾಯಕರಿಗೆ ಕನಿಷ್ಠ ವೇತನ ನೀಡಬೇಕು. 10 ವರ್ಷ ಸೇವೆ ಸಲ್ಲಿಸಿರುವವರಿಗೆ, ಸೇವಾ ಭದ್ರತೆ ನೀಡಬೇಕು.
ಟಿ ಫಾರೋ ನಂ.50 ಮತ್ತು 51 ರಲ್ಲಿ ಅರ್ಜಿ ಹಾಕಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಈ ಕೂಡಲೇ ಜಮೀನು ಮಂಜೂರು ಮಾಡಿಸಿಕೊಡುವುದು.
ಟಿ ಪಟ್ಟಣದ ಸರ್ಕಾರಿ ಮಹಿಳಾ ಪಪೂ ಕಾಲೇಜಿನ ಮುಂಭಾಗದ ಪೆಟ್ರೋಲ್ ಬಂಕ್ ಸೇರಿದಂತೆ ಎಲ್ಲಾ ಬಂಕ್ಗಳನ್ನು ಕೂಡಲೇ ಸ್ಥಳಾಂತರಿಸುವುದು.
ಟಿ ತಾಲೂಕಿನ ಕುರ್ಲಪಲ್ಲಿಗಡ್ಡ ವ್ಯಾಪ್ತಿಯಲ್ಲಿರುವ ಎನ್.ಕೊತ್ತೂರು ಕಾಲೋನಿಯವರಿಗೆ ಮೀಸಲಿಟ್ಟ ಸರ್ವೆ ನಂ.16/2ರ ಸ್ಮಶಾನ ಜಾಗ ಒತ್ತುವರಿಯಾಗಿದ್ದು ಕೂಡಲೇ ತೆರವುಗೊಳಿಸಿ ಸ್ಮಶಾನಕ್ಕೆ ಮುಳ್ಳು ತಂತಿ ಬೇಲಿ ಹಾಕಿಸಬೇಕು. ಜತೆಗೆ ಕತ್ತರಿಗುಪ್ಪೆ ಸ್ಮಶಾನ ತೆರವುಗೊಳಿಸಬೇಕು.
ಟಿ ಚಿಂತಾಮಣಿ ಪಟ್ಟಣದ ಹೃದಯ ಭಾಗದಲ್ಲಿರುವ ಖಾಸಗಿ ವಾಹನ ನಿಲ್ದಾಣವನ್ನು ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಾಮಗಾರಿ ಪ್ರಾರಂಭಿಸಬೇಕು.
ಟಿ ಬೋಡನಮರಿ ಸರ್ವೆ ನಂ.15 ಮುನಿಗೌಡ ಬಿನ್ ಓಬನ್ನ, ಮಾಜಿ ಸಿಪಾಯಿ ಅವರ ಕುಟುಂಬಕ್ಕೆ 4 ಎಕರೆ ಜಮೀನು ಮಂಜೂರಾಗಿದ್ದು, ಈ ಜಮೀನಿನಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಒತ್ತುವರಿ ಮಾಡುತ್ತಿದ್ದು ಇವರ ಜಮೀನಿಗೆ ಸುತ್ತಲೂ ಮುಳ್ಳುತಂತಿ ಬೇಲಿ ಹಾಕಿಸಿ ಈ ಜಮೀನನ್ನು ಒತ್ತುವರಿ ಮಾಡಿ ತೊಂದರೆ ಕೊಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ಇತರೆ ಬೇಡಿಕೆ ಈಡೇರಿಸುವಂತೆ ಈ ಪ್ರತಿಭಟನೆ ಹಮ್ಮಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

