ಭದ್ರತಾ ಸಿಬ್ಬಂದಿ ಸೇರಿ 17 ಮಂದಿ ಬಂಧನ
ಕ.ಪ್ರ.ವಾರ್ತೆ ಕೆಜಿಎಫ್ ಆ. 17
ಕೆಜಿಎಫ್ನ ಬಿಜಿಎಂಎಲ್ ಚಿನ್ನದ ಗಣಿ ಮೈಸೂರು ಮಿಲ್ನೊಳಗೆ ಕಳವು ಮಾಡಲು ಪ್ರಯತ್ನಿಸಿದ ಮೂವರು ಬಿಜಿಎಂಎಲ್ ಭದ್ರತಾ ಸಿಬ್ಬಂದಿ ಸೇರಿ ಒಟ್ಟು 17 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಮಾರಿಕುಪ್ಪಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪೊಲೀಸರನ್ನು ಕಂಡ ಪ್ರಮುಖ ಆರೋಪಿ ಆರ್.ಮುತ್ತುಕುಮಾರ್ ಪರಾರಿಯಾಗಿದ್ದಾನೆ. ನರೇಂದ್ರಕುಮಾರ್ ಅಲಿಯಾಸ್ ಬಬ್ಲು (29), ಎಂ.ಪ್ರದೀಪ್ (26), ಪಿ.ಮುನಿಸ್ವಾಮಿ (60), ವಿ.ಸೆಲ್ವಂ (58), ಎ.ಸುಂದರಮೂರ್ತಿ (32), ಆರ್.ಕುಮಾರ್ (30), ಲಕ್ಷ್ಮೀಸಾಗರ ಗ್ರಾಮದ ನಿವಾಸಿಗಳಾದ ಆರ್.ರಾಜನ್ (30), ಪಿ.ಎಂ.ಕುಟ್ಟಿ (35), ಆರ್.ಸಂಪಂತ್ (40), ವಿ.ಶಿವಕುಮಾರ್ (32), ಪಳ್ಳಿ ವೆಂಕಟೇಶ್ (40), ವಿರುಪಾಕ್ಷಿಪುರ ನಿವಾಸಿಗಳಾದ ವಿ.ಬ್ಯಾಟಪ್ಪ (36). ಎಂ.ಬ್ಯಾಟರಾಯ (45), ಲಕ್ಕನಾಯಕನಹಳ್ಳಿ ಗ್ರಾಮದ ಎನ್.ಸತೀಶ್, ಬಿಜಿಎಂಎಲ್ ಭದ್ರತಾ ಸಿಬ್ಬಂದಿಗಳಾದ ಆರ್.ರಮೇಶ್ಕುಮಾರ್, ಸಂಪತ್ ಹಾಗೂ ಕೆ.ರಮೇಶ್ಕುಮಾರ್ ಅವರನ್ನು 2 ಚೀಲ ಚಿನ್ನ ಮಿಶ್ರಿತ ಮಣ್ಣು, ನಗದು ಸೇರಿದಂತೆ ಕಳ್ಳತನಕ್ಕೆ ಬಳಸಲಾದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಅಕ್ರಮ ಪ್ರವೇಶ: ಭಾರತ ಚಿನ್ನದ ಗಣಿ ಸಂಸ್ಥೆಯ ಮಾರಿಕುಪ್ಪಂನಲ್ಲಿರುವ ಮೈಸೂರು ಮಿಲ್ಲಿನಲ್ಲಿ ಚಿನ್ನ ಮಿಶ್ರಿತ ಮಣ್ಣನ್ನು ಕಳವು ಮಾಡುವ ಉದ್ದೇಶದಿಂದ ಬಿಜಿಎಂಎಲ್ ಭದ್ರತಾ ಸಿಬ್ಬಂದಿಗಳೊಂದಿಗೆ ಶಾಮೀಲಾಗಿ ಶುಕ್ರವಾರ ಮಧ್ಯ ರಾತ್ರಿ 15 ಮಂದಿ ಆರೋಪಿಗಳು ಮೈಸೂರು ಮಿಲ್ನಲ್ಲಿ ಅಕ್ರಮವಾಗಿ ಪ್ರವೇಶಿಸಿ ಚಿನ್ನ ಮಿಶ್ರಿತ ಮಣ್ಣನ್ನು ಅಗೆದು ಅದನ್ನು 2 ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಕೊಳ್ಳುತ್ತಿದ್ದಾಗ ರಾತ್ರಿ ಪಾಳೆಯ ಪೊಲೀಸ್ ಸಿಬ್ಬಂದಿ ಅವರನ್ನು ತಡೆಯಲು ಯತ್ನಿಸಿದರು. ಆಗ ಆರೋಪಿಗಳು ಪೊಲೀಸರ ಕತ್ತಿನ ಮೇಲೆ ಚಾಕುವನ್ನಿಟ್ಟು ಈ ವಿಷಯ ಎಲ್ಲೂ ತಿಳಿಸದಂತೆ ಮತ್ತು ಇಲ್ಲಿ ಕರ್ತವ್ಯ ನಿರ್ವಹಿಸದಂತೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಲಾಗಿದೆ.
ಪೊಲೀಸ್ ಸಿಬ್ಬಂದಿಗಳಾದ ಮಣಿಕಂಠ ಹಾಗೂ ನಾಗರಾಜರೆಡ್ಡಿ ಕೂಡಲೇ ಪೊಲೀಸ್ ಕಂಟ್ರೋಲ್ ರೂಮಿಗೆ ಮಾಹಿತಿ ನೀಡಿದರು. ಪೊಲೀಸ್ ರಕ್ಷಣಾಧಿಕಾರಿ ಡಾ. ರೋಹಿಣಿ ಕಟೋಚ್ ಸಫೆಟ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರಾಜಣ್ಣ ನೇತೃತ್ವದಲ್ಲಿ ಪಿಎಸ್ಐಗಳಾದ ಎನ್.ಸುರೇಶ್, ಜಿ.ಸಿ. ನಾರಾಯಣಸ್ವಾಮಿ, ಬಿ.ಆರ್. ಜಗದೀಶ್, ಮಾರ್ಕಂಡಯ್ಯ, ಎಲ್.ಆಂಜಪ್ಪ, ಎಸ್.ಆರ್. ಜಗದೀಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮಿಲ್ನಲ್ಲಿದ್ದ ಆರೋಪಿಗಳನ್ನು ಸುತ್ತುವರಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ತನಿಖೆ ನಡೆಸುವಂತೆ ಉಪರಕ್ಷಣಾಧಿಕಾರಿ ರಾಜಣ್ಣ ಅವರನ್ನು ನೇಮಿಸಿರುವುದಾಗಿ ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ ಸಫೆಟ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

