ರೈತನ ಸಾವಿಗೆ ಸರ್ಕಾರವೇ ಹೊಣೆ; ಎಬಿವಿಪಿ
ಕೆಜಿಎಫ್: ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಬೆಳಗಾವಿಯ ರೈತ ವಿಠಲ ಅರಬಾವಿಯ ಸಾವಿಗೆ ಕಾರಣ ಎಂದು ಆರೋಪಿಸಿ ಎಬಿವಿಪಿ ವತಿಯಿಂದ ಬೇತಮಂಗಲ ಗ್ರಾಮದ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನಾಕಾರರು ಮಾತನಾಡಿ, ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಮಯದಲ್ಲಿ ಕಬ್ಬು ಬೆಳೆಗಾರರಿಗೆ ನಿಗದಿತ ಬೆಲೆಯನ್ನು ಸರ್ಕಾರ ಘೋಷಿಸಬೇಕು ಎಂದು ಒತ್ತಾಯಿಸಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಅವರ ಸಂಕಷ್ಟದ ಬಗ್ಗೆ ಯಾವುದೇ ಚಿಂತನೆ ನಡೆಸದ ರಾಜ್ಯ ಸರ್ಕಾರದ ಉದಾಸೀನ ಧೋರಣೆಯಿಂದ ಇಂದು ಒಬ್ಬ ಅಮಾಯಕ ರೈತ ಬಲಿಯಾಗಿದ್ದಾನೆ. ಇದೇ ರೀತಿ ರೈತರ ಬಗ್ಗೆ ಮತ್ತು ಅವರ ಬೇಡಿಕೆಗಳಿಗೆ ಸ್ಪಂದಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಆಗಬಹುದಾದ ಅನಾಹುತಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದರು. ರೈತ ವಿಠಲ ಅರಬಾವಿ ಅವರ ಕುಟುಂಬಕ್ಕೆ 18 ಲಕ್ಷ ಪರಿಹಾರ ನೀಡಬೇಕು. ಕಬ್ಬು ಬೆಳೆಗೆ ನಿಗದಿತ ಬೆಲೆಯನ್ನು ಈ ಕೂಡಲೇ ಘೋಷಿಸಬೇಕು. ರಾಜ್ಯಾದ್ಯಾಂತ ರೈತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ಸುನೀಲ್ಕುಮಾರ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಗರ ಕಾರ್ಯದರ್ಶಿ ಬಸವರಾಜ್, ವಿದ್ಯಾರ್ಥಿಗಳಾದ ಸುಬ್ರಮಣಿ, ಸುರೇಶ್, ರಾಜೇಂದ್ರ, ವೀಣಾ, ಮಾಲಶ್ರೀ, ದಿವ್ಯ, ಮಮತ, ಶಂಕರ್, ಗೌತಮ್, ಚರಣ್, ನಾರಾಯಣಸ್ವಾಮಿ ಸೇರಿದಂತೆ ಇತರರಿದ್ದರು.
ಅಕ್ರಮಗಳ ತನಿಖೆಗೆ ಆಗ್ರಹಿಸಿ ಗ್ರಾಪಂಗೆ ಬೀಗ
ಚಿಂತಾಮಣಿ: ಕೈವಾರ ಗ್ರಾಪಂನಲ್ಲಿ ನಡೆದಿರುವ ಅಕ್ರಮಗಳನ್ನು ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಕಾರ್ಯಕರ್ತರು ಆಗ್ರಹಿಸಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಕೈವಾರ ಗ್ರಾಪಂ ಪಿಡಿಒ ಶಂಕರಪ್ಪ ಹಿಂದೆ ಕರ್ತವ್ಯ ಲೋಪ ಎಸಗಿರುವುದಾಗಿ ಮತ್ತು ಗ್ರಾಪಂ ಎಲ್ಲಾ ಸದಸ್ಯರ ಸಭೆ ಏಕ ಪಕ್ಷೀಯವಾಗಿ ಗ್ರಾಮ ಲೆಕ್ಕಿಗ ಚಿನ್ನಪ್ಪ ಎಂಬವರನ್ನು ಆಯ್ಕೆ ಮಾಡಿರುವುದನ್ನು ವಿರೋಧಿಸಿ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪಿಡಿಒ ಅಮಾನತ್ಗೆ ಆಗ್ರಹ; ಲಕ್ಷಾಂತರ ರುಪಾಯಿ ಹಗರಣದ ಆರೋಪ ಹೊತ್ತಿರುವ ಪಿಡಿಒರನ್ನು ಕೂಡಲೇ ಅಮಾನತ್ ಪಡಿಸಬೇಕೆಂದು ಆಗ್ರಹಿಸಿ ಗ್ರಾಪಂ ಮುಂಭಾಗದಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ. ಪಕ್ಷದ ಸುಬ್ಬಾರೆಡ್ಡಿ, ಗ್ರಾಪಂ ಸದಸ್ಯರಾದ ಶೈಲಜಾ ಮಂಜುನಾಥ್, ಉಮಾದೇವಿ, ರಾಮಚಂದ್ರಪ್ಪ, ಬನಹಳ್ಳಿ ರವಿ, ಚಾಂದ್ ಪಾಷ, ಆಟೋ ರವಿ, ಆಂಜನಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

