ಕೋಲಾರ

ಅಕ್ರಮ ಮರಳು ಫಿಲ್ಟರ್ ದಂಧೆ ತಡೆಗೆ ಒತ್ತಾಯ

Published On :

ಕ.ಪ್ರ.ವಾರ್ತೆ ,  ಕೋಲಾರ ,  ಆ.19
ತಾಲೂಕಿನ ಚಲ್ಲಹಳ್ಳಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಫಿಲ್ಟರ್ ದಂಧೆಯನ್ನು ತಡೆಯಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗ್ರಾಮದ ದೊಡ್ಡಕೆರೆ ಮತ್ತು ಹೊಸಕೆರೆಯಲ್ಲಿ ವ್ಯಾಪಕ ಮರಳು ಫಿಲ್ಟರ್ ದಂಧೆ ನಡೆಯುತ್ತಿದ್ದು, ಇದರಿಂದ ಕೆರೆಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಚಲ್ಲಹಳ್ಳಿ ಗ್ರಾಮಕ್ಕೆ ಸೇರಿದ ವಿಜಿಕುಮಾರ್, ಅಂಬರೀಶ್, ಡಿ.ನಾರಾಯಣಸ್ವಾಮಿ ಸೇರಿದಂತೆ 20 ಜನರ ಗುಂಪು ರಾಜರೋಷವಾಗಿ ಕೆರೆಯ ರಾಜಕಾಲುವೆಗಳನ್ನು ಬಳಸಿಕೊಂಡು ಕೆರೆ ಮತ್ತು ಸ್ಮಶಾನದ ಜಾಗದಲ್ಲಿರುವ ಮಣ್ಣನ್ನು ತೆಗೆದು ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದಾರೆ ಎಂದರು.
ಹೊಸಕೆರೆ ಪಕ್ಕದಲ್ಲಿರುವ ಸರ್ವೆ ನಂ.56ರಲ್ಲಿನ ಗೋಮಾಳದಲ್ಲಿ 20 ಗುಂಟೆ ಜಮೀನನ್ನು ಮುನೇಶ್ವರಸ್ವಾಮಿ ಮತ್ತು ಹುಲಿಸೊಣ್ಣಪ್ಪಸ್ವಾಮಿ ದೇವಾಲಯಗಳಿಗೆ ಮೀಸಲಿಟ್ಟಿದ ಜಾಗದಲ್ಲಿಯೂ ಅಕ್ರಮ ಮರಳನ್ನು ದೋಚಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ರವಿಕುಮಾರ್, ಬೈರಪ್ಪ, ಕರಿಯಾಪ್ಪ, ಮೊಟ್ಟಪ್ಪ, ರಾಮಚಂದ್ರಪ್ಪ, ಮುನಿವೆಂಕಟಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.