ಕೋಲಾರ

ಮಳೆರಾಯನ ಮಣ್ಣಿನ ಮೂರ್ತಿಗಳ ಪೂಜೆ

Published On :

ಬಂಗಾರಪೇಟೆ: ಕ್ಷೇತ್ರವನ್ನು ಕಾಡುತ್ತಿರುವ ಬರದಿಂದ ಜನರು ನಾನಾ ಸಂಕಷ್ಟಗಳನ್ನು ಅನುಭವಿಸುತ್ತಿದ್ದು ಮಳೆರಾಯ ಕ್ಷೇತ್ರದ ಕಡೆ ಗಮನ ಹರಿಸಲೆಂದು ಗ್ರಾಮಸ್ಥರು ಮಳೆರಾಯನ 9 ಮಣ್ಣಿನ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ ಪ್ರಸಂಗ ತಾಲೂಕಿನ ಕಣಿಂಬೆಲೆ ಗ್ರಾಮದಲ್ಲಿ ಮಂಗಳವಾರ ನಡೆಯಿತು.  ಕಣಿಂಬೆಲೆ ಗ್ರಾಮಸ್ಥರು ಮಗಳವಾರ ಗ್ರಾಮದಲ್ಲಿ ಮಣ್ಣಿನಿಂದ ಮಾಡಿದ 9 ಮಳೆರಾಯನ ಮೂರ್ತಿಗಳನ್ನು ಹೊತ್ತು ಮನೆ ಮನೆಗೂ ತೆರಳಿ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು. ನಂತರ ಗ್ರಾಮದ ಹೊರವಲಯದಲ್ಲಿರುವ ಬಾವಿಯಲ್ಲಿ ಮಳೆದೇವರ ಮೂರ್ತಿಗಳನ್ನು ಬಿಟ್ಟು ಎಲ್ಲರಿಗೂ ಅನ್ನ ಸಂತರ್ಪಣೆ ಮಾಡಿದರು. ಈ ಎಲ್ಲಾ ಕಾರ್ಯಗಳ ನೇತೃತ್ವವನ್ನು ಗ್ರಾಮದ ಮುಖಂಡರಾದ ಶ್ರೀನಿವಾಸ್, ಮಂಜು, ನಾರಾಯಣಪ್ಪ, ರಾಮಪ್ಪ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.