ಅಂತರಗಂಗೆಯಲ್ಲಿ ಸಾವಿರಾರು ಭಕ್ತರಿಂದ ವಿಶ್ವನಾಥ ದರ್ಶನ
ಕನ್ನಡಪ್ರಭ ವಾರ್ತೆ,ಕೋಲಾರ, ಡಿ.2
ದಕ್ಷಿಣ ಕಾಶೀ ಎಂದೇ ಪ್ರಸಿದ್ಧಿ ಪಡೆದಿರುವ ಅಂತರಗಂಗೆ ಬೆಟ್ಟದಲ್ಲಿನ ಶ್ರೀ ವಿಶ್ವನಾಥನಿಗೆ ಕಡೆ ಕಾರ್ತಿಕ ಸೋಮವಾರ ಪ್ರಯುಕ್ತ ವಿಶೇಷ ಪೂಜೆ, ಅಲಂಕಾರ ಹಾಗೂ ಜಾತ್ರೆ ಏರ್ಪಡಿಸಲಾಗಿತ್ತು.
ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಭಕ್ತರಿಗೆ ಬೆಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲದಿರುವುದರಿಂದ ಬಜರಂಗ ದಳದ ವತಿಯಿಂದ ಹಾಗೂ ದಾನಿಗಳಿಂದ ನೀರಿನ ಪ್ಯಾಕೇಟ್‌ಗಳನ್ನು ವಿತರಣೆ ಮಾಡಲಾಯಿತು.
ಸಮಾಜ ಸೇವಕ ವೆಂಕಟೇಶ್ ಹಾಗೂ ಇನ್ನಿತರರು ಬೆಟ್ಟದ ತೊಪ್ಪಲಿನಲ್ಲಿರುವ ಜಲ ಕಂಠೇಶ್ವರ ಸನ್ನಿದಿಯ ಬಳಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ನಗರದ ಬಸ್‌ನಿಲ್ದಾಣ ನಿವೃತ್ತದಿಂದ ಬೆಟ್ಟಕ್ಕೆ ಉಚಿತವಾಗಿ ಬಸ್ ಹಾಗೂ ಟೆಂಪೋಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಓಡಿಸಲಾಯಿತು.
ಬಜರಂಗ ದಳದ ನೂರಾರು ಕಾರ್ಯಕರ್ತರು ಜಾತ್ರೆಯಲ್ಲಿ ಭಾಗವಹಿಸಲು ಬಂದಿದ್ದ ಜನರಿಗೆ ಬೆಟ್ಟಕ್ಕೆ ಹೋಗಲು ಮಾರ್ಗದರ್ಶನ ಹಾಗೂ ಸಹಾಯ ಮಾಡಿದರು. ಪೊಲೀಸರು ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರಾದರೂ ಪುಂಡರು ಹುಡುಗಿಯರನ್ನು ಚುಡಾಯಿಸುತ್ತಿದ್ದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.
ಬೆಳಿಗ್ಗೆ 6 ಗಂಟೆಯಿಂದಲೇ ಭಕ್ತರು ದೇವರ ದರ್ಶನಕ್ಕೆ ಬೆಟ್ಟ ಹತ್ತಿದರು. ಸಂಜೆ ಆರು ಗಂಟೆಯೊಳಗೆ ಭಕ್ತರು ಬೆಟ್ಟದಿಂದ ಖಾಲಿ ಆಗುವರೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ರಾತ್ರಿ 8 ಗಂಟೆಯ ನಂತರವೂ ಸುಮಾರು 3 ಸಾವಿರಕ್ಕೂ ಹೆಚ್ಚು ಭಕ್ತರು ದೇವರ ಸನ್ನದಿಯಲ್ಲಿ ಇದ್ದು ದರ್ಶನಕ್ಕೆ ಕಾಯುತ್ತಿದ್ದರು.
ಇದೇ ಸಮಯಕ್ಕೆ ಬೆಸ್ಕಾಂನವರು ಲೋಡ್‌ಶೆಡ್ಡಿಂಗ್ ನೆಪದಲ್ಲಿ ಕರೆಂಟ್ ತೆಗೆದಿದ್ದರಿಂದ ಹೊರ ಊರುಗಳಿಂದ ಬಂದಿದ್ದ ಭಕ್ತರು ಅದರಲ್ಲೂ ಮಹಿಳೆಯರು ಪುಂಡರ ಕಾಟದಿಂದ ಬೆಚ್ಚಿ ಬೀಳುವಂತಾಯಿತು. ಕೆಲ ಮಹಿಳೆಯರು ಪುಂಡರ ಬಗ್ಗೆ ಪೊಲೀಸರಿಗೆ ದೂರು ನೀಡಿದರಾದರೂ ಕತ್ತಲಲ್ಲಿ ಅವರನ್ನು ಪತ್ತೆ ಮಾಡಲು ಕಷ್ಟವಾಯಿತು. ಈ ಬಾರಿ ಪುಷ್ಕರಣಿಯ ಬಳಿ ಜನರು ಹೋಗುವುದನ್ನು ನಿಯಂತ್ರಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಶಾಸಕ ವರ್ತೂರ್ ಪ್ರಕಾಶ್ ಅವರು ನಗರ ಬಸ್‌ನಿಲ್ದಾಣ ಬಳಿ ಜಾತ್ರೆಗೆ ಚಾಲನೆ ನೀಡಿದರು. ಬಜರಂಗ ದಳದ ಬಾಬು, ಬಾಲಾಜಿ, ಅಪ್ಪಿ, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ರಘುರಾಮರೆಡ್ಡಿ, ವರ್ತೂರ್ ಬಣದ ಮುಖಂಡ ಬೆಗ್ಲಿ ಸೂರ್ಯ ಪ್ರಕಾಶ್, ಬಿಜೆಪಿ ಮುಖಂಡ ಡಿ.ಆರ್.ನಾಗರಾಜು, ಡಾ. ಶಿವಣ್ಣ, ತ್ಯಾಗರಾಜ್ ಮುದ್ದಪ್ಪ, ಬಿ.ಆರ್.ಎಂ. ಸಂತೋಷ್, ಮುಂಜುನಾಥ್ ಮುದ್ದಪ್ಪ, ಕಂಬೋಡಿ ನಾರಾಯಣಸ್ವಾಮಿ, ರಾಜೇಂದ್ರ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

