ಹೊಟ್ಟೆಗೆ ನೀವೆಲ್ಲ ಏನು ತಿನ್ನುತ್ತೀರಿ? ಬಡವರ ಹೊಟ್ಟೆ ಮೇಲೆ ಹೊಡೀಬೇಡ್ರಿ..
ಶಿಡ್ಲಘಟ್ಟ: ಪಡಿತರ ಚೀಟಿಗಳ ವಿತರಣೆ ಹಾಗೂ ಪಡಿತರ ಆಹಾರ ಧಾನ್ಯಗಳ ವಿತರಣೆಯಲ್ಲಿ ಆಗಿರುವ ಲೋಪದೋಷಗಳು ಸದ್ಯಕ್ಕೆ ಪರಿಹಾರವಾಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಬಡವರ ಕಾರ್ಡ್ಗಳನ್ನೆಲ್ಲಾ ಕಿತ್ತುಹಾಕಿದ್ದೀರಿ, ಉದ್ದೇಶಪೂರ್ವಕವಾಗಿ ಬಡವರಿಗೆ ಎ.ಪಿ.ಎಲ್. ಕಾರ್ಡ್ಗಳನ್ನು ನೀಡಿದ್ದೀರಿ. ಕಳೆದ ತಿಂಗಳು ಅಕ್ಕಿ ಕೊಟ್ಟರು, ಈಗ ಕೊಡುತ್ತಿಲ್ಲ. ನೀವು ಹೊಟ್ಟೆಗೆ ಏನು ತಿನ್ನುತ್ತೀರಿ? ಬಡವರ ಹೊಟ್ಟೆ ಮೇಲೆ ಹೋಡಿಬೇಡ್ರಿ.. ಎನ್ನುವಂತಹ ಮಾತುಗಳು ಕೇಳಿ ಬಂದದ್ದು ಶಿಡ್ಲಘಟ್ಟ ತಾಲೂಕು ಕಚೇರಿಯ ಆಹಾರ ಇಲಾಖೆಯ ಕೊಠಡಿಯಲ್ಲಿ. ಅಸಮರ್ಪಕ ಪಡಿತರ ವ್ಯವಸ್ಥೆಯ ವಿರುದ್ಧ ಅಧಿಕಾರಿಗಳ ಮೇಲೆ ತಿರುಗಿ ಬಿದ್ದ ನಾಗರಿಕರ ಆಕ್ರೋಶದ ಮಾತುಗಳಿವು.
ಕಳೆದ ನಾಲ್ಕೈದು ತಿಂಗಳಿನಿಂದ ಬಯೋವುಟ್ರಿಕ್ ಆಗಿರುವ ಪಡಿತರ ಚೀಟಿಗಳೂ ಸೇರಿದಂತೆ 2008 ರ ನಂತರ ಫೋಟೊ ತೆಗೆಸಿರುವ ಸಾವಿರಾರು ಕಾರ್ಡ್ಗಳು ಪ್ರತಿ ತಿಂಗಳೂ ಇದ್ದಕ್ಕಿದ್ದಂತೆ ರದ್ದುಗೊಳ್ಳುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಆಹಾರ ಇಲಾಖೆ ಉಪನಿರ್ದೇಶಕರು ಸಮಸ್ಯೆಯನ್ನು ಪರಿಹರಿಸಲು ಮುಂದಾಗುತ್ತಿಲ್ಲ, ತಾಲೂಕಿನಲ್ಲಿ ಮಳೆಯಿಲ್ಲದೆ, ಬರಗಾಲ ಪೀಡಿತ ಪ್ರದೇಶವಾಗಿದ್ದು, ಕೂಲಿ ಕೆಲಸಗಳು ಸಿಗದೆ ಜನತೆ ಒಂದು ಹೊತ್ತಿನ ಊಟ ಹಾಗೂ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಹೋದರೆ ಆಹಾರ ಧಾನ್ಯಗಳು ಬಂದಿಲ್ಲವೆಂದಾಗ ಸಹಜವಾಗಿಯೆ ಕೆರಳುವ ನಾಗರಿಕರು ತಾಲೂಕು ಕಚೇರಿಯ ಬಯೋವುಟ್ರಿಕ್ ಕೇಂದ್ರಕ್ಕೆ ನುಗ್ಗಿ ದಾಂಧಲೆ ನಡೆಸಲು ಮುಂದಾದರು.
ಪೊಲೀಸರ ಮಧ್ಯಪ್ರವೇಶದಿಂದಾಗಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಮತ್ತೊಂದು ಗುಂಪು ಶಿರಸ್ತೆದಾರರ ಕೊಠಡಿಗೆ ತೆರಳಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಶಿರಸ್ತೇದಾರ ರಂಗನಾಥ್ಗೆ ಆಗಿರುವ ಲೋಪದೋಷಗಳ ಬಗ್ಗೆ ವಿವರಿಸಲೂ ಅವಕಾಶವನ್ನು ನೀಡದ ನಾಗರಿಕರು ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯ ಮಾಡಿದರು.
ಒಂದು ಹಂತದಲ್ಲಿ ಜನರನ್ನು ಓಲೈಸಲು ಸಾಧ್ಯವಾಗದ ಕಾರಣ ಅಸಹಾಯಕರಾಗಿ ಶಿರಸ್ತೇದಾರ ರಂಗನಾಥ್ ಕೊಠಡಿಯನ್ನು ಬಿಟ್ಟು ಹೊರಗೆ ಬರಬೇಕಾಯಿತು. ಪುರಸಭಾ ಸದಸ್ಯರೂ ಸೇರಿದಂತೆ ನಾಗರಿಕರು ತಾಲೂಕು ಕಚೇರಿಯ ಮುಂದೆ ಪಡಿತರ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಪ್ರತಿಭಟನೆಯನ್ನು ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

