ಜಿಲ್ಲಾದ್ಯಂತ ಸಡಗರದ ಸ್ವಾತಂತ್ರ್ಯೋತ್ಸವ
ಕ.ಪ್ರ.ವಾರ್ತೆ ಮಾಲೂರು ಆ. 16
ತಾಲೂಕಿನ ವಿವಿಧೆಡೆ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಕೃಷಿ ಉತ್ಪನ್ನ ಮಾರಾಟಗಾರರ ಸಂಘ: ಇಲ್ಲಿನ ಬೆಂಗಳೂರು ರಸ್ತೆಯಲ್ಲಿರುವ ತಾಲೂಕು ಕೃಷಿ ಉತ್ಪನ್ನ ಮಾರಾಟಗಾರರ ಸಂಘದ ಕಚೇರಿಯಲ್ಲಿ ನಡೆದ 67ನೇ ಸ್ವಾತಂತ್ರ್ಯೋತ್ಸವದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಂ.ವಿ. ವೇಮನ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಿಸಾನ್ ಹಾಗೂ ಜವಾನ್ ದೇಶವನ್ನು ಕಾಪಾಡುವ ಎರಡು ಕಣ್ಣುಗಳಿದಂತೆ. ಅವುಗಳನ್ನು ಪ್ರಾಮಾಣಿಕತೆಯಿಂದ ನಡೆಸಿ ದೇಶವನ್ನು ಪ್ರಂಪಚದಲ್ಲೇ ಮುಂಚೂಣಿಯಲ್ಲಿ ತರುವ ಶಕ್ತಿ ಅವರಿಬ್ಬರಲ್ಲಿ ಇದೆ ಎಂದರು.
ತಾಲೂಕು ಕಾರ್ಯದರ್ಶಿ ಸಿ.ಪಿ. ನಾಗರಾಜ್ ಮಾತನಾಡಿದರು. ಗುಟ್ಟಸ್ವಾಮಿ, ಮುನಿರೆಡ್ಡಿ, ಚಂದ್ರಪ್ಪ, ಸುಬ್ರಮಣಿ ರೆಡ್ಡಿ, ಬಿ.ಕೆ. ನಾಗರಾಜ್, ಕೃಷ್ಣಪ್ಪ ಇದ್ದರು.
ಪುರಸಭೆ: ಮಾಲೂರಿನ ಪುರಸಭೆಯಲ್ಲಿ ನಡೆದ 67ನೇ ಸ್ವಾತಂತ್ರ್ಯೋತ್ಸವದಲ್ಲಿ ಪುರಸಭೆ ಮುಖ್ಯಾಧಿಕಾರಿ ರೇಣುಕಾ ಧ್ವಜಾರೋಹಣ ನೆರವೇರಿಸಿದರು. ಪುರಸಭೆ ಸದಸ್ಯರು, ಅಭಿಯಂತರ ಭಾನುಮತಿ, ವಿಶ್ವನಾಥ್, ಮುರಳಿ, ಆರೋಗ್ಯಧಿಕಾರಿ ರಾಜಣ್ಣ, ಉದಯ್, ಸುಶೀಲಮ್ಮ, ರವಿ, ವಿನೋದ್, ರವಿ, ಭಾರತಿ, ನಂಜುಂಡಪ್ಪ, ಜ್ಯೋತಿ ಇದ್ದರು.
ತಾಲೂಕು ಪಂಚಾಯಿತಿ: ಇಲ್ಲಿನ ತಾಲೂಕು ಪಂಚಾಯಿತಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷ ಪುಟ್ಟಸ್ವಾಮಿ ಭಾಗವಹಿಸಿದ್ದರು. ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ, ಉಪಾಧ್ಯಕ್ಷೆ ರಾಜಮ್ಮ, ಗೋಪಾಲ್ಗೌಡ, ಎಸ್.ವಿ.ಲೋಕೇಶ್, ಆನಂದ್, ಪಾರ್ವತಮ್ಮ, ಆಶಾ ರಾಜಪ್ಪ, ಮೂರ್ತಿ, ರಮೇಶ್, ವ್ಯವಸ್ಥಾಪಕಿ ಭಾನುಮತಿ, ರಾಮಯ್ಯ ಇದ್ದರು.
ಹೆಡಗಿನ ಬೆಲೆ ಕಿರಿಯ ಪ್ರಾಥಮಿಕ ಶಾಲೆ: ತಾಲೂಕಿನ ಹೆಡಗಿನ ಬೆಲೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 67ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಯೂಕೇನ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ವಿಕ್ರಂ ರಾಜಗೋಪಾಲ್ ಸಾಮರಂಭದಲ್ಲಿ ಮಾತನಾಡಿ, ಗ್ರಾಮಸ್ಥರ ಸಹಕಾರವಿದ್ದರೆ ಒಂದು ಶಾಲೆಯ ಅಭಿವೃದ್ಧಿ ಜೊತೆಗೆ ಗ್ರಾಮದ ಶೈಕ್ಷಣಿಕ ಮಟ್ಟ ಹೆಚ್ಚಿಸಲಿದೆ ಎಂಬುಂದಕ್ಕೆ ಈ ಗ್ರಾಮವೇ ಸಾಕ್ಷಿಯಾಗಿದೆ. ಇಲ್ಲಿನ ಕಲಿಕೆಯ ವಾತಾವರಣ ಇತರೆ ಗ್ರಾಮಗಳಲ್ಲದೆ ಪಟ್ಟಣಗಳಿಗೂ ಮಾದರಿಯಾಗಿದೆ ಎಂದರು.
ಶಾಲೆಯ ಎಲ್ಲಾ ಮಕ್ಕಳಿಗೂ ಸಮವಸ್ತ್ರ, ಟೈ, ಬೆಲ್ಟ್ಗಳನ್ನು ಯುಕೇನ್ ಇಂಡಿಯಾ ಕಂಪನಿಯು ಹಾಗೂ ಗ್ರಾಮದ ಹಾಲು ಉತ್ಪಾದಕರ ಸಂಘವು ನೀಡಿದ ಹಾಲು ಕಾಯಿಸುವ ಪಾತ್ರೆ, ಸಲಕರಣೆಗಳನ್ನು ಹಾಗೂ ಗ್ಲಾಸ್ಗಳನ್ನು ದಾನಿಗಳಾದ ಪಟೇಲ್ ನಂಜೇಗೌಡ, ಕೃಷ್ಣಪ್ಪ ಹಾಗೂ ವಿಕ್ರಂ ರಾಗೋಪಾಲ್ ಅವರು ವಿತರಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಕರವೇ ಚೆನ್ನಕೃಷ್ಣ, ನಾಗೇಶ್, ವೈ.ನಾರಾಯಣಸ್ವಾಮಿ, ಗಂಗಣ್ಣ, ಮಾರಪ್ಪ, ಜೆ. ಮುನಿರಾಮಪ್ಪ, ಗಾಯಿತ್ರಿ, ಅನುಸೂಯ ಇದ್ದರು. ಶಿಕ್ಷಕ ಟಿ.ವಿ. ಶ್ರೀನಿವಾಸ್ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಆರ್. ನರಸಿಂಹ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

