ಕೋಲಾರ

ಶಾಸಕ ಮಂಜುನಾಥ್ ಆಡಳಿತ ಶ್ಲಾಘನೀಯ: ಕೆ.ವೈ. ನಂಜೇಗೌಡ

Published On :

ಮಾಲೂರು: ಶಾಸಕ ಮಂಜುನಾಥ್ ಗೌಡರ ನೂರು ದಿನಗಳ ತಾಲೂಕು ಆಡಳಿತ ಜನ ಮನ್ನಣೆ ಗಳಿಸಿದ್ದು, ಪಕ್ಷಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಕೆ.ವೈ. ನಂಜೇಗೌಡ ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಶಾಸಕರ ನೂರು ದಿನಗಳ ಆಡಳಿತ ಸಂಬಂಧ ಜೆಡಿಎಸ್ ಕಾರ್ಯಾಧ್ಯಕ್ಷ ಪಿ. ನಾರಾಯಣಸ್ವಾಮಿ ನೇತೃತ್ವದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದಿನ ಶಾಸಕರ 9 ವರ್ಷದ ದುರಾಡಳಿತ ತಡೆಯಬೇಕಾದರೆ ಒಬ್ಬ ಯುವಕನ ನಾಯಕತ್ವ ತಾಲೂಕಿಗೆ ಬೇಕಾಗಿದ್ದು, ಅದನ್ನು ಯುವ ಶಾಸಕ ಮಂಜುನಾಥ್ ಗೌಡ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು. ಜಿ.ಪಂ. ಮಾಜಿ ಸದಸ್ಯ ಹನುಮಂತಪ್ಪ, ಪುರಸಭೆ ಸದಸ್ಯ ಜಾಕೀರ್ ಖಾನ್, ಮುರಳೀಧರ್, ಪಚ್ಚಪ್ಪ, ಮಾಲಾದ್ರಿ, ನಾರಾಯಣಸ್ವಾಮಿ, ಅಪ್ತ ಸಹಾಯಕ ಪ್ರದೀಪ್ ಇದ್ದರು.

ಟೋಮೊಟೋ ಬೆಳೆಯಲ್ಲಿ ಸಮಗ್ರ ರೋಗ; ಸಂಶೋಧನೆ
ಟೇಕಲ್: ಬನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಟೋಮೊಟೋ ಬೆಳೆಯಲ್ಲಿ ಸಮಗ್ರ ರೋಗ, ಕೀಟಗಳ ಹತೋಟಿ ಬಗ್ಗೆ ಭೇಟಿ ನೀಡಿ ಸಂಶೋಧನೆ ನಡೆಸಿದರು. ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಈ ಗ್ರಾಮದ ರೈತರ ಜಮೀನುಗಳಿಗೆ ಪ್ರೊಫೆಸರ್ ಡಾ. ಬಿ. ಕೃಷ್ಣಮೂರ್ತಿ ನೇತೃತ್ವದ ತಂಡ ಕೀಟಬಾಧೆಯಿಂದ ನಷ್ಟ ಸಂಭವಿಸಿರುವ ಜಮೀನುಗಳಿಗೆ ಭೇಟಿ ನೀಡಿ ರೋಗದ ಮಾದರಿಗಳನ್ನು ಸಂಗ್ರಹಿಸಿಕೊಂಡು ಮಾದರಿ ಪರೀಕ್ಷೆಗಳನ್ನು ಪರೀಕ್ಷಿಸಿ ಸಮಸ್ಯೆಯನ್ನು ಭೇದಿಸಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ವಿವಿಯ ಶಿಬಿರಾರ್ಥಿಗಳಾದ ರಮೇಶ್, ಶಶಿಕುಮಾರ್, ಶಿವಶಂಕರ್, ಸುಧಾಕರ್, ಸುಮಂತ್, ಶಿಲ್ಪಶ್ರೀ ವಾಸ್ತವ್, ಶೃತಿ, ಶುಭ, ಶ್ವೇತ, ಸೌಮ್ಯ ಹಾಗೂ ಗ್ರಾಮದ ಮುಖಂಡರಾದ ಮುನಿಶಾಮಿಗೌಡ, ಗ್ರಾಪಂ ಸದಸ್ಯೆ ಸುಬ್ಬಮ್ಮ, ಪ್ರಗತಿಪರ ರೈತ ನಾಗೇಶ್ ಹಾಗೂ ಗ್ರಾಮದ ರೈತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.