ಕೋಲಾರ

ಬಂಗಾರಪೇಟೆ: ವಿವಿಧೆಡೆ ವರಲಕ್ಷ್ಮಿ ಹಬ್ಬ

Published On :

ಬಂಗಾರಪೇಟೆ: ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯ ನಡುವೆಯೂ ವರಲಕ್ಷ್ಮಿ ಹಬ್ಬವನ್ನು ಪಟ್ಟಣದಲ್ಲಿ ಮಹಿಳೆಯರು ವೈಭವವಾಗಿ ಆಚರಿಸಿದರು. ಬೆಳಗ್ಗೆಯಿಂದಲೇ ಮನೆಗಳ ಮುಂದೆ ರಂಗೋಲಿ ಬಿಡಿಸಿ ಮನೆಗಳಲ್ಲಿ ಲಕ್ಷ್ಮೀ ದೇವರ ಮೂರ್ತಿಗೆ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೇ ತುಂತುರು ಮಳೆಯಾಗುತ್ತಿದ್ದರಿಂದ ಮಹಿಳೆಯರು ಮನೆ ಮನೆಗೂ ಕುಂಕುಮಕ್ಕೆ ಹೋಗಿಬರಲು ಸ್ವಲ್ಪ ಮಟ್ಟಿಗೆ ಅಡ್ಡಿಯಾಯಿತು.


ಕೆಜಿಎಫ್ನಲ್ಲೂ ವಿಶೇಷ ಪೂಜೆ
ಕೆಜಿಎಫ್: ವಿವಿಧೆಡೆ ವರಮಹಾಲಕ್ಷ್ಮೀ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಶುಕ್ರವಾರ ಬೆಳಗ್ಗೆಯಿಂದಲೇ ಮಹಿಳೆಯರು ಮತ್ತು ಯುವತಿಯರು ತಮ್ಮ- ತಮ್ಮ ಮನೆಗಳಲ್ಲಿ ವರಮಹಾಲಕ್ಷ್ಮೀ ದೇವಿಗೆ ವಿವಿಧ ರೀತಿಯ ಹೂಗಳಿಂದ ಅದ್ಧೂರಿಯಾಗಿ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು. ಕುಟುಂಬಸ್ಥರೆಲ್ಲರೂ ಒಗ್ಗೂಡಿ ವರಲಕ್ಷ್ಮೀ ಹಬ್ಬದಲ್ಲಿ ಪಾಲ್ಗೊಂಡು ಸಡಗರದಿಂದ ಆಚರಿಸಿದರಲ್ಲದೆ ಸ್ಥಳಿಯ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ನೆರವೇರಿಸಿ ದೇವರ ಕೃಪೆಗೆ ಪಾತ್ರರಾದರು. ಅದೇ ರೀತಿ ನಗರಸಭೆ, ಪೊಲೀಸ್ ಠಾಣೆ, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಇತರೆ ಸರ್ಕಾರಿ ಇಲಾಖೆಗಳಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಅಧಿಕಾರಿಗಳು ಸಿಬ್ಬಂದಿ ಸಾರ್ವಜನಿಕರು ವಿಜೃಂಭಣೆಯಿಂದ ಆಚರಿಸಿದರು.



ಟೇಕಲ್ನಲೂ...
ಟೇಕಲ್: ಶ್ರಾವಣ ಮಾಸದ ಪ್ರಥಮ ಪೂಜೆಯಂದೆ ಪ್ರಸಿದ್ಧಿಯಾಗಿರುವ ಶುಕ್ರವಾರ ವರಮಹಾಲಕ್ಷ್ಮೀ ವ್ರತವು  ಜನತೆ ಬಹಳ ಸಂಭ್ರಮ ಸಡಗರದಿಂದ ಆಚರಿಸಿದರು.  ಕೆ.ಜಿ. ಹಳ್ಳಿಯ ಹೋಟೆಲ್ ಉದ್ಯಮಿ ಶಾರದರಾಮಮೂರ್ತಿ ಅವರ ಮನೆಯಲ್ಲಿ ಅವರ ಕುಟುಂಬ ವರ್ಗ ಬಹಳ ಸರಳ ರೀತಿಯಿಂದ ವರಮಹಾಲಕ್ಷ್ಮೀಯ ವ್ರತವನ್ನು ಆಚರಿಸಿದ್ದು ವಿಶೇಷವಾಗಿತ್ತು. ಸಂಪ್ರದಾಯದಂತೆ ತೆಂಗಿನಕಾಯಿಯಲ್ಲಿ ವರಮಹಾಲಕ್ಷ್ಮೀಯ ಮುಖ, ಕಣ್ಣು, ಮೂಗು ಮಾಡಿ ಅದಕ್ಕೆ ಆಕಾರ ಕೊಟ್ಟು ವಿಶೇಷವಾಗಿ ಪೂಜೆ ಮಾಡಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.