ಚಿಂತಾಮಣಿ ನಗರಸಭೆ ಅಧ್ಯಕ್ಷ ಗಾದಿಗೆ ಲಾಬಿ
ವಿಶೇಷ ವರದಿ
ಚಿಂತಾಮಣಿ: ಚಿಂತಾಮಣಿ ನಗರಸಭೆಗೆ ಅಧ್ಯಕ್ಷ ಗಾದಿಗೆ ಹಲವರು ಲಾಬಿ ನಡೆಸುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ದೊಡ್ಡ ಜನಸಂಖ್ಯೆಯುಳ್ಳ ಹಾಗೂ ವಾಣಿಜ್ಯ ಕೇಂದ್ರವಾದ ಚಿಂತಾಮಣಿ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರ ಮೀಸಲಾತಿ ಪ್ರಕಟಿಸುತ್ತಿದ್ದಂತೆ ಹಲವರು ಅಧ್ಯಕ್ಷರಾಗಲು ಸಭೆಗಳನ್ನು ನಡೆಸಿ ಶತಾಯ ಗತಾಯ ಅಧ್ಯಕ್ಷರಾಗಲು ಲಾಬಿ ನಡೆಸುತ್ತಿದ್ದಾರೆ. ನಗರಸಭೆ ಅಧಿಕಾರಕ್ಕೆ ಬಂದಾಗಿನಿಂದಲೂ ಕಳೆದ 60 ವರ್ಷಗಳಿಂದ ಮಾಜಿ ಶಾಸಕ ಡಾ. ಎಂ.ಸಿ. ಸುಧಾಕರ್ ಕುಟುಂಬದ ಹಿಡಿತದಲ್ಲಿದ್ದ ನಗರಸಭೆಯನ್ನು ಪ್ರಪ್ರಥಮ ಬಾರಿಗೆ ಜೆಡಿಎಸ್ ಪಕ್ಷದ 16 ಸ್ಥಾನಗಳು ಪಡೆದು ನಗರಸಭೆ ಆಡಳಿತ ಮಾಡಲು ವೇದಿಕೆ ಸಿದ್ಧ ಮಾಡಿದೆ. ಬಿಸಿಎಂಎ ನಗರಸಭೆ ಅಭ್ಯರ್ಥಿಗಳಾದ ಅಲ್ಪಸಂಖ್ಯಾತರಲ್ಲಿ ಆಕಾಂಕ್ಷಿಗಳಾದ ವಾರ್ಡ್ ನಂ.2ರ ಅನ್ವರ್ ಉರುಪ್(ಅಣ್ಣು), 29ರ ಜಿಯಾವುಲ್ಲಾ ರೆಹಮಾನ್,17ರ ಮೊಹಮದ್ ಶಫಿಕ್, 11 ನಟರಾಜ್, 22 ಸುಜಾತಮ್ಮ ಶಿವಣ್ಣ, 28 ರಿಬಾನಾ, 26 ಜಮೀರ್ ಹತಾಜ್ ಈ 7 ಜನರು ಅಧ್ಯಕ್ಷ ಸ್ಥಾನಕ್ಕೆ ಅರ್ಹರಾಗಿರುತ್ತಾರೆ.
50-50ಯಂತೆ ಆಡಳಿತ ಹಂಚಿಕೆ: ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಜೆಡಿಎಸ್ನ ಎಲ್ಲಾ ನಗರಸಭೆ ಸದಸ್ಯರು ಒಮ್ಮತದಿಂದ ಶಾಸಕರಾಗಲು ಕಾರಣರಾದವರ ಪೈಕಿ ಈ ಇಬ್ಬರು ನಗರಸಭೆ ಸದಸ್ಯರಾದ ಎ.ಆರ್. ಅನ್ವರ್(ಅಣ್ಣು) ಮತ್ತು ಜಿಯಾವುಲ್ಲಾ ರೆಹಮಾನ್ ತಲಾ ಮೂರು ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆಗೊಂಡು ದಿವಂಗತ ಮಾಜಿ ಸಚಿವ ಕೆ.ಎಂ. ಕೃಷ್ಣಾರೆಡ್ಡಿ ಗರಡಿಯಲ್ಲಿ ಬೆಳೆದವರು.
ಆದ್ದರಿಂದ ಸರ್ಕಾರದ ಮೀಸಲಾತಿಯಂತೆ ಈ ಇಬ್ಬರೂ ಅಧ್ಯಕ್ಷ ಸ್ಥಾನಕ್ಕೆ ತೀವ್ರ ರಾಜಕೀಯ ಒತ್ತಡ ಹಾಗೂ ಚದುರಂಗ ಆಟದಲ್ಲಿ 15 ತಿಂಗಳಿನಂತೆ ಇಬ್ಬರಿಗೂ ಅಧ್ಯಕ್ಷ ಸ್ಥಾನ ಕಲ್ಪಿಸಲು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಸೇರಿದಂತೆ 16 ಸದಸ್ಯರ ಒಮ್ಮತದಿಂದ ಆಡಳಿತ ನಡೆಸಲು ವೇದಿಕೆ ಪೂರ್ವ ಸಿದ್ಧತೆಗಳು ತಯಾರಿ ನಡೆಯುತ್ತಿವೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಮತ್ತೊಂದು ಕಡೆ ಮಾಜಿ ಶಾಸಕ ಸುಧಾಕರ್ ಬೆಂಬಲಿತ 13 ಜನ ಸದಸ್ಯರೂ ಸಹ ಒಂದು ಕಡೆ ಸೇರಿ ಶತಾಯ ಗತಾಯ ನಗರಸಭೆ ಇತಿಹಾಸವನ್ನು ತೆರೆ ಎಳೆಯದಂತೆ ಅಧಿಕಾರ ಚುಕ್ಕಾಣಿ ಹಿಡಿಯಲು ಹಲವು ಸದಸ್ಯರಿಗೆ ಗಾಳ ಹಾಕುತ್ತಿರುವ ಬಗೆಯೂ ಜನರಲ್ಲಿ ಅಂತೆ ಕಂತೆಗಳು ನಡೆಯುತ್ತಿವೆ.
ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ತನ್ನ ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ನಗರಸಭೆಯ 31 ಸದಸ್ಯರ ಪೈಕಿ ಒಂದೇ ಸ್ಥಾನ ಕಾಂಗ್ರೆಸ್ನಲ್ಲಿ ಗೆದ್ದಂತಹ ವೆಂಕಟಗಿರಿ ಕೋಟೆಯ ಸದಸ್ಯೆ ತುಳಸಿ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಹರಾಗಿದ್ದಾರೆ.
ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಇದರಿಂದ ನಗರಸಭೆಯಲ್ಲಿಯೂ ಸಹ ಅಧಿಕಾರ ನಡೆಸಲು ಸಚಿವರು ತನ್ನ ಬೆರಳೆಣಿಕೆಯ ಬೆಂಬಲಿಗರಿಗೂ ಅಧಿಕಾರ ಕಲ್ಪಿಸುವಲ್ಲಿ ಮುಂದಾಗಿದ್ದಾರೆ. ಏನೇ ಆಗಲಿ ಚಿಂತಾಮಣಿ ನಗರಸಭೆ ಅಧ್ಯಕ್ಷರ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳಾದ ಎ.ಆರ್. ಅನ್ವರ್ ಉರುಪ್(ಅಣ್ಣು) ಮತ್ತು ಜಿಯಾವುಲ್ಲಾ ರೆಹಮಾನ್ ಈ ಇಬ್ಬರು ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿರುವುದರಿಂದ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೋ ಕಾದು ನೋಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

