ಕೋಲಾರ

ಕೊಲೆ ಆರೋಪಿ ಬಂಧನಕ್ಕೆ ಒತ್ತಾಯಿಸಿ ಧರಣಿ

Published On :

ಕೋಲಾರ: ಪತ್ನಿ ಮತ್ತು ಮಗುವಿನ ಸಾವಿಗೆ ಕಾರಣನಾಗಿರುವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಜನವಾದಿ ಮಹಿಳಾ ಸಂಘಟನೆ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಕಳೆದ ಜುಲೈ 10 ರಂದು ಎಸ್.ಕೆ.ಸಂತೋಷ ಕುಮಾರ್ ಎಂಬುವರು ಪತ್ನಿ ವೀಣಾ ಮತ್ತು ಮಗಳು ದೀಪ್ತಿಯನ್ನು ಕೊಲೆ ನಡೆಡಿದ್ದು, ಪೊಲೀಸರು ಘಟನೆ ನಡೆದು 42 ದಿನ ಕಳೆದರೂ ಆರೋಪಿಯನ್ನು ಬಂಧಿಸುವಲ್ಲಿ ವಿಫಲವಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಶ್ರೀನಿವಾಸಪುರ ತಾಲೂಕಿನ ಯಲ್ದೂರು ಗ್ರಾಮದ ಬೀರಪ್ಪನವರ ಮಗಳು ವೀಣಾ ಅವರನ್ನು 2010 ಶ್ಯಾಗತ್ತೂರು ಗ್ರಾಮದ ಎಸ್.ಕೆ.ಸಂತೋಷ್ ಕುಮಾರ್‌ಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ 10 ಲಕ್ಷ ಬೆಲೆ ಬಾಳುವ ಒಡವೆ, ಬೆಂಗಳೂರಿನಲ್ಲಿ ಒಂದು ಮನೆ, ನಿವೇಶನ, 3 ಲಕ್ಷ ನಗದು ಸೇರಿದಂತೆ ಒಟ್ಟು 30 ಲಕ್ಷ ವೆಚ್ಚ ಮಾಡಿ ಮದುವೆ ಮಾಡಿಕೊಡಲಾಗಿತ್ತು.
ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ಗ್ರಂಥಪಾಲಕನಾಗಿ ಕೆಲಸ ನಿರ್ವಹಿಸುತ್ತಿರುವ ಕೆ.ಎಸ್.ಸಂತೋಷ್‌ಕುಮಾರ್ ಪ್ರಯಾಣಕ್ಕೆ ತೊಂದರೆ ಆಗದಿರಲಿ ಎಂದು ಕೋಲಾರ ನಗರದ ಕೀಲುಕೋಟಿಯಲ್ಲಿ ಮನೆ ಮಾಡಿಕೊಡಲಾಗಿತ್ತು. ವೀಣಾಳಿಗೆ ಹೆಣ್ಣು ಮಗುವಾದ ನಂತರ ಗಂಡ ಸಂತೋಷ್‌ಕುಮಾರ್, ಮಾವ, ಅತ್ತೆ, ಬಾವಂದಿರು ಮತ್ತು ನಾದಿನಿ ಸೇರಿಕೊಂಡು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಂತೋಷ್‌ಕುಮಾರ್ ತಂದೆ, ತಾಯಿ, ನಾದಿನಿ ಕೋರ್ಟ್‌ನಲ್ಲಿ ಜಾಮೀನು ಪಡೆದು ರಾಜರೋಷವಾಗಿ ಓಡಾಡಿಕೊಂಡಿದ್ದಾರೆ. ರಾಜಕೀಯ ಒತ್ತಡಗಳಿಗೆ ಮಣಿದು ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಆರೋಪಿಯನ್ನು ಬಂಧಿಸಿ ಮೃತ ವೀಣಾ ಮತ್ತು ಮಗು ದೀಪ್ತಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ವಿ.ಗೀತಾ, ಮೃತಳ ತಂದೆ ಬೀರಪ್ಪ, ತಾಯಿ ಸುನಂದಮ್ಮ, ಸುಶೀಲ, ಈಶ್ವರಮ್ಮ, ಭಾಗ್ಯಮ್ಮ, ಗಂಗಮ್ಮ, ಲಕ್ಷೀದೇವಿ ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.