ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ದೇಶೀ ಸಂಸ್ಕೃತಿ ದೂರ: ಶಿವಶಂಕರರೆಡ್ಡಿ
ಕ.ಪ್ರ.ವಾರ್ತೆ ಗೌರಿಬಿದನೂರು ಆ.29
ನಮ್ಮ ದೇಶದ ಸಂಸ್ಕೃತಿ ಪ್ರಧಾನವಾದ ಯಕ್ಷಗಾನ, ನಾಟಕ, ಜಾನಪದ ಕಲೆ ಮುಂತಾದವುಗಳಲ್ಲಿ ನಮ್ಮ ಸಮಾಜಕ್ಕೆ ಬೇಕಾದ ಸಂದೇಶ ಅಡಗಿರುತ್ತದೆ, ಇತ್ತೀಚೆಗೆ ನಾವು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ಸ್ವದೇಶೀ ಸಂಸ್ಕೃತಿಯನ್ನು ದೂರ ಮಾಡುತ್ತಿರುವುದು ದುರದೃಷ್ಟಕರ ಎಂದು ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ನುಡಿದರು.
ಅವರು ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಆವರಣದಲ್ಲಿ ಅನ್ನಪೂರ್ಣೇಶ್ವರಿ ಟ್ರಸ್ಟ್ ಹಾಗೂ ಮಾನಸ ನರ್ಸಿಂಗ್‌ಹೋಂ ಸಹಯೋಗದೊಂದಿಗೆ ನಡದ ಯಕ್ಷಗಾನ, ಸನ್ಮಾನ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಗೆ ಸಹಾಯ ಧನ ವಿತರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದಕ್ಷಣ ಕನ್ನಡ ಜಿಲ್ಲೆಯ ಪುತ್ತೂರಿನ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಲಿಯವರಿಂದ ಪ್ರದರ್ಶನಗೊಂಡ ಹಿರಣ್ಯಾಕ್ಷವಧೆ-ದ್ರೌಪದಿ ಪ್ರತಾಪ ಎಂಬ ಯಕ್ಷಗಾನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ರಾಮಾಯಣ, ಮಹಾಭಾರತದ ಕಥಾವಸ್ತು ಹಿನ್ನೆಲೆಯಲ್ಲಿರುವ ಕಲೆಗಳಲ್ಲಿ ಸಮಾಜಕ್ಕೆ ಬೇಕಾದ ಸಂದೇಶ ಇರುತ್ತೆ. ಇಂತಹ ಕಲೆಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ, ಗಂಡನ ಸ್ವಾಭಿಮಾನವನ್ನು ಎತ್ತಿಹಿಡಿಯಲು ಮಡದಿ ದ್ರೌಪದಿ ಮಾಡಿದ ಸಾಹಸ ಕೃತ್ಯಗಳನ್ನು ಬಿಂಬಿಸುವ ಯಕ್ಷಗಾನ ಕಲೆಯನ್ನು ಕೊಂಡಾಡಿದರು.
ಇಂತಹ ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಬೇಕಾದ ಹೊಣೆಗಾರಿಕೆ ಯುವಜನತೆ ಮೇಲಿದೆ, ಅಳಿವಿನಂಚಿಗೆ ಹೋಗುತ್ತಿರುವ ನಮ್ಮ ಸಾಂಪ್ರದಾಯಿಕ ಕಲೆಗಳನ್ನು ಪುನಶ್ಚೇತನ ಗೊಳಿಸಬೇಕಾಗಿದೆ. ನಮ್ಮ ಜೀವನ ಸುಖಮಯವಾಗಿರಲು ಕಲೆಯಿಂದ ಉಲ್ಲಾಸ ಹೊಂದಬೇಕಾಗಿದೆ, ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳ ಬೇಕಾಗಿದೆ ಎಂದರು. ಪಟ್ಟಣ ಮಧ್ಯಭಾಗದಲ್ಲಿ ನಿರ್ಮಾಣವಾಗುತ್ತಿರುವ ಡಾ.ಹೆಚ್.ಎನ್. ಕಲಾಭವನಕ್ಕೆ ಈಗಾಗಲೇ 3 ಕೋಟಿ ರು.ಗಳ ವೆಚ್ಚವಾಗಿದೆ, ಇನ್ನೂ ಎರಡು ಕೋಟಿ ರು. ಕಾಮಗಾರಿ ನಡೆಯಬೇಕಾಗಿದೆ ಎಂದರು.
ಅನ್ನ ಪೂರ್ಣೇಶ್ವರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪಿ. ರಾಮಕೃಷ್ಣಕುಮಾರ್, ಎಸಿಸಿ ಸಿಮೆಂಟು ಕಾರ್ಖಾನೆಯ ನಿರ್ದೇಶಕರಾದ ರಜತ್‌ಪೃಷ್ಟಿ, ಮಾನಸ ಮೆಡಿಕಲ್ ಟ್ರಸ್ಟ್ ಅಧ್ಯಕ್ಷ ಡಾ. ಶಶಿಧರ್, ಅವರ ಧರ್ಮ ಪತ್ನಿ ಡಾ.ರತ್ನಾ ಶಶಿಧರ್, ಚಿದಾನಂದ ಕಾಮತ್ ಮಾತನಾಡಿದರು.
ಹಿರಿಯರಾದ ಜಿ.ವಿ. ಕೃಷ್ಣಮೂರ್ತಿ, ದೇವನಹಳ್ಳಿಯ ವೈದ್ಯರಾದ ಮಕ್ಕಳ ತಜ್ಞ ಡಾ. ನರಸಾರೆಡ್ಡಿ ಅವರನ್ನು ಸಹಾ ಸನ್ಮಾನಿಸಲಾಯಿತು. ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಚೆಕ್ ಮೂಲಕ ಸಹಾಯ ಧನವನ್ನು ವಿತರಿಸಲಾಯಿತು.
ಯಕ್ಷಗಾನ ಕಲೆಯಲ್ಲಿ ರಾಜ್ಯ ಪ್ರಶಸ್ತಿ ವಿಜೇತರಾದ ಡಾ. ಶ್ರೀಧರ್ ಭಂಡಾರಿ, ಪದ್ಯಾನ ಗಣಪತಿ ಭಟ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

