ಕೋಲಾರ

ಗುಳಿ ರಾಗಿ ಪದ್ಧತಿಯಲ್ಲಿ ಹೆಚ್ಚು ಲಾಭ

Published On :

ಮಾಲೂರು; ಕಡಿಮೆ ಬಿತ್ತನೆ ಬೀಜ ಬಳಸಿ ಗುಳಿ ರಾಗಿ ಪದ್ಧತಿಯಲ್ಲಿ ಕೃಷಿ ಅಭ್ಯಾಸ ಮಾಡುವುದರಿಂದ ರೈತರು ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಪ್ರಗತಿ ಪರ ರೈತ ಗುಡ್ನಹಳ್ಳಿ ವೆಂಕಟೇಶಪ್ಪ ಹೇಳಿದರು.
ಸ್ಥಳೀಯ ಬೆಳಕು ಸಂಸ್ಥೆ ತಾಲೂಕಿನ ಕಣವೇನಹಳ್ಳಿ ಹನುಮಾನ ಕೃಷಿ ಕ್ಷೇತ್ರದಲ್ಲಿ ನಬಾರ್ಡ್ ಸಂಸ್ಥೆಯ ಸಹಕಾರದಿಂದ ಅನುಷ್ಠಾನಗೊಂಡಿರುವ ಸುಸ್ಥಿರ ರಾಗಿ ಯೋಜನೆ ಅಡಿಯಲ್ಲಿ ಕೈಗೊಂಡ ಅಧ್ಯಯನ ಪ್ರವಾಸದಲ್ಲಿ ಮಾತನಾಡಿ, ಗುಳಿ ಪದ್ಧತಿಯ ರಾಗಿ ಕೃಷಿ ರೈತರಿಗೆ ವರದಾನವಾಗಿದ್ದು, ರೈತರು ಹೆಚ್ಚು ತೆನೆಯುಳ್ಳ ಬೆಳೆ ಬೆಳೆಯಬಹುದಾಗಿದೆ. ಕಡಿಮೆ ನೀರಿನಲ್ಲಿ, ಕಡಿಮೆ ವೆಚ್ಚ ವ್ಯಯವಾಗಲಿದೆ ಎಂದರು. ಹನುಮಾನ ಕೃಷಿ ಕ್ಷೇತ್ರದ ಹನುಮಂತಪ್ಪ ಮಾತನಾಡಿ, ನೂತನ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೊದಲು ರೈತ ಹಾಗೂ ಅತನ ಕುಟುಂಬದ ಮನೋಭಾವನೆ ಬದಲಾವಣೆಯಾಗಬೇಕಾಗಿದೆ. ಕೃಷಿಯಲ್ಲಿನ ಹೊಸ ಅವಿಷ್ಕಾರ ಬಗ್ಗೆ ಅಸಡ್ಡೆ ತೋರಿಸದೆ ಅನುಷ್ಠಾನಗೊಳಿಸುವ ಕಡೆ ಗಮನ ಹರಿಸಬೇಕು ಎಂದರು.
ಸಮಾರಂಭಕ್ಕೆ ವಿವಿಧ ಗ್ರಾಮಗಳಿಂದ ಬಂದಿದ್ದ 80 ಕ್ಕೂ ಹೆಚ್ಚು ರೈತ ಹಾಗೂ ರೈತ ಮಹಿಳೆಯರಿಗೆ ಸುಸ್ಥಿರ ರಾಗಿ ಯೋಜನೆಯಡಿ ರಾಗಿ ಗುಳಿ ಪದ್ಧತಿ ಬಗ್ಗೆ ಬೆಳಕು ಸಂಸ್ಥೆ ಯ ಯೋಜನಾ ಸಂಯೋಜನಾಧಿಕಾರಿ ಮಂಜುನಾಥ್ ಜವಳಿ ಮಾಹಿತಿ ನೀಡಿದರು. ಬೆಳಕು ಸಂಸ್ಥೆಯ ಆಂಜಿನಮ್ಮ, ಅಣ್ಣಪ್ಪ, ಅಂಜಿನಪ್ಪ ಇದ್ದರು. ನಂತರ ಬ್ಯಾಟರಾಯನ ಹಳ್ಳಿಯ ಸಂದರ್ ರಾವ್ ರಾಗಿ ಹೊಲದಲ್ಲಿ ಕ್ಷೇತ್ರೋತ್ಸವ ಅಚರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.