ಫುಟ್ಪಾತ್ ತೆರವು ನೋಟಿಸ್; ವ್ಯಾಪಾರಿಯಿಂದ ಮಾತಿನ ಚಕಮಕಿ
ಕೋಲಾರ: ನಗರದಲ್ಲಿ ರಸ್ತೆ ಹಾಗೂ ಫುಟ್ಪಾತ್ ಒತ್ತುವರಿಯಿಂದ ಸುಗಮ ಸಂಚಾರಕ್ಕೆ ಆಗುತ್ತಿರುವ ಅಡ್ಡಿ ನಿವಾರಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ಇದಕ್ಕೆ ಬೆಂಬಲ ನೀಡಬೇಕಾದ ಜನರೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಪೊಲೀಸರು ಕೈಚಲ್ಲಿ ಕುಳಿತುಕೊಳ್ಳುವಂತಾಗಿದೆ.
ಸೋಮವಾರ ಗಲ್ ಪೇಟೆ ಪೊಲೀಸರು ಎಂಬಿ ರಸ್ತೆಯ ಆಟೋ ಮೊಬೈಲ್ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿ ರಸ್ತೆಗಳಲ್ಲಿ ಬೈಕ್ಗಳ ರಿಪೇರಿ ಮಾಡುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತದೆ, ಜೊತೆಗೆ ಫುಟ್ಪಾತ್ ಒತ್ತುವರಿಯಿಂದ ಪಾದಚಾರಿಗಳು ರಸ್ತೆ ಮೇಲೆ ನಡೆಯುವಂತಾಗಿದೆ ಎಂದಾಗ ಕೆಲವರು ಯಾವುದೇ ಪ್ರತಿಕ್ರಿಯೆ ಇಲ್ಲದೆ ನೋಟಿಸ್ ಸ್ವೀಕರಿಸಿದರೆ ಕೆಲವರು ಸ್ವೀಕರಿಸದೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.
ಇದನ್ನು ಗಮನಿಸಿದ ಪ್ರಜ್ಞಾವಂತ ವ್ಯಾಪಾರಿಗಳು ಪೊಲೀಸರೊಂದಿಗೆ ಜಗಳ ಮಾಡಿದ ವ್ಯಾಪಾರಿಗೆ ಗ್ರಹಚಾರ ಬಿಡಿಸಿದರು. ಗಲ್ ಪೇಟೆ ಪೊಲೀಸ್ ವೇಣು ಜೊತೆ ಮಾತಿನ ಚಕಮಕಿ ನಡೆಸಿದ ವ್ಯಾಪಾರಿಯ ಮೇಲೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದರಾದರೂ ಪಿಎಸ್ಐ ಲಿಯಾಖತ್ ಪರಿಸ್ಥಿತಿ ಅರಿತು ದುಡುಕಿನ ನಿರ್ದಾರಕ್ಕೆ ಮುಂದಾಗದೆ, ನೋಟಿಸ್ ಸ್ವೀಕರಿಸದಿದ್ದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

