ಕೋಲಾರ

ಲಂಗು ಲಗಾಮಿಲ್ಲದ ಆಟೋಗಳಿಗೆ ಕಡಿವಾಣ ಹಾಕಿ

Published On :

ಎನ್. ಬಾಬು
ಚಿಂತಾಮಣಿ; ಅಪಘಾತ ಮತ್ತು ಅಪರಾಧಗಳನ್ನು ತಡೆಯಲು ನಗರ ಪೊಲೀಸರು ಕಾನೂನು ಬಾಹಿರವಾಗಿ ಸಂಚರಿಸುತ್ತಿರುವ ತ್ರಿಚಕ್ರವಾಹನಗಳ ಮೇಲೆ ಕಾರ್ಯಚರಣೆ ನಡೆಸದಿರುವ ಬಗ್ಗೆ ನಾಗರಿಕರು ಅಸಮದಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ನಗರ ವೇಗವಾಗಿ ಬೆಳೆಯುತ್ತಿದೆ. ನಗರ ಪ್ರದೇಶಗಳಲ್ಲಿ ಕಾನೂನು ಬಾಹಿರವಾಗಿ ತ್ರಿಚಕ್ರವಾಹನಗಳು ಸಂಚರಿಸಿ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಹಲವು ಆಟೋ ಚಾಲಕರು ಸಮವಸ್ತ್ರ ಇಲ್ಲದೆ, ಪರವಾನಿಗೆ ಇಲ್ಲದೆ ನಗರದಲ್ಲಿ ರಾಜಾರೋಷವಾಗಿ ಚಾಲನೆ ಮಾಡಿ ಹಲವು ಅಪಘಾತಗಳನ್ನು ಮಾಡಿ ವಾಹನಗಳ ಸಮೇತ ಪರಾರಿಯಾಗುತ್ತಿದ್ದಾರೆ. ರಾತ್ರಿ 10 ಗಂಟೆಯ ಮೇಲೆ ಬೆಂಗಳೂರು-ಮದನಪಲ್ಲಿ ಸೇರಿದಂತೆ ಹೊರ ಊರುಗಳಿಂದ ಬರುವ ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ನೂರಾರು ಪ್ರಯಾಣಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಂದ ಪೊಲೀಸರು ಎಚ್ಚೆತ್ತುಕೂಂಡು ನಗರದಲ್ಲಿ ಕಾರ್ಯಚರಣೆ ಮುಂದುವರಿಸದೆ ಮೀನಮೇಷ ಎನಿಸುತ್ತಿದ್ದಾರೆ.
ಮದ್ಯಪಾನ ಸೇವಿಸಿ ಪ್ರಯಾಣಿಕರಿಗೆ ಕಿರಿಕಿರಿ: ರಾತ್ರಿ ವೇಳೆ ಮದ್ಯಪಾನ ಮಾಡಿ ಪ್ರಯಾಣಿಕರಿಗೆ ಕಿರಿಕಿರಿ ಮಾಡುತ್ತಿರುವ ಚಾಲಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷ ಜಿ. ಶ್ರೀನಿವಾಸ್ ಪೊಲೀಸರಿಗೆ ಒತ್ತಾಯಿಸಿದ್ದಾರೆ. ನಗರದಲ್ಲಿ ನೂರಾರು ಆಟೋಗಳಿಗೆ ಪರವಾನಿಗೆ ಇಲ್ಲದೆ, ಸೀಮೆಎಣ್ಣೆ ಹಾಕಿಕೊಂಡು ಓಡಾಡುವ, ಹಲವು ವಾಹನಗಳಿಗೆ ನೊಂದಣಿ ಸಂಖ್ಯೆ ಇಲ್ಲ, ಜನನಿಬಿಡ ಪ್ರದೇಶಗಳಲ್ಲಿ ಬಾರಿ ಶಬ್ದದೊಂದಿಗೆ ಹೋಗುತ್ತಿದ್ದರೂ ಸ್ಥಳೀಯ ಪೊಲೀಸರು ಪರಿಸರ ಮಾಲಿನ್ಯ ಹಾಳು ಮಾಡುವ ಆಟೋ ವಾಹನಗಳಿಗೆ ಕಡಿವಾಣ ಹಾಕಲು ಮುಂದಾಗಿಲ್ಲ.
 ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಹಲವು ಅಪರಿಚಿತ ವ್ಯಕ್ತಿಗಳು ಆಟೋ ಮಾಲೀಕರಿಂದ ಆಟೋ ಪಡೆದು, ಸಮವಸ್ತ್ರ, ಪರವಾನಿಗೆ ಇಲ್ಲದೆ ನಗರದ ಪ್ರದೇಶಗಳಲ್ಲಿ ವಾಹನ ಚಾಲನೆ ಮಾಡುತ್ತಿರುವ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಹಲವು ಆಟೋ ಚಾಲಕರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.