ಕೋಲಾರ

ಸಮರ್ಪಕ ಪಡಿತರಕ್ಕಾಗಿ ಪ್ರತಿಭಟನೆ

Published On :

ಕ.ಪ್ರ.ವಾರ್ತೆ   ಬಾಗೇಪಲ್ಲಿ   ಆ. 17
ಸರ್ಕಾರ ನಿಗದಿಪಡಿಸಿರುವ ದರ ಮತ್ತು ಅಳತೆ ಪ್ರಮಾಣದಲ್ಲಿ ಸೀಮೆಎಣ್ಣೆ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ವಿತರಣೆ ಮಾಡಬೇಕು, ಸರಿಯಾಗಿ ವಿತರಣೆ ಮಾಡದಿದ್ದ ಪಕ್ಷದಲ್ಲಿ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದುಗೊಳಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮುಂದೆ ತಾಲೂಕಿನ ವಾಸಪ್ಪರಾಳ್ಳಪಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದೇವರಗುಡಿಪಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಡಿ.ಎಸ್.ಎಸ್. ಮುಖಂಡ ಎಂ.ಜಿ. ಕಿರಣ್ಕುಮಾರ್, ಸರ್ಕಾರ ನಿಗದಿಪಡಿಸಿರುವ ದರ ಮತ್ತು ಅಳತೆಯಲ್ಲಿ ಬಿಪಿಎಲ್ ಕಾರ್ಡ್ಗಳಿಗೆ ವಿತರಣೆ ಮಾಡಬೇಕಾಗಿದ್ದ ತಾಲೂಕಿನ ಮಿಟ್ಟೇಮರಿ ಹೊಬಳಿ ವಾಸಪ್ಪರಾಳ್ಳಪಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಸೀಮೆಎಣ್ಣೆ ಅಳತೆಯಲ್ಲಿ ಕಡಿಮೆಗೊಳಿಸಿ ಹೆಚ್ಚಿನ ಬೆಲೆಯನ್ನು ಪಡೆಯುವ ಮೂಲಕ ಗ್ರಾಹಕರನ್ನು ವಂಚಿಸುತ್ತಿದ್ದಾರೆಂದು ಆರೋಪಿಸಿದರು.
ವಾಸಪ್ಪರಾಳ್ಳಪಲ್ಲಿ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಯ ಮಾಲೀಕ ಸರ್ಕಾರ ನಿಗದಿಪಡಿಸಿರುವ 1ಲೀಟಲ್ ಸೀಮೆಎಣ್ಣೆಗೆ 16.20 ನಂತೆ ಪ್ರತಿ ಕಾರ್ಡಿಗೂ 5 ಲೀಟರರ್ನೀಡಬೇಕು ಆದರೆ ಅವರು ಪ್ರತಿ ಲೀಟಲ್ ಸೀಮೆಎಣ್ಣೆಗೆ 19 ರು. ಹಾಗೂ 2-3 ಲೀಟರ್ ಸೀಮೆಎಣ್ಣೆಯನ್ನು ವಿತರಣೆ ಮಾಡುತ್ತಿದ್ದಾರೆ ಎಂದು ದೂರಿದ ಅವರು ಸಮರ್ಪಕವಾಗಿ ಸೀಮೆಎಣ್ಣೆ ಸೇರಿದಂತೆ ವಿವಿಧ ಪಡಿತರ ಪದಾರ್ಥಗಳನ್ನು ನೀಡುವಂತೆ ಒತ್ತಾಯಿಸಿ ಗ್ರಾಮಸ್ಥರು ಗ್ರಾಮದ ನ್ಯಾಯಬೆಲೆ ಅಂಗಡಿ ಮುಂದೆ ಕಳೆದ 3 ದಿನಗಳ ಹಿಂದೆ ನಡೆಸಿದ್ದು ತಹಸೀಲ್ದಾರ್ ಮತ್ತು ಆಹಾರ ನಿರೀಕ್ಷಕರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಅಂದು ಹೋದ ಅಧಿಕಾರಿಗಳು ಇದುವರವಿಗೂ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದನ್ನು ಖಂಡಿಸಿದರು.
ಸರ್ಕಾರ ನಿಗದಿ ಪಡಿಸಿರುವ ದರ ಮತ್ತು ಅಳತೆ ಪ್ರಮಾಣದಲ್ಲಿ ಸೀಮೆಎಣ್ಣೆ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ವಿತರಣೆ ಮಾಡುವಂತೆ ಒತ್ತಾಯಿಸಿದ ಅವರು ಬಡವರಿಗೆ ನೀಡುತ್ತಿರುವ ಆಹಾರ ಪದಾರ್ಥಗಳನ್ನು ಗೋಲ್ಮಾಲ್ ಮಾಡುವಂತಹ ನ್ಯಾಯ ಬೆಲೆ ಅಂಗಡಿ ಮಾಲೀಕರ ಪರವಾನಿಗೆಯನ್ನು ರದ್ದುಗೊಳಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಚೇರಿಯ ಮುಂದೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಉಪ ತಹಸೀಲ್ದಾರ್ ಎಸ್. ಮುನಿರಾಮಯ್ಯ ಹಾಗೂ ಆಹಾರ ವಿಭಾಗದ ಅಧಿಕಾರಿ ನರಸಿಂಹಮೂರ್ತಿರವರಿಗೆ  ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ  ಗ್ರಾಮಸ್ಥರಾದ ಅದೆಪ್ಪ, ಲಕ್ಷ್ಮೀನರಸಪ್ಪ, ಕೆ.ಎಸ್. ನಾರಾಯಣಸ್ವಾಮಿ, ವೈ.ವಿ.ನಾರಾಯಣಸ್ವಾಮಿ, ಅಕ್ಕುಲಪ್ಪ, ಜಯಚಂದ್ರ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.