ಕೋಲಾರ

ರಾಜೀವ್ ಗಾಂಧಿ, ಅರಸು ಜನ್ಮದಿನಾಚರಣೆ

Published On :

ಮಾಲೂರು: ಸ್ಥಳೀಯ ಕಾಂಗ್ರೆಸ್ ಘಟಕವು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ 69ನೇ ಹಾಗೂ ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು ಅವರ 98ನೇ ಜನ್ಮದಿನಾಚರಣೆಯನ್ನು ಮಂಗಳವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಬ್ರೆಡ್-ಹಣ್ಣು  ವಿತರಿಸುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು, ದೇಶದ ಅಭಿವೃದ್ಧಿಗೆ ಮಾಹಿತಿ ತಂತ್ರಜ್ಞಾನ ಮುಖ್ಯವೆಂದು ಅದನ್ನು ಅನುಷ್ಠಾನಗೊಳಿಸಿದ ಧೀಮಂತ ವ್ಯಕ್ತಿಯಾಗಿದ್ದ ರಾಜೀವ್ ಗಾಂಧಿ ಅವರು, ದೇಶದ ಭವಿಷ್ಯ ಯುವಕರ ಕೈಯಲ್ಲಿ ನೀಡಲು ಮತದಾನ ವಯೋವುತಿಯನ್ನು 18 ಕ್ಕೆ ಮಾಡಿದರು ಎಂದು ಹೇಳಿದರು.
ಎಲ್ಲ ವರ್ಗಗಳ ಜನತೆ ರಾಜಕೀಯದ ಅಧಿಕಾರ ಅನುಭವಿಸಲು ಕಾರಣವಾಗಿದ್ದ ರಾಜೀವ್ ಗಾಂಧಿ ಆದರ್ಶ ಇಂದಿನ ಯುವ ಜನಪ್ರತಿನಿಧಿಗಳು ಪಾಲಿಸಬೇಕಾಗಿದೆ ಎಂದ ಅವರು, ದೇಶದ ಬಗ್ಗೆ ಅವರು ಕಂಡ ಕನಸನ್ನು ನನಸು ಮಾಡಬೇಕಾಗಿದೆ ಎಂದರು.
ಕೆಪಿಸಿಸಿ ಸದಸ್ಯ ರಘುನಾಥ್ ಮಾತನಾಡಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ದೇಶದ ಬಗ್ಗೆ ದೂರದ ಆಲೋಚನೆ ಹೊಂದಿದ್ದರೆ, ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಹಿಂದುಳಿಂದ ವರ್ಗಗಳ ಆಶಾ ಕಿರಣವಾಗಿದ್ದರು. ಅವರ ಆಡಳಿತದಲ್ಲಿ ಹಿಂದುಳಿಂದ ವರ್ಗಗಳಿಗಾಗಿ ತೋರಿದ ಕಾಳಜಿ ಇದುವರೆಗೂ ಇನ್ಯಾವ ಮುಖ್ಯಮಂತ್ರಿಯಲ್ಲೂ ಕಂಡುಬಂದಿಲ್ಲ ಎಂದರು.
ಮಾಸ್ತಿ ಬ್ಲಾಕ್ ಅಧ್ಯಕ್ಷ ಚೆನ್ನರಾಯಪ್ಪ, ಕೆಪಿಸಿಸಿ ಸದಸ್ಯ ರಾಜಣ್ಣ, ವಕೀಲ ಸಂಘದ ಮಾಜಿ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ಮಾತನಾಡಿದರು. ಅಂಜನಿ ಸೋಮಣ್ಣ, ರಾಜಗೋಪಾಲ್ ರೆಡ್ಡಿ, ಕೋ.ನಾರಾಯಣ್, ಪ್ಲಾಸ್ಟಿಕ್ ಮುನಿಸ್ವಾಮಿ, ನಾರಾಯಣಸ್ವಾಮಿ, ಪಾಪರೆಡ್ಡಿ, ಮೋಹನ್, ಮದುಸೂಧನ್, ನಯೀಂ, ಸತೀಶ್, ಪ್ರವೀಣ್ ಕುಮಾರ್, ಬೋರ್ ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.