ಲೋಕಾಯುಕ್ತ ಇನ್ಸ್ಪೆಕ್ಟರ್ ಮಂಜೇಗೌಡರಿಂದ ಸಾರ್ವಜನಿಕರ ಕುಂದುಕೊರತೆ ಪರಿಶೀಲನೆ
ಗುಡಿಬಂಡೆ: ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕುಂದುಕೊರತೆಗಳ ಸಭೆಯಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಮಂಜೇಗೌಡ ಸಾರ್ವಜನಿಕರು ನೀಡಿದ ಹಲವು ಕುಂದುಕೊರತೆ ಅರ್ಜಿಗಳ ಪರಿಶೀಲನೆ ನಡೆಸಿದರು.
ಮೊದಲಿಗೆ ವ್ಯಕ್ತಿಯೊಬ್ಬರಿಂದ ತಮಗೆ ಬೆದರಿಕೆಯಿದ್ದು, ಸೂಕ್ತ ರಕ್ಷಣೆ ಒದಗಿಸಬೇಕೆಂದು ಪಟ್ಟಣದ ನಿವಾಸಿ ಪಾರ್ವತಮ್ಮ ಹಾಗೂ ಸಂಬಂಧಿಕರು ನೀಡಿದ ಅರ್ಜಿ ಪರಿಶೀಲಿಸಿದ ಅಧಿಕಾರಿ ವಿಷಯದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು.
ಭೂಮಿ ಪರಿವರ್ತನೆಯಾಗಿದ್ದರೂ ಇನ್ನು ಕಂದಾಯ ಇಲಾಖೆಯ ದಾಖಲೆಗಳಲ್ಲಿ ನಮೂದಿಸಿಲ್ಲವೆಂದು ಮಾಲೀಕರಾದ ನರಸಿಂಹರೆಡ್ಡಿ, ಅಣ್ಣಮ್ಮ, ಇತರರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಅಧಿಕಾರಿ ಪರಿಶೀಲನೆ ನಡೆಸಿ ಪರಿಹಾರ ಒದಗಿಸುವುದಾಗಿ ತಿಳಿಸಿದರು.
ನಂತರ ಬಿಸಿಎಂ ಇಲಾಖೆಯ ವಸತಿ ನಿಲಯದಲ್ಲಿ ಶೌಚಾಲಯ ಕಾಮಗಾರಿ ವಿಳಂಬವಾಗಿದೆಯೆಂದು ತಿಮ್ಮಾರೆಡ್ಡಿ ಎಂಬುವವರು ನೀಡಿದ ದೂರಿಗೆ, ಸ್ಥಳ ತನಿಕೆ ಮಾಡಿ ಕ್ರಮಕೈಗೊಳ್ಳಲಾಗುತ್ತದೆಂದು ನುಡಿದರು.
ಅಂಗವಿಕಲ ವ್ಯಕ್ತಿಯಾದ ತಮಗೆ ಪ್ರಮಾಣ ಪತ್ರ ನೀಡಲು ಪಟ್ಟಣದ ಸರ್ಕಾರಿ ಆಸ್ಪೆತ್ರೆಯ ವೈದ್ಯರು ವಿಳಂಬ ಎಸಗುತ್ತಿದ್ದಾರೆಂದು ವ್ಯಕ್ತಿಯೊಬ್ಬರು ಅಧಿಕಾರಿ ಬಳಿ ತಮ್ಮ ನೋವನ್ನು ನಿವೇದಿಸಿಕೊಂಡರು. ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಕ್ತ ಸೂಚನೆ ನೀಡಿ ಸಮಸ್ಯೆ ನಿವಾರಿಸಲಾಗುವುದೆಂದು ಅಧಿಕಾರಿ ಭರವಸೆಯಿತ್ತರು.
ಸಭೆಯಲ್ಲಿ ತಹಸೀಲ್ದಾರ್ ಶೈಲಜಾ, ಶೀರಸ್ತೇದಾರ್ ಶೀಬತ್ತುಲ್ಲಾ, ಜಿ.ಪಂ. ಎಂಜಿನಿಯರ್ ಜ್ಯೋತಿಪ್ರಕಾಶ್ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

