ಕೋಲಾರ

ಅರಸು ಹಿಂದುಳಿದ ವರ್ಗದವರ ಹರಿಕಾರ

Published On :

ಮಾಲೂರು: ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ಉದಯಿಸಲು ಕಾರಣಕರ್ತರಾಗಿದ್ಜ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರು ಹಿಂದುಳಿಂದ ವರ್ಗಗಳ ಹರಿಕಾರರಾಗಿದ್ದರು ಎಂದು ತಹಸೀಲ್ದಾರ್ ನಾಗರಾಜ್ ಹೇಳಿದರು.
ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು ಅವರ 98ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಬ್ಬ ಮುಖ್ಯಮಂತ್ರಿ ಅದವರಿಗೆ ಶೋಷಿತ ವರ್ಗಗಳ ಬಗ್ಗೆ ಹೇಗೆ ಕಾಳಜಿ ತೋರಿಸಬೇಕೆಂದು ತೋರಿಸಿಕೊಟ್ಟ ಧೀಮಂತ ನಾಯಕ ದೇವರಾಜ್ ಅರಸು ಅವರು ಹಿಂದುಳಿಂದ ವರ್ಗಗಳ ಶೈಕ್ಷಣಿಕ ಅಭಿವೃದ್ಧಿಯ ಜತೆಗೆ ಉಳುವವನಿಗೆ ಭೂಮಿ ಎಂಬ ಕಾನೂನಿನ ಮೂಲಕ ಬಡವರ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸಲು ಸಹಕರಿಸಿದರು ಎಂದರು. ಅವರು ತಮ್ಮ ಆಡಳಿತಾವಧಿಯಲ್ಲಿ ತಂದ ಶೈಕ್ಷಣಿಕ ಮೀಸಲಾತಿ ಫಲದಿಂದ ನಾನು ಈ ಮಟ್ಟಿಗೆ ಬೆಳೆದಿದ್ದು, ನನ್ನ ಆಡಳಿತದಲ್ಲೂ ಅವರ ಆದರ್ಶಗಳನ್ನು ಪಾಲಿಸುತ್ತಿದ್ದೇನೆ ಎಂದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುಂಡಪ್ಪ ಮಾತನಾಡಿ, ಹಿಂದುಳಿದ ವರ್ಗಗಳ ಆಶಾಕಿರಣವಾಗಿದ್ದ ದೇವರಾಜ್ ಅರಸು ಅವರ ಆದರ್ಶಗಳನ್ನು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ತಪ್ಪದೆ ಪಾಲಿಸಬೇಕಾಗಿದೆ ಎಂದರು.
ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಸ್.ವಿ.ಲೋಕೇಶ್ ಮಾತನಾಡಿ, ಸಾಮಾಜಿಕ ನ್ಯಾಯದ ಅಧಿಕಾರ ರಾಜ್ಯದಲ್ಲೇ ಕಂಡುಬಂದಿದ್ದು ಅರಸು ಆಡಳಿತದಲ್ಲಿ. ಅವರ ಆದರ್ಶಗಳ ಪ್ರೇರಣೆಯಿಂದ ರಾಜಕೀಯಕ್ಕೆ ಬಂದಿದ್ದು, ಅವರ ಕನಸನ್ನು ನನಸು ಮಾಡಬೇಕಾಗಿರುವುದು ನಮ್ಮಂತಹ ಹಿಂದುಳಿದ ವರ್ಗಗಳ ಮುಖಂಡರ ಕರ್ತವ್ಯವಾಗಿದೆ ಎಂದರು.
ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಜಯರಾಂ, ಟಿ.ಕೆ.ಅಶ್ವಥ್ ನಾರಾಯಣ್ ಗೌಡ, ರಾಜ್ಯ ಪರಿಷತ್‌ನ ಸದಸ್ಯ ಜಯರಾಂ, ಪ್ರಾ.ಶಿ.ಸಂ.ಅಧ್ಯಕ್ಷ ಮುನಿನಾರಾಯಣಪ್ಪ, ನರೇಶ್, ಶಿರಸ್ತೆದಾರ ಶ್ರೀನಿವಾಸ್ ಗುಪ್ತ, ಹರಿ, ಗ್ರಾಮ ಲೆಕ್ಕಿಗ ನಾರಾಯಣಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.