ಬಾಲಕಾರ್ಮಿಕ ಪದ್ಧತಿ: ಕಠಿಣ ಕ್ರಮ ಎಚ್ಚರಿಕೆ
ಮುಳಬಾಗಲು: ಮಕ್ಕಳಿಂದ ಕೆಲಸ ಮಾಡಿಸುವುದು ಕಾನೂನಿನಂತೆ ಅಪರಾಧವಾಗಿದ್ದು, ಇಂತಹ ಕೆಲಸ ಮಾಡಿಸುವ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಜೆಎಂಎಫ್ಸಿ ಪ್ರಧಾನ ಸಿವಿಲ್ನ್ಯಾಯಧೀಶ ಓಂಕಾರಮೂರ್ತಿ ಹೇಳಿದರು.ಪಟ್ಟಣದ ಹಳೇ ತಾಲೂಕು ಕಚೇರಿ ಅವರಣದಲ್ಲಿ ನಡೆದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ಕಾನೂನು ಅರಿವು, ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಬೀಜ ಮತ್ತ ರಸಗೊಬ್ಬರ ಮಾರಾಟಗಾರರ ಸಂಘ, ಕೋಲಾರ ಜಾಗೃತಿ ಸೇವಾ ಸಂಸ್ಥೆ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಸಿವಿಲ್ನ್ಯಾಯಧೀಶ ಎನ್. ರಾಜು ಬಾಲಕಾರ್ಮಿಕ ಪದ್ಧತಿಯ ಭೀಕರತೆಯನ್ನು ಅವಾವರಣಗೊಳಿಸುವ ಛಾಯಚಿತ್ರ ಹಾಗೂ ಸಾಕ್ಷಚಿತ್ರವನ್ನು ಉದ್ಪಾಟಿಸಿದರು. ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಿವೈಎಸ್ಪಿ ಟೆ. ಸಿದ್ದಪ್ಪಪದ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್. ಪ್ರಭಾಕರ್, ಜಿಲ್ಲಾ ಕಾರ್ಮಿಕ ಅಧಿಕಾರಿ ರಾಜಗೋಪಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ದೇವರಾಜ್, ಪುರಸಭೆ ಮುಖ್ಯಾಧಿಕಾರಿ ಅಶೋಕ್ ಕುಮಾರ್, ವಕೀಲ ಶ್ರೀನಿವಾಸರೆಡ್ಡಿ, ಕಾರ್ಮಿಕಾಧಿಕಾರಿ ಪಿ.ಎಚ್. ಜಯಶಂಕರ್ ಇದ್ದರು.
ರಸ್ತೆ ಅಪಘಾತ; ಮಹಿಳೆ ಸಾವು
ಗೌರಿಬಿದನೂರು: ಚಿಕ್ಕಕುರುಗೋಡು ಸಮೀಪ ಬೆಂಗಳೂರು ಕಡೆಯಿಂದ ಹಿಂದೂಪುರದ ಕಡೆ ವೇಗವಾಗಿ ಬಂದ ಟಾಟಾ ಇಂಡಿಕಾ ಕಾರು ನರಸಮ್ಮ(55)ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಗ್ರಾಮದ ಜನತೆ ಕಾರನ್ನು ಹಿಂಬಾಲಿಸಿದರಾದರು ಚಾಲಕ ವೇಗವಾಗಿ ಕಾರನ್ನು ಚಾಲಿಸಿ ಪರಾರಿ ಆಗಿದ್ದಾನೆ. ಇತ್ತೀಚಿಗೆ ಇಲ್ಲಿ ಇಂತಹದೇ ಅಪಾಘಾತ ಸಂಭವಿಸಿದ್ದು, ಯುವಕ ಸಾವನ್ನಪ್ಪಿದ್ದನು. ಆದ್ದರಿಂದ ಇಲ್ಲಿ ರಸ್ತೆ ಉಬ್ಬು ಹಾಕಬೇಕೆಂದು ಗ್ರಾಮಸ್ಥರು ಧರಣಿ ನಡಿಸಿದರು. ರಾತ್ರಿ ಗ್ರಾಮಾಂತರ ಪಿಎಸ್ಐ ಶಿವಕುಮಾರ್ ಸ್ಥಳಕ್ಕೆ ಹೋಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದರಿಂದ ಧರಣಿ ಹಿಂಪಡೆದರು. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದು ವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

